ಟೈಮ್ಸ್ ನೊಂದಿಗೆ ಉಬರ್ ಟ್ಯಾಕ್ಸಿ ಪಾಲುದಾರಿಕೆ

ಮೊಬೈಲ್ ಅಪ್ಲಿಕೇಶನ್ ಮೂಲಕ ಸೇವೆ ನೀಡುತ್ತಿರುವ ಉಬರ್ ಟ್ಯಾಕ್ಸಿ ಸರ್ವೀಸಸ್ ಟೈಮ್ಸ್ ಇಂಟರ್ ನೆಟ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಉಬರ್ ಟ್ಯಾಕ್ಸಿ ಅಮೆರಿಕ ಮೂಲದ ಚಿಕ್ಕ ಕಂಪನಿ ಸಹಕಾರದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಮುಂದುವರಿಯಲಿದ್ದೇನೆ ಎಂದು ತಿಳಿಸಿದೆ.

ಟೈಮ್ಸ್ ಆಫ್ ಇಂಡಿಯಾದ ಅಂಗವಾಗಿರುವ ಟೈಮ್ಸ್ ಇಂಟರ್ ನೆಟ್ ಕಡಿಮೆ ಬಂಡವಾಳ ಹೂಡಿಕೆಯ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ. ಹಾಗಾಗಿ ಪಾಲುದಾರಿಕೆಯಲ್ಲಿ ಭಾಗಿಯಾಗಿದ್ದೇವೆ ಎಂದು ಉಬರ್ ಪ್ರಕಟಣೆ ತಿಳಿಸಿದೆ.[ಆದಾಯ ತೆರಿಗೆ ಪಾವತಿಸಲು ಆನ್ ಲೈನ್ ನೋಂದಣಿ ಹೇಗೆ?]

ಟೈಮ್ಸ್ ನೊಂದಿಗೆ ಉಬರ್ ಟ್ಯಾಕ್ಸಿ ಪಾಲುದಾರಿಕೆ

ಗ್ಲೊಬಲ್ ಡಿಜಿಟಲ್ ಮಾರುಕಟ್ಟೆ ಮತ್ತು ಗ್ರಾಹಕರ ಸೇವೆಯಲ್ಲಿ ಸದೃಢವಾಗಿ ಮುಂದೆ ನುಗ್ಗಲು ಇಂಥ ಕ್ರಮಗಳು ನೆರವಾಗುತ್ತವೆ ಎಂದಿರುವ ಉಬರ್ ಪಾಲುದಾರಿಕೆಯ ಮೊತ್ತ ಸೇರಿದಂತೆ ಇತರ ವಿವರಗಳನ್ನು ಬಿಟ್ಟುಕೊಟ್ಟಿಲ್ಲ. ಈ ಹಿಂದೇ ಟೈಮ್ಸ್ ಗ್ಲೋಬಲ್ ಇಂಟನೆಟ್ ಹಫಿಂಗ್ ಟನ್ ಪೋಸ್ಟ್ ಜತೆ ಪಾಲುದಾರಿಕೆ ಮಾಡಿಕೊಂಡಿತ್ತು. ಈಗ ಉಬರ್ ಸಹ ಪಾಲುದಾರಿಕೆಯಲ್ಲಿ ಭಾಗಿಯಾಗಿದೆ.

ಭಾರತ ಪ್ರಪಂಚದಲ್ಲಿಯೇ ಬೆಳವಣಿಗೆ ಹೊಂದಿತ್ತಿರುವ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ವಾಣಿಜ್ಯ ತಂತ್ರಗಳು ಮತ್ತು ಪ್ರಚಾರ ಬಹಳ ಮುಖ್ಯವಾಗುತ್ತದೆ. ನಮ್ಮ ಕಂಪನಿ ಬೆಳವಣಿಗೆಗೂ ಇದು ನೆರವು ನೀಡುತ್ತದೆ ಎಂದು ಉಬರ್ ಕಂಪನಿಯ ಸಿಇಒ ಟ್ರವೀಸ್ ಕಲಾನಿಕ್ ಹೇಳಿದ್ದಾರೆ.[ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?]

ಟೈಮ್ಸ್ ಆಫ್ ಇಂಡಿಯಾ ಟೆಲಿವಿಷನ್, ಮುದ್ರಣ ಮತ್ತು ಅಂತರ್ಜಾಲ ಮಾಧ್ಯಮದಲ್ಲಿ ಮುನ್ನಡೆ ಸಾಧಿಸಿದೆ. 200 ಮಿಲಿಯನ್ ಭಾರತೀಯರನ್ನು ಸುಲಭವಾಗಿ ತಲುಪುತ್ತಿದೆ. ಉಳಿದ ದೇಶಗಳು ಅಂದರೆ ಚೀನಾ, ಲ್ಯಾಟಿನ್ ಅಮೆರಿಕದಲ್ಲಿಯೂ ಉಬರ್ ಇಂಥ ಪಾಲುದಾರಿಕೆ ಮಾಡಿಕೊಂಡು ಯಶಸ್ಸು ಸಾಧಿಸಿದೆ ಎಂದು ಮಾಹಿತಿ ನೀಡಿದರು.

ಭಾರತದ ಜೈಪುರ, ಅಹಮದಾಬಾದ್, ಬೆಂಗಳೂರು, ಚಂಡಿಗಢ, ಚೆನ್ನೈ, ಹೈದ್ರಾಬಾದ್, ಕೊಚ್ಚಿ, ಕೋಲ್ಕತ್ತಾ, ಮುಂಬೈ ಮತ್ತು ನವದೆಹಲಿಯಲ್ಲಿ ಉಬರ್ ಕ್ಯಾಬ್ ಸೇವೆ ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+