ಮುಂಬೈ, ಅಕ್ಟೋಬರ್. 28: ಕಳೆದ ವಾರ ಚೇತರಿಕೆ ಹಾದಿಗೆ ಮರಳಿದ್ದ ಷೇರುಮಾರುಕಟ್ಟೆ ಈ ವಾರ ಇಳಿಕೆಯ ಹಾದಿಯಲ್ಲೇ ಮುಂದುವರಿದಿದೆ. ಪ್ರತಿ ದಿನ 100 ಅಂಕ ಕಳೆದುಕೊಳ್ಳುತ್ತಿದ್ದ ಮಾರುಕಟ್ಟೆ ಬುಧವಾರ 213 ಅಂಕಗಳ ಭಾರೀ ಕುಸಿತ ಕಂಡಿದ್ದು ಹೂಡಿಕೆದಾರರಿಗೆ ನಷ್ಟ ಮಾಡಿದೆ.
ಏಷ್ಯಾ ಷೇರು ಮಾರುಕಟ್ಟೆಗಳಲ್ಲಿ ಕಂಡು ಬಂದ ಕುಸಿತ, ಅಕ್ಟೋಬರ್ ತಿಂಗಳ ವಹಿವಾಟು ಒಪ್ಪಂದಗಳ ಇತ್ಯರ್ಥಕ್ಕೆಅಕ್ಟೋಬರ್ 29 ಕೊನೇ ದಿನವಾಗಿರುವ ಕಾರಣ, ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಸೆನ್ಸೆಕ್ಸ್ 213.68 ಅಂಕಗಳ ನಷ್ಟಕ್ಕೆ ಗುರಿಯಾಗಿ 27,039.76 ಅಂಕಗಳ ಮಟ್ಟಕ್ಕೆ ಇಳಿಯಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 8,200ರ ಮಟ್ಟಕ್ಕಿಂತ ಕೆಳಗೆ ಜಾರಿದ್ದು ದಿನಾಂತ್ಯಕ್ಕೆ 61.70 ಅಂಕಗಳ ನಷ್ಟದೊಂದಿಗೆ 8,171.20 ಅಂಕಗಳ ಮಟ್ಟಕ್ಕೆ ಇಳಿಯಿತು.[ಪ್ರಾಪರ್ಟಿ ಟ್ಯಾಕ್ಸ್ ಎಂದರೇನು? ಯಾರು ಕಟ್ಟಬೇಕು?]

ಇಂದಿನ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕಿಂಗ್, ರಿಯಲ್ಟಿ ಮತ್ತು ಯಂತ್ರೋಪಕರಣ ರಂಗದ ಷೇರುಗಳು ತೀವ್ರ ಹಿನ್ನಡೆ ಅನುಭವಿಸಿದವು.
ಅಕ್ಟೋಬರ್ 28 ರಂದು ಯಾವ ಷೇರುಗಳು ಸುದ್ದಿಯಲ್ಲಿದ್ದವು ಎಂಬುದನ್ನು ನೋಡಿಕೊಂಡು ಬರೋಣ
ಎಕ್ಸಿಸ್ ಬ್ಯಾಂಕ್
ಎಕ್ಸಿಸ್ ಬ್ಯಾಂಕ್ ಷೇರುಗಳು ತೀವ್ರ ನಷ್ಟ ಅನುಭವಿಸಿದವು. ಎರಡನೇ ತ್ರೈಮಾಸಿಕದ ಲಾಭದ ವರದಿ ಹೊರತಾಗಿಯೂ ನಷ್ಟ ಕಂಡವು. ದಿನದ ಕೊನೆಯಲ್ಲಿ 484 ಅಂಕದಲ್ಲಿ ಕೊನೆಯಾಯಿತು. ಶೇ. 7.15 ಒಳಿಕೆ ದಾಖಲಿಸಿತು.
ಎಸ್ ಕೆ ಎಸ್ ಮೈಕ್ರೋಫೈನಾನ್ಸ್
ಮುದ್ರಾ ಬ್ಯಾಂಕ್ ಯೋಜನೆಯಡಿ 100 ಕೋಟಿ ಮಂಜೂರಿಯಾದ ಹಿನ್ನೆಲೆಯಲ್ಲಿ ಎಸ್ ಕೆ ಎಸ್ ಮೈಕ್ರೋಫೈನಾನ್ಸ್ ಶೇ. 6 ಬೆಳವಣಿಗೆ ಕಂಡಿತು.
ಸನ್ ಟಿವಿ
ಸನ್ ಟಿವಿ ಷೇರುಗಳು ಸಹ ಶೇ. 41.37 ಏರಿಕೆ ಸಾಧಿಸಿದವು. ಮೂರನೇ ತ್ರೈಮಾಸಿಕದಲ್ಲಿ 218 ಕೋಟಿ ಲಾಭ ಗಳಿಸಿದ್ದು ದರ ಏರಿಕೆಗೆ ಪ್ರಮುಖ ಕಾರಣವಾಯಿತು.


Click it and Unblock the Notifications