ಷೇರು ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವವರಿಗೆ ಎಷ್ಟು ತಿಳಿವಳಿಕೆ ಇದ್ದರೂ ಸಾಕಾಗುವುದಿಲ್ಲ. ಸಾಮಾನ್ಯವಾಗಿ ಬಳಕೆ ಮಾಡುವ ಎನ್ಎಸ್ ಡಿಎಲ್ ಮತ್ತು ಸಿಡಿಎಎಸ್ ಎಲ್ ಎಂಬ ಡಿಪಾಸಟರಿಗಳ ಬಗ್ಗೆ ತಿಳಿದುಕೊಳ್ಳಲೇಬೇಕಾಗುತ್ತದೆ.
ನ್ಯಾಶನಲ್ ಸೆಕ್ಯೂರಿಟೀಸ್ ಡಿಪಾಸಿಟರಿ ಲಿಮಿಟೆಡ್(ಎನ್ ಎಸ್ ಡಿಎಲ್) ಮತ್ತು ಸೆಂಟ್ರಲ್ ಡಿಪಾಸಿಟರಿ ಸರ್ವೀಸಸ್ ಇಂಡಿಯಾ ಲಿಮಿಟೆಡ್(ಸಿಡಿಎಸ್ಎಲ್) ಗಳು ಷೇರು ಮಾರುಕಟ್ಟೆಯ ಬ್ಯಾಂಕ್ ಗಳು ಎಂದೇ ಗುರುತಿಸಿಕೊಂಡಿದೆ. [ಭಾರತದಲ್ಲಿ ಡಿಮಾಟ್ ಖಾತೆ ತೆರೆಯುವುದು ಕಡ್ಡಾಯವೇ?]

ಬ್ಯಾಂಕ್ ಗಳಂತೆ ಇವು ಡಿಫಾಸಿಟ್ ಇಟ್ಟುಕೊಳ್ಳದಿದ್ದರೂ ಷೇರು, ಡಿಬೆಂಚರ್, ಬಾಂಡ್ ಗಳನ್ನು ಇಟ್ಟುಕೊಳ್ಳುತ್ತವೆ. ಎಲ್ಲ ಷೇರುದಾರರ ಮಾಹಿತಿಯನ್ನು ಎಲೆಕ್ಟ್ರಾನಿಕ್ ವಿಧಾನದ ಮೂಲಕ ಸಂಗ್ರಹ ಮಾಡಿ ಇಟ್ಟುಕೊಳ್ಳಲಾಗುತ್ತದೆ,.
ನೀವು ನಿಮ್ಮ ಬಳಿಯಿದ್ದ ಷೇರುಗಳನ್ನು ಮಾರಿದರೆ ಹಣ ಡಿಪಾಸಿಟರಿಯಿಂದ ಡೆಬಿಟ್ ಆಗುವುದು. ಅದೇ ನೀವು ಖರೀದಿ ಮಾಡಿದರೆ ಕ್ರೆಡಿಟ್ ಆಗುವುದು. ನೀವು ಡಿಮಾಟ್ ಖಾತೆಯೊಂದನ್ನು ತೆರೆಯಬೇಕೆಂದಾಗ ಇಂಥ ಡಿಪಾಸಟರಿಗಳ ಅಗತ್ಯ ಉಂಟಾಗುತ್ತದೆ. ಯಾವುದೇ ಕಂಪನಿ ತನ್ನ ಷೇರುದಾರರಿಗೆ ಡಿವಿಡೆಂಡ್ ನೀಡಲು ಮುಂದಾದರೆ ಮೊದಲು ಈ ಡಿಪಾಸಿಟರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ.[ಸೇವಾ ಶುಲ್ಕ ಲೆಕ್ಕ ಹಾಕುವುದು ಹೇಗೆ?]
ಎನ್ ಎಸ್ ಡಿಎಲ್ ಮತ್ತು ಸಿಡಿಎಸ್ ಎಲ್ ನಡುವಿವ ವ್ಯತ್ಯಾಸವೇನು?
* ಎನ್ ಎಸ್ ಡಿಎಲ್ ಸಾಮಾನ್ಯವಾಗಿ ದೈತ್ಯ ಕಂಪನಿಗಳ ಜತೆ ನೇರ ಸಂಬಂಧ ಇರಿಸಿಕೊಂಡಿರುತ್ತದೆ. ಐಡಿಬಿಐ ಬ್ಯಾಂಕ್, ಯುಟಿಐ, ಎನ್ ಎಸ್ ಇ ಇಂಥವುಗಳೊಂದಿಗೆ ವ್ಯವಹಾರ ಇರಿಸಿಕೊಂಡಿರುತ್ತದೆ.
* ಸಿಡಿಎಸ್ ಎಲ್ ಸಹ ಕೆಲ ಉನ್ನತ ಮಟ್ಟದ ಕಂಪನಿಗಳೊಂದಿಗೆ ಅಂದರೆ ಬಾಂಬೆ ಸ್ವಾಕ್ ಎಕ್ಸ್ ಚೈಂಜ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್ ಜತೆ ನೇರ ಸಂಬಂಧ ಹೊಂದಿರುತ್ತದೆ.
* ಎನ್ ಎಸ್ ಡಿಎಲ್ ತುಂಬಾ ಹಳೆಯ ಸಂಸ್ಥೆ ಎಂದು ಕರೆಸಿಕೊಂಡರೆ ಸಿಡಿಎಸ್ ಎಲ್ ಇತ್ತೀಚೆಗೆ ಜನಿಸಿದ ಸಂಸ್ಥೆಯಾಗಿದೆ.
* ಡಿಮಾಟ್ ಖಾತೆ ತೆರೆಯಲು ಎರಡು ಕಡೆ ಸಾಧ್ಯವಿದ್ದರೂ ಎನ್ಎಸ್ ಡಿಎಲ್ ಗಿಂತ ಸಿಡಿಎಸ್ ಎಲ್ ನಲ್ಲಿ ವೆಚ್ಚ ಮತ್ತು ಶುಲ್ಕ ಕಡಿಮೆಯಿದೆ.
* ಯಾವುದೇ ಡಿಪಾಸಟರಿಯಲ್ಲಿ ಖಾತೆ ತೆರೆಯುವುದಾದರೂ ಮೊದಲು ಸೆಕ್ಯೂರಿಟಿ ಎಕ್ಸ್ ಚೈಂಜ್ ಬೋರ್ಡ್ ನಲ್ಲಿ ನೋಂದಣಿ ಮಾಡಿಕೊಂಡಿರಬೇಕಾಗುತ್ತದೆ.
* ಒಮ್ಮೆ ನೀವು ವ್ಯವಹಾರ ಆರಂಭ ಮಾಡಿದರೆ ನಿಮ್ಮ ಖರೀದಿ ಮತ್ತು ಮಾರಾಟದ ಮಾಹಿತಿಗಳು ದಾಖಲಾಗುತ್ತ ಹೋಗುತ್ತವೆ.
* ನಿಮ್ಮ ವ್ಯವಹಾರದ ಬಗೆಗಿನ ಸ್ಟೇಟ್ ಮೆಂಟ್ ಗಳನ್ನು ಎರಡು ಡಿಪಾಸಿಟರಿಗಳು ಕಾಲಕಾಲಕ್ಕೆ ನೀಡುತ್ತಿರುತ್ತವೆ.
ಕೊನೆ ಮಾತು: ಎರಡು ಡಿಪಾಸಟಿರಿಗಳ ನಡುವೆ ಬಹಳ ವ್ಯತ್ಯಾಸಗಳೇನು ಇಲ್ಲ, ಆದರೆ ನಿಮ್ಮ ಬ್ರೋಕರ್ ನಿಮ್ಮ ಹೆಸರಿನಲ್ಲಿ ಡಿಮಾಟ್ ಖಾತೆ ತೆರೆಯಲು ಮುಂದಾದಾಗ ಆತ ಯಾವ ಡಿಪಾಸಟರಿಯಲ್ಲಿ ತೆರೆಯುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.(ಗುಡ್ ರಿಟರ್ನ್ಸ್. ಇನ್)


Click it and Unblock the Notifications