ಭಾರತದ ಷೇರು ಮಾರುಕಟ್ಟೆ ಪ್ರಪಂಚದಲ್ಲಿಯೇ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಏರಿಳಿತದ ಹಾದಿಯನ್ನು ಪ್ರತಿನಿಧಿಸುತ್ತವೆ. ಪ್ರತಿದಿನದ ಅಂಕಗಳ ಏರಿಕೆ ಮತ್ತು ಇಳಿಕೆ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿರುತ್ತದೆ.
ದೊಡ್ಡ ದೊಡ್ಡ ಕಂಪನಿಗಳು ಪ್ರತಿದಿನ ಷೇರು ವಹಿವಾಟು ನಡೆಸುತ್ತವೆ. ಆದರೆ ಷೇರು ಮಾರುಕಟ್ಟೆ ಬಗ್ಗೆ ನಮಗೆ ಗೊತ್ತಿರದ ಅನೇಕ ಸಂಗತಿಗಳಿವೆ. ಅವುಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಅತ್ಯಲ್ಪ ಹಣ ಷೇರಲ್ಲಿ
ಭಾರತೀಯರು ಉಳಿತಾಯದ ಮನೋಭಾವ ಹೊಂದಿದ್ದಾರೆ. ಆದರೆ ಉಳಿತಾಯದ ಬಹುತೇಕ ಹಣವನ್ನು ಬ್ಯಾಂಕ್ ಡಿಪಾಸಿಟ್ ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದು ಶೇ. 2 ರಷ್ಟು ಹಣವನ್ನು ಮಾತ್ರ ಎಂದು ಅಂಕಿಅಂಶಗಳು ಹೇಳುತ್ತವೆ.
ಅತಿ ಹೆಚ್ಚು ಕಂಪನಿಗಳ ನೋಂದಣಿ
ಮುಂಬೈ ಷೇರು ಪೇಟೆ(ಸೆನ್ಸೆಕ್ಸ್) ಮತ್ತು ರಾಷ್ಟ್ರೀಯ ಷೇರು ಸೂಚ್ಯಂಕ(ನಿಫ್ಟಿ) ಪ್ರಪಂಚದ ಯಾವ ರಾಷ್ಟ್ರದ ಮಾರುಕಟ್ಟೆಯೂ ಹೊಂದಿರದಷ್ಟು ಕಂಪನಿಗಳ ನೋಂದಣಿ ಹೊಂದಿವೆ.
ಎಲ್ ಐಸಿಗೆ ಮೊದಲನೇ ಸ್ಥಾನ
ವಿದೇಶಿ ಸಾಂಸ್ಥಿಕ ಹೂಡುಕೆದಾರರಿಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ವಿಪುಲ ಅವಕಾಶವಿದೆ. ಆದರೆ ದೇಶದ ಎಲ್ ಐಸಿ ಅತಿಹೆಚ್ಚು ಹೂಡಿಕೆಯನ್ನು ಹೊಂದಿದ್ದು ಮೊದಲನೇ ಸ್ಥಾನ ಕಾಪಾಡಿಕೊಂಡು ಬಂದಿದೆ
ಕೆಟ್ಟ ಅಂಕಿ ಅಂಶಗಳು
ಆರು ಸಾವಿರಕ್ಕೂ ಅಧಿಕ ಕಂಪನಿಗಳ ಷೇರುಗಳು ಸರಿಯಾದ ವಹಿವಾಟು ನಡೆಸುತ್ತಿಲ್ಲ ಅಥವಾ ಕಡಿಮೆ ಪ್ರಮಾಣದ ವಹಿವಾಟು ನಡೆಸುತ್ತಿವೆ. 3 ಸಾವಿರ ಷೇರುಗಳು ಮಾರುಕಟ್ಟೆಉಯ ಮೇಲೆ ಹಿಡಿತ ಸಾಧಿಸಿವೆ.
ಉತ್ಪಾದಕ ವಸ್ತುಗಳದ್ದೇ ದಾಖಲೆ
ಎನ್ ಎಸ್ ಇ ಸೂಚ್ಯಂಕದಲ್ಲಿ ಉತಯ್ಪಾದಕ ವಸ್ತುಗಳೇ ಎರಡನೇ ಸ್ಥಾನದಲ್ಲಿ ನಿಲ್ಲುತ್ತವೆ. ಸ್ಟಾಕ್ ಇಂಡೆಕ್ಸ್ ಗೆ ಹೋಲಿಸಿದರೆ ಇದಕ್ಕೆ ಮೂರನೇ ಸ್ಥಾನ ಎಂದು ಅಂಕಿ ಅಂಶಗಳು ತಿಳಿಸಿಕೊಡುತ್ತವೆ.
ಧಾವಿಸುತ್ತಿರುವ ಹೂಡಿಕೆದಾರರು
ಭಾರತದ ಜಿಡಿಪಿ ದರ ಕಳೆದ ಕೆಲ ದಿನಗಳಿಂದ ಏರಿಕೆಹಾದಿಯಲ್ಲಿ ಸಾಗಿರುವುದು ಬಂಡವಾಳ ಹೂಡಿಕೆ ದಾರರನ್ನು ಆಕರ್ಷಿಸುತ್ತಿದೆ. ಮಾರ್ಕೆಟ್ ಕ್ಯಾಪ್ 93 ಲಕ್ಷ ಕೋಟಿ ರೂ. ಗೆ ಏರಿದ್ದು ಜಿಡಿಪಿಯ ಶೇ. 86 ರಷ್ಟಿದೆ
ಹೂಡಿಕೆದಾರರಿಗೆ ಅಪಾರ ಲಾಭ
ಭಾರತದ ಷೇರು ಮಾರುಕಟ್ಟೆ ಕಳೆದ ಕೆಲ ತಿಂಗಳಿಂದ ಏರಿಕೆ ಹಾದಿಯಲ್ಲಿ ಸಾಗುತ್ತಿದ್ದು ಹೂಡಿಕೆದಾರರಿಗೆ ಉತ್ತಮ ಲಾಭ ತಂದುಕೊಡುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಹಾದಿಯಲ್ಲಿರುವುದರಿಂದ ಬಂಡವಾಳ ಹೂಡಿಕೆದಾರರಿಗೆ ಅಪಾರ ಲಾಭವಾಗುತ್ತಿದೆ.
ಎನ್ ಎಸ್ ಸಿ ದಾಖಲೆ
ರಾಷ್ಟ್ರೀಯ ಷೇರು ಸೂಚ್ಯಂಕ ದಾಖಲೆ ನಿಮರ್ಮಿಸುತ್ತಿದೆ. ಈಕ್ವಿಟಿ ಮತ್ತು ಇಲೆಕ್ಟ್ರಾನಿಕ್ ಷೇರುಗಳು ಹೊಸ ಮಟ್ಟ ಮುಟ್ಟಿವೆ
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications