ರುಪೆ ಕಾರ್ಡ್ ಬಳಸಿ ರೈಲ್ವೆ ಟಿಕೆಟ್ ಕಾಯ್ದಿರಿಸಿ

ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ. ಇನ್ನು ಮುಂದೆ ರುಪೆ ಫ್ರಿ ಪೇಯ್ಡ್ ಕಾರ್ಡ್ ಮೂಲಕ ರೈಲ್ವೆ ಟಿಕೆಟ್ ಕಾಯ್ದಿರಿಸಬಹುದು. ಇಂಥ ಹೊಸ ಸೌಲಭ್ಯವನ್ನು ಐಆರ್ ಸಿಟಿಸಿ ಬಿಡುಗಡೆ ಮಾಡಿದೆ.

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ನೆರವಿನಲ್ಲಿ ಐಆರ್ ಸಿಟಿಸಿ ಹೊಸ ಕಾರ್ಯಕ್ರಮವನ್ನು ಜಾರಿ ಮಾಡಿದೆ. ರುಪೆ ಕಾರ್ಡ್ ಬಳಸಿ ವೀಸಾ ಮತ್ತು ಮಾಸ್ಟರ್ ಕಾರ್ಡ್ ರೀತಿಯಲ್ಲೇ ಹಣ ಪಾವತಿಸಲು ಸಾಧ್ಯವಿದೆ. ಆನ್ ಲೈನ್ ಮೂಲಕವೂ ಟಿಕೆಟ್ ಕಾಯ್ದಿರಿಸಲು ಕಾರ್ಡ್ ಬಳಸಬಹುದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.[ಕ್ರೆಡಿಟ್ ಕಾರ್ಡ್ ಮೇಲಿರುವ ಅಂಕೆಗಳು ಏನನ್ನು ಸೂಚಿಸುತ್ತವೆ?]

ರುಪೆ ಕಾರ್ಡ್ ಬಳಸಿ ರೈಲ್ವೆ ಟಿಕೆಟ್ ಕಾಯ್ದಿರಿಸಿ

ಗ್ರಾಹಕರಿಗೆ ಕಾರ್ಡ್ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಚೇರಿ ಮತ್ತು ಐಆರ್ ಸಿಟಿಸಿ ಮುಖೇನ ಕಾರ್ಡ್ ಪಡೆದುಕೊಳ್ಳಬಹುದು ಎಂದು ಐಆರ್ ಸಿಟಿಸಿ ಎಂಡಿ ಎ.ಕೆ. ಮನೋ‍ಚಾ ತಿಳಿಸಿದ್ದಾರೆ.

ಪ್ರಯಾಣಿಕರನ್ನು ಸೆಳೆಯಲು ಕ್ರಮ ತೆಗೆದುಕೊಳ್ಳಲಾಗಿದ್ದು ಪ್ರತಿಯೊಂದು ಟಿಕೆಟ್ ಬುಕಿಂಗ್ ಗೂ ರಿವಾರ್ಡ್ ಪಾಂಟ್ಸ್ ನೀಡಲಾಗುತ್ತದೆ. ನಿಮ್ಮ ಖಾತೆಯ ಸಂಪೂರ್ಣ ವಿವರ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಬುಕಿಂಗ್ ಗೆ 10 ರೂ. ಶುಲ್ಕ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.[ಕ್ರೆಡಿಟ್ ಕಾರ್ಡ್ ಬೇಕೆ? ಆನ್ ಲೈನ್ ನಲ್ಲೇ ಅಪ್ಲೈ ಮಾಡಿ]

ಒಟ್ಟಿನಲ್ಲಿ ಹೊಸ ಸೌಲಭ್ಯ ಯಾವ ಬಗೆಯಲ್ಲಿ ಗ್ರಾಹಕರ ಪ್ರೀತಿಗೆ ಪಾತ್ರವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+