ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ಏಜೆನ್ಸಿ ಐಸಿಆರ್(ಇಂಟರ್ ನ್ಯಾಶನಲ್ ರಜಿಸ್ಟ್ರಾರ್ ಆಫ್ ಸರ್ಟಿಫೀಕೆಟೆಡ್ ಅಡಿಟರ್ಸ್) ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ. ಮುಂದಿನ ವರ್ಷ ಬ್ಯಾಂಕ್ ಗಳ ದುಡಿಯದ ಬಂಡವಾಳದ ಮಟ್ಟ(ಎನ್ ಪಿಎ) ಶೇ. 5.1 ರಿಂದ 5.7ಕ್ಕೆ ಏರುವ ಸಾಧ್ಯತೆಯಿದೆ ಎಂದು ಹೇಳಿದೆ.
ಕಳೆದ ಡಿಸೆಂಬರ್ ನಲ್ಲಿ ದಾಖಲಾಗಿದ್ದ ಶೇ. 4.5 ವಿರುದ್ಧವಾಗಿ ಈ ಮಟ್ಟಕ್ಕೆ ಏರಲಿದೆ ಎಂದು ತಿಳಿಸಿದೆ. ಬ್ಯಾಂಕ್ ಗಳ ದುಡಿಯದ ಬಂಡವಾಳದಲ್ಲಿ ಹೆಚ್ಚಳ ಕಂಡುಬಂದರೆ ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಂಡುಬರಲಿದೆ ಎಂದು ಹೇಳಿದೆ.[ಕಿಸೆಯಲ್ಲೇ ಬ್ಯಾಂಕ್ ಕೆಲಸ ಮುಗಿಸಲು ಐಸಿಐಸಿಐ 'ಪೊಕೆಟ್ಸ್ ']
ಈ ಬಗ್ಗೆ ವರದಿ ಮಾಡಿರುವ ಬಿಸಿನಸ್ ಸ್ಟಾಂಡರ್ಡ್, ಆರ್ಥಿಕ ವರ್ಷದ ಅಂತ್ಯ, ಮತ್ತು ಸಾಲ ನೀಡಿಕೆ ಪ್ರಮಾಣ ಈ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಿದೆ.
ರಿಸರ್ವ್ ಬ್ಯಾಂಕ್ ತೆಗೆದುಕೊಳ್ಳುವ ಕ್ರಮಗಳು ಈ ದುಡಿಯದ ಬಂಡವಾಳ(ಎನ್ ಪಿಎ )ನ್ನು ನಿಯಂತ್ರಿಸುತ್ತವೆ. ದೇಶದ ಅರ್ಥ ವ್ಯವಸ್ಥೆಯಲ್ಲಿನ ಬದಲಾವಣೆ ಮತ್ತು ಆರ್ ಬಿಐ ನಿರ್ದೇಶನ ಎನ್ ಪಿಎ ಇಳಿತಕ್ಕೆ ಕಾರಣವಾಗಬಹುದು. ಪರಿಸ್ಥಿತಿ ಹೀಗೆ ಮುಂದುವರಿದರೆ ಶೇಕಡಾವಾರು ಪ್ರಮಾಣದಲ್ಲಿ ಏರಿಕೆಯಾಗುವುದು ಖಂಡಿತ ಎಂದು ತಿಳಿಸಿದೆ.[ಪಾನ್ ಕಾರ್ಡ್ ಹೇಗೆ ಪಡೆಯಬೇಕು? ಏತಕ್ಕೆ ಬೇಕು?]
ಕೊನೆ ಮಾತು: ಬ್ಯಾಂಕ್ ಗಳ ದುಡಿಯದ ಬಂಡವಾಳ ಪ್ರಮಾಣದಲ್ಲಿ ಏರಿಕೆ ಕಂಡುಬಂದರೆ ಸಾಲ ನೀಡಕೆ ಮತ್ತು ಪಡೆಯುವಿಕೆಗೆ ಯಾವ ಸಮಸ್ಯೆಯಾಗುವುದಿಲ್ಲ.(ಗುಡ್ ರಿಟರ್ನ್ಸ್,ಇನ್)