ನಕಲಿ ಬ್ಯಾಂಕ್ ವೊಂದು ಚೀನಾದ ನಾಗರಿಕರಿಗೆ ಬರೋಬ್ಬರಿ 200 ಜನರನ್ನು ವಂಚಿಸಿದೆ. ನಾಂಜಿಂಗ್ ಪ್ರದೇಶದ ನಕಲಿ ಬ್ಯಾಂಕ್ ಚೀನಾ ನಾಗರಿಕರಿಗೆ ಹೆಚ್ಚಿನ ಬಡ್ಡಿ ನೀಡುತ್ತೇನೆ ಎಂದು ಹೇಳಿ 32 ಮಿಲಿಯನ್ ಡಾಲರ್ ವಂಚನೆ ಮಾಡಿದೆ ಎಂದು ಬಿಬಿಸಿ ವರದಿಯೊಂದು ಹೇಳಿದೆ.

ನಕಲಿ ಸಿಬ್ಬಂದಿಗಳನ್ನು ಇಟ್ಟುಕೊಂಡಿದಲ್ಲದೇ ಕಚೇರಿಯೊಂದನ್ನು ಸ್ಥಾಪಿಸಿಕೊಂಡು ಜನರಿಗೆ ಅನುಮಾನ ಬಾರದಂತೆ ವ್ಯವಸ್ಥಿತವಾಗಿ ವಂಚನೆ ನಡೆಸಲಾಗಿದೆ.
ಅತಿ ಹೆಚ್ಚಿನ ಬಡ್ಡಿ ನೀಡುತ್ತೇನೆ ಎಂದು ನಕಲಿ ಬ್ಯಾಂಕ್ ಹೇಳಿತ್ತು. ಇದನ್ನು ನಂಬಿ ಅನೇಕರು ಹಣ ಹೂಡಿದ್ದರು. ಒಬ್ಬ ವ್ಯಕ್ತಿಯಂತೂ 1.9 ಮಿಲಿಯನ್ ಡಾಲರ್ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿದ್ದಾರೆ.
ಹಣ ಹೂಡಿದ ನಂತರ ಹೇಳಿದ್ದಷ್ಟು ಬಡ್ಡಿ ನೀಡದ ಕಾರಣ ಜನರು ತಮ್ಮ ಹಣ ವಾಸ್ ನೀಡುವಂತೆ ಕೇಳಿದ್ದರು. ಆದರೆ ಇದನ್ನು ನಕಲಿ ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದರು.
ತನಿಖೆಯ ನಂತರ ಒಂದೊಂದೆ ಸಂಗತಿಗಳು ಬಯಲಿಗೆ ಬಂದಿದ್ದು, ಬ್ಯಾಂಕ್ ಎಂದು ಹೇಳಿಕೊಳ್ಳುತ್ತಿರುವ ಸಂಸ್ಥೆ ಯಾವುದೇ ಪರವಾನಗಿಯನ್ನು ಪಡೆದಿರಲಿಲ್ಲ. ಗ್ರಾಮೀಣ ಮಟ್ಟದ ಕಾರ್ಪೋರೇಟಿವ್ ಬ್ಯಾಂಕ್ ತರಹದ ಲೆಕ್ಕ ಪತ್ರಗಳನ್ನು ಕಲೆಹಾಕಿತ್ತು. ಪ್ರಕರಣಕ್ಕೆ ಸಂಬಂಧಿಸಿ 5 ಜನರನ್ನು ಬಂಧಿಸಲಾಗಿದೆ ಎಂದು ಬಿಬಿಸಿ ತಿಳಿಸಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications