ಮನೆ ಕಟ್ಟಲು ಸಾಲ ಮಾಡಬೇಕು ಎಂದುಕೊಂಡಿದ್ದೀರಾ? ಹಾಗಾದರೆ ನಿಮಗೊಂದು ಸಿಹಿಸುದ್ದಿಯಿದೆ. ಗೃಹಸಾಲದ ಮೇಲಿನ ಬಡ್ಡಿ ದರವನ್ನು ವಿವಿಧ ಬ್ಯಾಂಕ್ ಗಳು ಕಡಿತ ಮಾಡಿವೆ.
ಬಜೆಟ್ ನಂತರದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಮತ್ತು ಖಾಸಗಿ ಬ್ಯಾಂಕ್ ಗಳು ಬಡ್ಡಿ ದರವನ್ನು ಕಡಿತಮಾಡಿವೆ. ಎಸ್ ಬಿಐ ಬಡ್ಡಿದರವನ್ನು ಶೇ. 9.9 ಕ್ಕೆ ಇಳಿಸಿದೆ. ಮಹಿಳೆಯರಿಗೆ ಶೇ. 9.85 ರಷ್ಟು ನಿಗದಿ ಮಾಡಿದೆ.[ಯಾವ ಯಾವ ರೀತಿ ಗೃಹಸಾಲ ಸಿಗುತ್ತೆ?]
ರೆಪೊ ದರ ಇಳಿಕೆಯ ನಂತರ ಬಡ್ಡಿ ದರ ಕಡಿಮೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ರಿಸರ್ವ್ ಬ್ಯಾಂಕ್ ಸಹ ಇಳಿಕೆ ಸಾಧ್ಯತೆ ಬಗ್ಗೆ ಗಮನಹರಿಸುವಂತೆ ವಿವಿಧ ಬ್ಯಾಂಕ್ ಗಳಿಗೆ ತಿಳಿಸಿತ್ತು. ರಿಸರ್ವ್ ಬ್ಯಾಂಕ್ ಹೊಸದಾಗಿ ಬಡ್ಡಿ ದರ ಕಡಿಮೆ ಮಾಡದಿದ್ದರೂ ಇತರ ಬ್ಯಾಂಕ್ ಗಳು ಈ ಕ್ರಮಕ್ಕೆ ಮುಂದಾಗಿವೆ.
ಎಚ್ ಡಿಎಫ್ ಸಿ ಬ್ಯಾಂಕ್ ಸಹ ಶೇ. ೦.2 ರಷ್ಟು ಬಡ್ಡಿ ದರವನ್ನು ಕಡಿತ ಮಾಡಿದೆ. ಗೃಹ ಸಾಲ ತೆಗೆದುಕೊಳ್ಳುವವರಿಗೆ 9.9 ಬಡ್ಡಿ ದರ ನಿಗದಿಯಾಗಿದೆ. ಏಪ್ರಿಲ್ 13 ರಿಂದ ನೂತನ ದರ ಜಾರಿಯಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.[ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]
ಕಳೆದ ವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಪ್ರಮುಖ ಖಾಸಗಿ ಬ್ಯಾಂಕ್ ಗಳೊಂದಿಗೆ ಸಮಾಲೋಚನೆ ನಡೆಸಿದ್ದ ರಿಸರ್ವ್ ಬ್ಯಾಂಕ್ ಗವರ್ವರ್ ರಘುರಾಂ ರಾಜನ್ ಶೇ. 0.25 ಬಡ್ಡಿ ದರ ಕಡಿತದ ಮಾಹಿತಿ ನೀಡಿದ್ದರು.