For Quick Alerts
ALLOW NOTIFICATIONS  
For Daily Alerts

ವಿದೇಶಿ ಹೂಡಿಕೆ ಮುನ್ನ ಈ ಮೂರು ಅಂಶ ತಲೆಯಲ್ಲಿರಲಿ

|

ಇಂಟರ್ ನ್ಯಾಶನಲ್ ಮ್ಯೂಚುವಲ್ ಫಂಡ್ ಅಥವಾ ಅಂತಾರಾಷ್ಟ್ರೀಯ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಮುನ್ನ ಕೆಲ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ದೇಶಿಯ ಮ್ಯೂಚುವಲ್ ಫಂಡ್ ಗೂ ಅಂತಾರಾಷ್ಟ್ರೀಯ ಮ್ಯೂಚುವಲ್ ಫಂಡ್ ಗೂ ಅಂಥ ಹೇಳಿಕೊಳ್ಳುವಂಥ ವ್ಯತ್ಯಾಸಗಳೇನಿಲ್ಲ. ಆದರೆ ಇಲ್ಲಿ ನೀವು ವಿದೇಶಿ ಕಂಪನಿಯೊಂದರ ಮೇಲೆ ಬಂಡವಾಳ ಹೂಡುತ್ತಿದ್ದಿರಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಇದು ಗ್ಲೊಬಲ್ ಫಂಡ್ ಗಿಂತ ಭಿನ್ನವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ನಿಮ್ಮ ಸಾಮರ್ಥ್ಯ ಮತ್ತು ಅವಕಾಶವನ್ನು ಹೆಚ್ಚಿಸುತ್ತದೆ. ಉತ್ತಮ ಆದಾಯ ಗಳಿಸಲು ನೆರವಾಗಬಹುದು. ಆದರೆ ಹೂಡಿಕೆಗೆ ಮುನ್ನ ಕೆಳಗಿನ ಮೂರು ಅಂಶಗಳನ್ನು ಸದಾ ತಲೆಯಲ್ಲಿ ಇಟ್ಟುಕೊಳ್ಳಬೇಕು.[ಮ್ಯೂಚುವಲ್ ಫಂಡ್ ಹಣ ಹೂಡಿಕೆ ಎದುರಿಸುವ ಅಪಾಯಗಳು]

ವಿದೇಶಿ ಹೂಡಿಕೆ ಮುನ್ನ ಈ ಮೂರು ಅಂಶ ತಲೆಯಲ್ಲಿರಲಿ

ವೈವಿಧ್ಯತೆ
ವಿವಿಧತೆ ಅಥವಾ ಹಂಚಿಕೆ ಮಂತ್ರ ಇಲ್ಲಿಗೂ ಅಳವಡಿಕೆಯಾಗುತ್ತದೆ. ಒಂದೆ ವಿಭಾಗದಲ್ಲಿ ಹೂಡಿಕೆ ಮಾಡುವ ಬದಲು ಬೇರೆ ಬೇರೆ ದಾರಿಗಳನ್ನು ಆರಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ ನ್ಯೂ ಯಾರ್ಕ್ ಸ್ಟಾಕ್ ಎಕ್ಸ್ ಚೆಂಜ್, ಲಂಡನ್ ಸ್ಟಾಕ್ ಎಕ್ಸ್ ಚೆಂಜ್ ಮುಂತಾದವುಗಳಲ್ಲಿ ಹೂಡಿಕೆ ಮಾಡಬಹುದು. ಯಾಕೆಂದರೆ ಒಂದೇ ಸಮಯದಲ್ಲಿ ಎಲ್ಲಾ ಮಾರುಕಟ್ಟೆಗಳು ಕುಸಿಯಲು ಸಾಧ್ಯವಿಲ್ಲ. ಒಂದು ವೇಳೆ ಯಾವುದಾದರೊಂದು ಮಾರುಕಟ್ಟೆ ತೀವ್ರ ಕುಸಿದರೆ ಇನ್ನೊಂದರಲ್ಲಿ ಹಾಕಿದ ಬಂಡವಾಳದಿಂದ ನಷ್ಟ ತುಂಬಿಸಿಕೊಳ್ಳಬಹುದು.

ಎಲ್ಲಾ ಹಣವನ್ನು ವಿದೇಶಿ ಕಂಪನಿಗಳ ಮೇಲೆ ಹೂಡಿಕೆ ಮಾಡಬೇಡಿ
ನೂರಕ್ಕೆ ನೂರರಷ್ಟು ಹಣ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ರಿಸ್ಕ್ ತೆಗೆದುಕೊಂಡಂತೆ. ಶೇ. 70 ನ್ನು ದೇಶಿಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಉಳಿದ ಶೇ. 30 ನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಸಮತೋಲನ ಕಾದುಕೊಳ್ಳಬಹುದು.[ಭಾರತದಲ್ಲಿ ಇ-ಇನ್ಶೂರೆನ್ಸ್ ಖಾತೆ ತೆರೆಯುವುದು ಹೇಗೆ?]

ಕರೆನ್ಸಿ ಏರಿಳಿತ
ವಿವಿಧ ದೇಶಗಳ ಕರೆನ್ಸಿಯೊಂದಿಗೆ ಉಂಟಾಗುವ ರೂಪಾಯಿ ಏರಿಳಿತ ನಿಮ್ಮ ಬಂಡವಾಳಕ್ಕೆ ಕುತ್ತು ತರಬಹುದು. ಡಾಲರ್ ಎದುರು ರೂಪಾಯಿ ಏರಿದರೆ ನೀವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೂಲಕ ಹೂಡಿಕೆ ಮಾಡಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ.

ಕೊನೆ ಮಾತು: ಜಾಣತನದ ಹೂಡಿಕೆಗೆ ಒತ್ತು ನೀಡಬೇಕು ಎಂದರೆ, ಮೊದಲು ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗತಿ ಅಧ್ಯಯನ ಮಾಡುವುದು. ಸ್ನೇಹಿತರಿಂದ ಅಥವಾ ಈಗಾಗಲೇ ಹೂಡಿಕೆ ಮಾಡಿ ಅನುಭವ ಹೊಂದಿರುವವರಿಂದ ಸಲಹೆ ಪಡೆದುಕೊಳ್ಳುವುದು ಉತ್ತಮ.(ಗುಡ್ ರಿಟರ್ಸ್. ಇನ್)

English summary

3 Things to Keep in Mind before Investing in International Mutual Funds

Though it is international, mutual fund investing is very similar to domestic markets. Mutual Fund which invests money in funds offered by companies other than their home country. It may also be called as a foreign fund. However, it is different from global funds, which invest around the world. Investing in international markets may give you an opportunity to invest in some of the best funds in the international market.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X