ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?

2010ರಲ್ಲಿ ಮೊಬೈಲ್ ಕಂಪನಿಗಳು ಪಡೆದುಕೊಂಡಿದ್ದ ತರಂಗಾಂತರ ಹಂಚಿಕೆ ಅವಧಿ ಪೂರ್ಣಗೊಳ್ಳುತ್ತಿದ್ದು ಈ ವರ್ಷ ಮತ್ತೆ ಹರಾಜು ನಡೆಯಲಿದೆ. ಆದರೆ ಕೇಂದ್ರ ಸರ್ಕಾರದ ತರಂಗಾಂತರ ಹಂಚಿಕೆ ನಂತರ ಮೊಬೈಲ್ ಸೇವೆ ಮತ್ತು ದರ ತುಟ್ಟಿಯಾಗಲಿದೆ ಎಂದು ಹೇಳಲಾಗಿದೆ.

ಏಕ ಕಾಲದಲ್ಲಿ ವ್ಯವಹಾರದ ಮೇಲೆ ದರ ಏರಿಕೆಯ ಹೊರೆ ಬೀಳಲಿದೆ. ಇದು ಸರ್ಕಾರದ ಹಲವಾರು ಗುರಿ ಉದ್ದೇಶಗಳ ಮೇಲೂ ಪರಿಣಾಮ ಬೀರಲಿದೆ ಎಂದು ಸಿಒಎಐ ಡೃರೆಕ್ಟರ್ ಜನರಲ್ ರಾಜನ್ ಮ್ಯಾಥ್ಯೂಸ್ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?

ಈಗಾಗಲೇ ಟೆಲಿಕಾಂ ಆಪರೇಟರ್ ಗಳು 2.5 ಲಕ್ಷ ಕೋಟಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ ಇದೇ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವಾಲಯದ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಿಗೂ ಸಲ್ಲಿಸಲಾಗಿದೆ.

ಜನವರಿ 5 ರಂದು ನಡೆದ ಕೇಂದ್ರ ಸಂಪುಟ ಸಭೆ ದೆಹಲಿ. ಮುಂಬೈ, ಕೋಲ್ಕತ್ತಾ, ಜಮ್ಮು ಕಾಶ್ಮೀರ ಸಂಬಂಧಿಸಿದ ವಿವಿಧ ತರಂಗಾಂತರಗಳ ಮೇಲಿನ ಹಕ್ಕು ಪರಿಶೀಲನೆಗೆ ಮತ್ತು ಹರಾಜಿಗೆ ತೀರ್ಮಾನ ತೆಗೆದುಕೊಂಡಿದೆ. ಇದರಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ಬರಲಿದೆ.[ಜನಧನ ಯೋಜನೆಯಡಿ ಯಾಕೆ ಖಾತೆ ತೆರೆಯಬೇಕು?]

ಬಹುಮುಖ್ಯವಾಗಿ ಬಳಸುತ್ತಿರುವ 900 Mhz ಮೇಲೆ ಸದ್ಯ ಏರ್ ಟೆಲ್ , ಐಡಿಯಾ, ವಡಾಫೋನ್ ಮತ್ತು ರಿಲಯನ್ಸ್ ಕಮ್ಯೂನಿಕೇಶನ್ ಹಕ್ಕು ಸಾಧಿಸಿದ್ದು 2015-16ಕ್ಕೆ ಅವಧಿ ಅಂತ್ಯಗೊಳ್ಳಲಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮೊಬೈಲ್ ಆಪರೇಟರ್ ಕಂಪನಿಗಳು, ಸರ್ಕಾರ 900 Mhz ಮೇಲಿನ ಹಕ್ಕಿಗೆ ಶೇ. 32.5 ರಷ್ಟು ದರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳಕ್ಕೆ ತೀರ್ಮಾನಿಸಿದೆ. ಇದು ಟೆಲಿಕಾಂ ಅಥಾರಟಿ ಸಲ್ಲಿಸಿದ್ದ ವರದಿಯಲ್ಲಿರುವುದಕ್ಕಿಂತ ಹೆಚ್ಚಾಗಿದ್ದು 2010ರ 3G ಹಂಚಿಕೆಗೆ ಹೋಲಿಸಿದರೆ ಶೇ. 107 ರಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿವೆ.

ಉತ್ತಮ ಗುಣಮಟ್ಟದ ಮೊಬೈಲ್ ಸೇವೆ ಸಾಮಾನ್ಯ ವ್ಯಕ್ತಿಗೂ ತಲುಪಬೇಕಾದರೆ ಸರ್ಕಾರ ವಿಧಿಸಲು ಹೊರಟಿರುವ ದರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಎಂದು ಆಪರೇಟರ್ ಕಂಪನಿಗಳು ಒತ್ತಾಯಿಸಿವೆ.

ಒಟ್ಟಿನಲ್ಲಿ ಈ ವರ್ಷ ತರಂಗಾಂತರ ಹಂಚಿಕೆ ಹರಾಜು ನಡೆಯಲಿದ್ದು ಸರ್ಕಾರ ಮೇಲೆ ಹೇಳಿದ ದರವನ್ನೇ ವಿಧಿಸಿದ್ದೇ ಆದರೆ ಮೊಬೈಲ್ ಮತ್ತು ಅಂತರ್ಜಾಲ ಬಳಕೆಗೆ ದುಪ್ಪಟ್ಟು ಹಣ ನೀಡಬೇಕಾಗುತ್ತದೆ.(ಗುಡ್ ರಿಟರ್ನ್ಸ್. ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+