1 ರು ಮುಖಬೆಲೆಯಂತೆ ಎಸ್ ಬಿಐ ಷೇರು ಏರಿಳಿತ!

ಮುಂಬೈ, ನ.20: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಗುರುವಾರ 1 ರು ಮುಖಬೆಲೆಯಂತೆ ಷೇರುಪೇಟೆಯಲ್ಲಿ ಏರಿಳಿತ ಆರಂಭಿಸಿದೆ. ನ.19ರ ತನಕ 2900 ರು ನಷ್ಟಿದ್ದ ಷೇರುಗಳ ಮುಖಬೆಲೆ ಈಗ ತನ್ನ ಮೌಲ್ಯವನ್ನು ತುಂಡರಿಸಿಕೊಂಡು 10 ರು ಗೆ ಇಳಿಸಿಕೊಂಡಿದೆ.

ಹೀಗಾಗಿ 1:10 ಅನುಪಾತದ ವಿಭಜನೆಯಿಂದಾಗಿ ಗುರುವಾರ ಎಸ್ ಬಿಐ ಷೇರುಗಳು ಶೇ 80-90 ರಷ್ಟು ಇಳಿಕೆ ಕಂಡು ನಂತರ ಚೇತರಿಸಿಕೊಂಡಿತು. 10 ರು ಮುಖಬೆಲೆಗೆ ಎಸ್ ಬಿಐ ಷೇರು ಹೇಗೆ? ಏಕೆ? ಎಂದು ಸಾರ್ವಜನಿಕರು ಹುಬ್ಬೇರಿಸಬಹುದು. ಅದರೆ, ಇದು ನಿರೀಕ್ಷಿತವಾಗಿತ್ತು.

1 ರು ಮುಖಬೆಲೆಯಂತೆ ಎಸ್ ಬಿಐ ಷೇರು ಏರಿಳಿತ!
State Bank of India: Quotes, News
BSE 1036.15BSE Quote14.5 (-1.40%)
NSE 1036.00NSE Quote13.9 (-1.34%)

ಕಳೆದ ಒಂದು ವರ್ಷದಿಂದ ಉತ್ತಮ ವಹಿವಾಟು ಕಂಡಿದ್ದ ಎಸ್ ಬಿಐ ಷೇರುಗಳನ್ನು ವಿಭಜನೆ ಮಾಡಲು ಕಳೆದ ಒಂದೆರಡು ತಿಂಗಳುಗಳ ಹಿಂದೆ ಎಸ್ ಬಿಐ ಬೋರ್ಡ್ ನಿರ್ಧರಿಸಿತ್ತು. ಹೀಗಾಗಿ ಗುರುವಾರದಿಂದ ಷೇರುಗಳ ಮುಖಬೆಲೆ ಇಳಿಕೆಯಾಗಿತ್ತು. ಒಂದು ಷೇರಿನ ಬೆಲೆ 290ರು ಗೆ ಇಳಿಕೆಯಾಗಿರುವುದರಿಂದ ಸಣ್ಣ ಹೂಡಿಕೆದಾರರಿಗೆ ಇದರಿಂದ ಅನುಕೂಲವಾಗಲಿದೆ.

ಬಿಎಸ್ ಇನಲ್ಲಿ ಗುರುವಾರ 297 ರುನಂತೆ ಶೇ 89.83ರಷ್ಟು ಇಳಿಕೆಯೊಂದಿಗೆ ಎಸ್ ಬಿಐ ತನ್ನ ವಹಿವಾಟು ಮುಕ್ತಾಯಗೊಳಿಸಿದೆ. ಎಸ್ ಬಿಐ ಷೇರುಗಳನ್ನು ವಿಭಜನೆ ಮಾಡುವ ಕಾರ್ಯಕ್ಕೆ ಮುಂದಾದ ಮೇಲೆ ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡಾ ಇದೇ ಹಾದಿ ಹಿಡಿದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+