ಇನ್ಫಿ ತ್ರೈಮಾಸಿಕ ವರದಿ ಮೇಲೆ ಹೆಚ್ಚಿದ ನಿರೀಕ್ಷೆಗಳ ಭಾರ

ಇನ್ಫೋಸಿಸ್ ಮೂರನೇ ತ್ರೈಮಾಸಿಕ ಅವಧಿಯ ಫಲಿತಾಂಶ ಜನವರಿ 9 ರಂದು ಪ್ರಕಟವಾಗಲಿದೆ. ವರದಿಯ ಮೇಲೆ ಅನೇಕ ನಿರೀಕ್ಷೆಗಳು ಗರಿಗೆದರಿವೆ.
ತನ್ನ ಸಿಬ್ಬಂದಿಗೆ ಮತ್ತು ಹೂಡಿಕೆದಾರರಿಗೆ ಕಂಪನಿ ಯಾವ ವಿಶೇಷ ಕೊಡುಗೆ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅಲ್ಲದೇ ಇನ್ಫಿ ತ್ರೈಮಾಸಿಕ ವರದಿ ಮೇಲೆ ಹೂಡಿಕೆದಾರರು ಚಿತ್ತ ನೆಟ್ಟಿದ್ದಾರೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು, ವಿದೇಶಿ ಹೂಡಿಕೆಯ ಒಳಹರಿವು, ಡಾಲರ್ ಎದುರು ರೂಪಾಯಿ ಚಲನವಲನ, ಕಚ್ಚಾತೈಲ ಬೆಲೆ ಮತ್ತಿತರ ಅಂಶಗಳ ಆಧಾರದಲ್ಲಿಯೇ ವರದಿ ಪ್ರಕಟವಾಗಲಿದೆ.[ಹೂಡಿಕೆದಾರರಿಗೆ ಪ್ರೀತಿ ಪಾತ್ರನಾದ ಇನ್ಫೋಸಿಸ್]

ಇನ್ಫಿ ತ್ರೈಮಾಸಿಕ ವರದಿ ಮೇಲೆ ಹೆಚ್ಚಿದ ನಿರೀಕ್ಷೆಗಳ ಭಾರ

ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ವರದಿಯಲ್ಲಿ ಉಳಿದ ಸಾಫ್ಟ್ ವೇರ್ ಕಂಪನಿಗಳಂತೆ ಶೇಕಡಾ ಒಂದು ಅಥವಾ ಅದಕ್ಕಿಂತ ಕಡಿಮೆ ನಷ್ಟ ಕಂಡುಬರುವ ಸಾಧ್ಯತೆಯಿದೆ. ಅಲ್ಲದೇ ಅನೇಕ ಸವಾಲುಗಳು ಎದುರಾಗಲಿದ್ದು ಕರೆನ್ಸಿ ಚಂಚಲತೆಯನ್ನು ಸಮತೋಲನ ಮಾಡಿಕೊಂಡು ಹೋಗಲು ಯಾವ ಕ್ರಮ ತೆಗೆದುಕೊಳ್ಳುತ್ತದೆ? ಎಂಬುದು ಮುಖ್ಯವಾಗುತ್ತದೆ. ಮುಂದಿನ ತ್ರೈಮಾಸಿಕದ ವೇಳೆಗೆ ಕನಿಷ್ಠ ಶೇ. 2-3 ಸಾಧನೆ ಮಾಡುವ ಗುರಿ ಹಮ್ಮಿಕೊಳ್ಳಿವ ನಿರೀಕ್ಷೆಯಿದೆ.

ಕಂಪನಿಯ ಷೇರುಗಳ ಸದ್ಯದ ಸ್ಥಿತಿಗತಿ, ಹರಿವು, ಬಂಡವಾಳ ಹೂಡಿಕೆದಾರರ ಆಕರ್ಷಣೆ ಇವುಗಳ ಬಗೆಗೂ ಚರ್ಚೆ ನಡೆಯಲಿದೆ. ದೇಶದ ಬಹುಮುಖ್ಯ ಸಾಫ್ಟ್ ವೇರ್ ಶಕ್ತಿ 2015 ರ ಇಡೀ ವರ್ಷದ ಬೆಳವಣಿಗೆಯನ್ನು ತೀರ್ಮಾನಿಸಲಿದೆ.

ಸಿಇಒ ವಿಶಾಲ್ ಸಿಕ್ಕಾ ಮತ್ತು ಅವರ ತಂಡ ಕಂಪನಿಯ ಬೆಳವಣಿಗೆಗೆ ಯಾವ ದೃಷ್ಟಿಕೋನ ಬಳಸಿಕೊಳ್ಳಲಿದೆ? ಇಡಿ ವರ್ಷ ಲಾಭವನ್ನೇ ಕಾಣಲು ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಎಂಬ ಸವಾಲುಗಳು ಸಭೆಯಲ್ಲಿ ಎದುರಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+