ಷೇರು ಪೇಟೆಯಲ್ಲಿ ಮುಗಿಯದ ತಲ್ಲಣ: 248 ಅಂಕ ನಷ್ಟ

ಮುಂಬೈ, ನವೆಂಬರ್. 05: ಷೇರು ಪೇಟೆಯಲ್ಲಿ ಕುಸಿತದ ಪರ್ವ ಮುಂದುವರಿದಿದೆ. ಬಿಹಾರ ಚುನಾವಣೆ ಮತದಾನೋತ್ತರ ಸಮೀಕ್ಷೆಗೆ ಹೆದರಿದ ಪೇಟೆ ಗುರುವಾರ 248.72 ಅಂಕ ಕಳೆದುಕೊಂಡಿತು. ಅಂತಿಮವಾಗಿ 26,304.20 ಅಂಕದಲ್ಲಿ ವಹಿವಾಟು ಕೊನೆಯಾಯಿತು.

ಇದೇ ವೇಳೆ ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಕೂಡ 84.75 ಅಂಕಗಳ ನಷ್ಟಕ್ಕೆ ಗುರಿಯಾಗಿ 8,000 ಗಡಿಮ ಬಿಟ್ಟು ಕೆಳಕ್ಕೆ ಇಳಿದಿದ್ದು 7,955.45 ಅಂಕದಲ್ಲಿ ಕೊನೆಯಾಯಿತು.

ಷೇರು ಪೇಟೆಯಲ್ಲಿ ಮುಗಿಯದ ತಲ್ಲಣ: 248 ಅಂಕ ನಷ್ಟ

ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಗುರುವಾರ ಕೊನೆಗೊಂಡಿತು. ಫ‌ಲಿತಾಂಶ ನವೆಂಬರ್‌ 8ರಂದು ಹೊರಬೀಳಲಿದ್ದು ಅಲ್ಲಿಯವರೆಗೆ ಮಾರುಕಟ್ಟೆ ಇದೇ ಬಗೆಯಲ್ಲಿ ಮುಂದುವರಿಯಲಿದೆ ಎಂದು ಹೇಳಲಾಗಿದೆ.

ಹಲವಾರು ಬ್ಲೂಚಿಪ್‌ ಕಂಪೆನಿಗಳ ಎರಡನೇ ತ್ತೈಮಾಸಿಕದ ಫ‌ಲಿತಾಂಶಗಳು ಕಳಪೆ ಯಾಗಿರುವುದು, ಅಮೆರಿಕದ ಫೆಡರಲ್‌ ಬ್ಯಾಂಕ್‌ ಡಿಸೆಂಬರ್ ನಲ್ಲಿ ಬಡ್ಡಿ ದರ ಏರಿಕೆ ಮಾಡಲಿರುವುದು. ಕೇಂದ್ರ ಸರ್ಕಾರ ಚಿನ್ನದ ಹೊಸ ಮೂರು ಯೋಜನೆ ಜಾರಿ ಮಾಡಿದ್ದು ಪರಿಣಾಮ ಬೀರಿತು.

ಏಷ್ಯಾದ ಇತರ ಮಾರುಕಟ್ಟೆಗಳು ಏರಿಕೆ ಸಾಧಿಸಿದ್ದು ವಿಶೇಷ. ಚೀನಾ ಮಾರುಕಟ್ಟೆ ಶೇ. 2 ಮತ್ತು ಜಪಾನ್ ಶೇ. 1.2 ರಷ್ಟು ಏರಿಕೆ ಕಂಡಿತು. ಆದರೆ ಈ ಯಾವ ಅಂಶಗಳು ಭಾರತದ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿಲ್ಲ. ಬ್ಯಾಂಕಿಂಗ್ ಷೇರುಗಳು ತೀವ್ರ ನಷ್ಟ ಅನುಭವಿಸಿದವು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+