ಸರ್ಕಾರದ ತನ್ನ ಬಳಿ ಇರುವ ಕೋಲ್ ಇಂಡಿಯಾ ಷೇರುಗಳ ಪೈಕಿ ಶೇ. 10ನ್ನು ಮಾರಾಟ ಮಾಡಲು ತೀರ್ಮಾನ ಮಾಡಿದೆ. ಈ ಮೂಲಕ ಬೊಕ್ಕಸಕ್ಕೆ 20 ಸಾವಿರ ಕೋಟಿ ರು. ಬಂಡವಾಳ ಕ್ರೋಢಿಕರಣ ಮಾಡುವ ಗುರಿ ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಲ್ಲಿದ್ದಲು ಮತ್ತು ಇಂದನ ಸಚಿವ ಪಿಯೂಷ್ ಘೋಯೆಲ್, ಸರ್ಕಾರ ಶೇ. 10 ಷೇರು ಮಾರಾಟಕ್ಕೆ ನಿರ್ಧಾರ ಮಾಡಿದೆ ಎಂದು ತಿಳಿಸಿದರು. ಸದ್ಯದ ಮಾರುಕಟ್ಟೆ ದರದಲ್ಲಿ ಶೇ. 10 ರಷ್ಟು ಷೇರನ್ನು ಹೊರಹಾಕಿದರೆ 21,137.71 ಕೋಟಿ ಬಂಡವಾಳ ಸಂಗ್ರಹ ಸಾಧ್ಯವಾಗಲಿದೆ.[ಷೇರು ಮಾರುಕಟ್ಟೆಯಿಂದ ದೂರ ಇರೋದೆ ಒಳ್ಳೆದು, ಯಾಕಂದ್ರೆ...]

ಅಲ್ಪ ಬಂಡವಾಳ ವಿಭಾಗದಿಂದ 28,500 ಸಾವಿರ ಕೋಟಿ ಆದಾಯವನ್ನು, ಬೃಹತ್ ವಿಭಾಗದಿಂದ 41 ಸಾವಿರ ಕೋಟಿ ಆದಾಯವನ್ನು ಕೇಂದ್ರ ಸರ್ಕಾರ ನಿರೀಕ್ಷೆಮಾಡಿ ಇಟ್ಟುಕೊಂಡಿತ್ತು. ಇದೀಗ ಷೇರು ಮಾರುಕಟ್ಟೆ ಅಸ್ಥಿರವಾಗಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಇಂಥ ಕ್ರಮ ತೆಗೆದುಕೊಂಡಿದೆ.[ಪ್ರಥಮ ಗುಟುಕಲ್ಲೇ 'ಕಹಿ'ಯಾದ 'ಕಾಫಿ' ಡೇ ಷೇರುಗಳು]
ಕೋಲ್ ಇಂಡಿಯಾ ಗೆ ಸಂಬಂಧಿಸಿದ ಷೇರು ಮಾರಾಟದ ಬಗ್ಗೆ ಬಜೆಟ್ ನಲ್ಲಿಯೇ ಕೇಂದ್ರ ಸರ್ಕಾರ ಉಲ್ಲೇಖ ಮಾಡಿತ್ತು. ಇದೀಗ ಮಾರಾಟಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದೆ. ಒಐಎಲ್, ನಾಲ್ಕೊ, ಎನ್ ಎಂಡಿಸಿ, ಎನ್ ಟಿಪಿಸಿ, ಒಎನ್ ಜಿಸಿ. ಬಿಎಚ್ ಇಲ್ ಷೇರುಗಳನ್ನು ಕೋಲ್ ಇಂಡಿಯಾ ಒಳಗೊಂಡಿರುತ್ತದೆ.


Click it and Unblock the Notifications