ಮುಸ್ಲಿಮರಿಗಾಗಿ ಎಸ್ ಬಿಐನಿಂದ ಮ್ಯೂಚುವಲ್ ಫಂಡ್

ಮುಂಬೈ, ನ. 26 : ಮುಸ್ಲಿಮರ ಷರಿಯಾ ಕಾನೂನಿಗೆ ಅನುಗುಣವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯೂಚುವಲ್ ಫಂಡ್ ಯೋಜನೆಯೊಂದನ್ನು ಆರಂಭಮಾಡಲಿದೆ. ರಾಷ್ಟ್ರದ 17 ಕೋಟಿ ಮುಸ್ಲಿಮರಿಗೆ ಇದರಿಂದ ಅನುಕೂಲವಾಗಲಿದ್ದು, ಇಂಥ ವ್ಯವಸ್ಥೆ ಜಾರಿ ಮಾಡಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳಲಿದೆ.

ಇಸ್ಲಾಮಿಕ್ ಕಾನೂನುನ ಅನ್ವಯ ಮುಸ್ಲಿಮರು ಬಡ್ಡಿ ತೆಗೆದುಕೊಳ್ಳುವ ಅಥವಾ ಪಡೆದುಕೊಳ್ಳುವ ವ್ಯವಹಾರ ನಡೆಸುವಂತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೆ ಎಸ್ ಬಿಐ ನೂತನ ಯೋಜನೆ ಆರಂಭಿಸುತ್ತಿದ್ದು ಇದಕ್ಕೆ ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಒಪ್ಪಿಗೆ ದೊರೆತಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಹ ಸ್ವಾಗತ ಕೋರಿದೆ ಎಂದು ತಿಳಿಸಿದೆ.[ಮ್ಯೂಚುವಲ್ ಫಂಡ್ ಆಫರ್ ಡಾಕ್ಯೂಮೆಂಟ್ ಎಂದರೇನು?]

ಮುಸ್ಲಿಮರಿಗಾಗಿ ಎಸ್ ಬಿಐನಿಂದ ಮ್ಯೂಚುವಲ್ ಫಂಡ್

ಷರಿಯಾ ಈಕ್ವಿಟಿ ಫಂಡ್ ಹೆಸರಿನಲ್ಲಿ ಯೋಜನೆ ಜಾರಿ ಮಾಡಲಾಗುತ್ತಿದೆ. ಯಾರೂ ಬೇಕಾದರೂ ಹಣ ಹೂಡಿಕೆ ಮಾಡಬಹುದು. ಯಾವುದೇ ವಿಶೇಷ ನಿಬಂಧನೆಗಳಿರುವುದಿಲ್ಲ. ಅಲ್ಲದೇ ಪ್ರಮುಖ 700 ರಿಂದ 800 ಕಂಪನಿಗಳು ಈ ಕ್ರಮವನ್ನು ಅನುಸರಿಸುತ್ತವೆ. ಹೂಡಿಕೆ ಮಾಡಲು ಹೆಸರಾಂತ ಕಂಪನಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಎಸ್ ಬಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಕೇವಲ ಮುಸ್ಲಿಮರಿಗೆಂದೆ ತಯಾರು ಮಾಡಿದ ಯೋಜನೆಯಲ್ಲ. ಯಾರೂ ಬೇಕಾದರೂ ಹಣ ಹೂಡಿಕೆ ಮಾಡಲು ಅವಕಾಶವಿದೆ. ಬ್ಯಾಂಕಿಂಗ್ ಕ್ಷೇತ್ರ ಮತ್ತು ವಾಣಿಜ್ಯ ವ್ಯವಹಾರದ ಕಡೆಗೆ ಮುಸ್ಲಿಮರನ್ನು ಎಳೆಯುವ ಪ್ರಯತ್ನ ಮಾಡಲು ಇಂಥ ಕ್ರಮಗಳು ಅನಿವಾರ್ಯ. ಜತೆಗೆ ಇದು ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+