ಮುಂಬೈ, ಜ. 30: ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಹೊಸ ದಾಖಲೆಯ ಎತ್ತರವನ್ನು ತಲುಪಿದೆ.
ಬೆಳಗಿನ ವಹಿವಾಟಿನಲ್ಲೇ ಏರಿಕೆಕಂಡುಬಂದಿದ್ದು 62.39 ಅಂಕಗಳ ಮುನ್ನಡೆ ಸಾಧಿಸಿದ ಸೆನ್ಸೆಕ್ಸ್ 29,844.16 ಅಂಕಗಳನ್ನು ತಲುಪಿ ದಾಖಲೆ ಬರೆಯಿತು. ನಿಫ್ಟಿ ಸಹ 44.25 ಅಂಕಗಳ ಮುನ್ನಡೆ ಸಾಧಿಸಿ 8,996.60 ಅಂಕ ದಾಖಲಿಸಿತು.[ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?]

ಕೇಂದ್ರ ಸರ್ಕಾರ ಕೋಲ್ ಇಂಡಿಯಾದ ಶೇ. 10 ರಷ್ಟು ಷೇರನ್ನು ಮಾರಾಟ ಮಾಡಲು ಮುಂದಾಗಿರುವುದು ಮಾರುಕಟ್ಟೆಯಲ್ಲಿನ ಏರಿಕೆಗೆ ಕಾರಣವಾಗಿದೆ. ಜತೆಗೆ ವಿದೇಶಿ ಹೂಡಿಕೆದಾರರ ಆಸಕ್ತಿ, ಬಜೆಟ್ ಕುರಿತ ಆಶಾಭಾವನೆಗಳು ಹೊಸ ಸಂಚಲನಕ್ಕೆ ಕಾರಣವಾಗಿವೆ.
ಕೋಲ್ ಇಂಡಿಯಾದ ಜತೆಗೆ, ಬಿಎಚ್ ಇಎಲ್, ಎನ್ ಟಿಪಿಸಿ, ಎಚ್ ಸಿಎಲ್, ಅಶೋಕ್ ಲೈಲೆಂಡ್, ಎಚ್ ಸಿಸಿ ಷೇರುಗಳು ಗಮನಾರ್ಹ ಏರಿಕೆ ದಾಖಲಿಸಿ ಮುನ್ನುಗ್ಗುತ್ತಿವೆ. ಐಟಿ ವಿಭಾಗದ ಷೇರುಗಳೊಂದಿಗೆ ಸಾರ್ವಜನಿಕ ರಂಗದ ಬ್ಯಾಂಕುಗಳು, ತೈಲ ಹಾಗೂ ಅನಿಲ ಕಂಪೆನಿಗಳ ಷೇರುಗಳು ಮಾರಾಟ ಭರಾಟೆಯಲ್ಲಿ ಏರಿಕೆ ಸಾಧಿಸಿವೆ.


Click it and Unblock the Notifications