ಟ್ವಿಟ್ಟರ್ ಬಳಸಿ ಖರೀದಿಸಿ, ಅಪಾರ ಹಣ ಉಳಿಸಿ

ನ್ಯೂ ಯಾರ್ಕ್, ನ. 27 : ಸಾಮಾಜಿಕ ಜಾಲತಾಣ ಟ್ವಿಟ್ಟರ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ರಿಟೇಲ್ ಇಂಡಸ್ಟ್ರಿಗೆ ಸಂಬಂಧಿಸಿದ ಟ್ವಿಟ್ ಗಳಲ್ಲಿ ವ್ಯವಹರಿಸಿದರೆ ಮನಿ ಬ್ಯಾಕ್ ಆಫರ್ ಪಡೆಯಲು ಸಾಧ್ಯವಿದೆ.

ಟ್ವಿಟ್ಟರ್ ಆಫರ್ ಹೆಸರಿನಲ್ಲಿ ಕರೆಯುವ ವಿಶೇಷ ಸೌಲಭ್ಯ ನಿಮ್ಮ ಟ್ವಿಟ್ಟರ್ ಅಕೌಂಟ್ ಟೈಮ್ ಲೈನ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಯಾವ ರಿಟೇಲ್ ಕಂಪನಿ ಟ್ವಿಟ್‌ ಮಾಡಿರುತ್ತದೆಯೋ ಅದಕ್ಕೆ ಸಂಬಂಧಿಸಿದ ಆಫರ್ ಮತ್ತು ಹಣ ಮರುಪಾವತಿ ಸೌಲಭ್ಯದ ಮಾಹಿತಿ ಪಡೆದುಕೊಳ್ಳಬಹುದಾಗಿದೆ.[ಮುಸ್ಲಿಮರಿಗಾಗಿ ಎಸ್ ಬಿಐನಿಂದ ಮ್ಯೂಚುವಲ್ ಫಂಡ್]

ಟ್ವಿಟ್ಟರ್ ಬಳಸಿ ಖರೀದಿಸಿ, ಅಪಾರ ಹಣ ಉಳಿಸಿ

ಸದ್ಯ ಯುಎಸ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಜಾರಿಯಲ್ಲಿದ್ದು ಮನಿ ಬ್ಯಾಕ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ರಜಾ ದಿನಗಳಲ್ಲಿ ಜನರನ್ನು ತಲುಪಲು ಇದು ಉತ್ತಮ ಸಾಧನವಾಗಿದೆ. ಜನರ ಪ್ರತಿಕ್ರಿಯೆ ಆಧರಿಸಿ ಮುಂದೆ ವಿಸ್ತರಿಸಲಾಗುವುದು ಎಂದು ಟ್ವಿಟ್ಟರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.[ಬಾಡಿಗೆ ಕರಾರು ಪತ್ರ ತಯಾರಿ ಈಗ ಸುಲಭ!]

ರಿಟೇಲ್ ಕಂಪನಿಗಳು ವಿವಿಧ ಆಫರ್ ಗಳನ್ನು ಟ್ವಿಟ್ಟರ್ ಮುಖೇನ ಹರಿಯಬಿಡುತ್ತವೆ. ನಿಮಗೆ ಆಸಕ್ತಿ ಇದ್ದ ಆಫರ್ ಮೇಲೆ ಕ್ಲಿಕ್ ಮಾಡಿದರೆ ಮತ್ತಷ್ಟು ಮಾಹಿತಿಗಳು ದೊರೆಯುತ್ತವೆ. ಓಕೆ ನೀಡಿದ ನಂತರ ಈ ಸೌಲಭ್ಯ(ರಿಯಾಯಿತಿ, ಕಡಿತ) ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗೆ ಲಿಂಕ್ ಆಗುತ್ತದೆ. ನಂತರ ರಿಟೇಲ್ ಶಾಪ್ ನಲ್ಲಿ ಇದನ್ನು ಬಳಸಿ ಆಫರ್ ಲಾಭ ಪಡೆದುಕೊಳ್ಳಬಹುದು.(ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+