ಮುಂಬೈ, ಆಗಸ್ಟ್.27: ಇಳಿಕೆಯ ದಾರಿಯಲ್ಲಿ ಹೋಗುತ್ತಿದ್ದ ಷೇರು ಪೇಟೆ ಗುರುವಾರ ಚೇತರಿಸಿಕೊಂಡಿದೆ. ಬಂಡವಾಳ ಹೂಡಿಕೆದಾರರು ನಿಟ್ಟುಸಿರು ಬಿಡುವಂತೆ ಮಾಡಿದೆ. ಸೆನ್ಸೆಕ್ಸ್ 507 .15 ಅಂಕ ಏರಿಕೆ ಕಂಡರೆ, ನಿಫ್ಟಿ 157 ಅಂಕ ಏರಿಕೆ ದಾಖಲಿಸಿತು.
26,231.19 ರಲ್ಲಿ ಬಿಎಸ್ ಇ ಕೊನೆಯಾದರೆ, 7,948.95 ಅಂಕ ಗಳಿಸಿ ನಿಫ್ಟಿ ದಿನದ ವ್ಯವಹಾರ ಮುಗಿಸಿತು. ದಿನದ ಆರಂಭದಿಂದಲೇ ಮಾರುಕಟ್ಟೆ ಏರಿಕೆಯ ಹಾದಿಯಲ್ಲಿ ಸಾಗುತ್ತಿತ್ತು. ಆಗಸ್ಟ್ ತಿಂಗಳ ವ್ಯವಹಾರ ಮುಗಿಸಲು ಗುರುವಾರ ಕೊನೆ ದಿನವಾದ್ದರಿಂದ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿತು ಎಂದು ವಿಶ್ಲೇಷಣೆ ಮಾಡಲಾಗಿದೆ.[ಅಂತಾರಾಷ್ಟ್ರೀಯ ಚಿನ್ನದ ದರ ಗಣನೀಯ ಇಳಿಕೆ: ಹೂಡಿಕೆಗೆ ಸಕಾಲವೇ?]

ಅತ್ತ ಶಾಂಘೈ ಮತ್ತು ಹಾಂಕಾಂಗ್ ಮಾರುಕಟ್ಟೆಗಳಲ್ಲೂ ಕೊಂಚ ಏರಿಕೆ ಕಂಡುಬಂದಿದ್ದು ಏಷ್ಯಾ ಷೇರುಗಳ ಮೇಲೆ ಪ್ರಭಾವ ಬೀರಿತು. ತೈಲ ಬೆಲೆ ತೀವ್ರ ತೆರನಾದ ಇಳಿಕೆ ದಾಖಲಿಸಿಕೊಂಡರೂ ರುಪಾಯಿ ತನ್ನ ಸ್ಥಿರತೆ ಕಾಯ್ದುಕೊಂಡಿತು. ಆದರೆ ಸಾಂಸ್ಥಿಕ ಹೂಡಿಕೆದಾರರು ವಹಿವಾಟಿನಿಂದ ದೂರವೇ ಇದ್ದರು.
ಇಳಿಕೆಯಲ್ಲಿ ಸಾಗುತ್ತಿದ್ದ ಮಿಡ್ ಕ್ಯಾಪ್ ಷೇರುಗಳು ಗುರುವಾರ ಗಳಿಕೆ ದಾಖಲಿಸಿದವು. ಎಚ್ ಡಿ ಎಫ್ ಸಿ ಮತ್ತು ಟಾಟಾ ಸ್ಟೀಲ್ ಸಹ ಕೊಂಚ ಪ್ರಮಾಣದ ಏರಿಕೆ ಕಂಡವು. ಇಡಿ ದಿನದ ಬೆಳವಣಿಗೆ ಹೂಡಿಕೆದಾರರ ದೃಷ್ಟಿಯಲ್ಲಿ ಸಕಾರಾತ್ಮಕವಾಗಿತ್ತು. ಕಳೆದ ಒಂದು ವಾರದಿಂದ ತೀವ್ರ ತೆರನಾದ ತಲ್ಲಣ ಅನುಭವಿಸಿದ್ದ ಮಾರುಕಟ್ಟೆ ಚೇತರಿಕೆ ದಾಖಲಿಸಿತು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications