ನಿವೃತ್ತಿ ನಂತರ ನಿಮ್ಮ ಹಿತ ಕಾಪಾಡುವ ಇಪಿಎಫ್ ಹಣಕ್ಕೆ ಇನ್ನು ಮುಂದೆ ಹೆಚ್ಚಿನ ಬಡ್ಡಿ ಲಭ್ಯವಾಗಲಿದೆ. 2015-16 ನೇ ಸಾಲಿಗೆ ಸಂಬಂಧಿಸಿದ ಕೊನೆಯ ಎರಡು ವರ್ಷದ ಉಳಿತಾಯದ ಹಣಕ್ಕೆ ಶೇ. 8.75 ಬಡ್ಡಿ ಲಭ್ಯವಾಗಲಿದ್ದು ಯಾವ ಬದಲಾವಣೆ ಮಾಡಲಾಗುತ್ತಿಲ್ಲ.
ಸೇಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ (ಸಿಬಿಟಿ) ಡಿಸೆಂಬರ್ 10 ರಂದು ನಡೆಯಲಿರುವ ಸಭೆಯಲ್ಲಿ ಹೊಸ ಬಡ್ಡಿ ದರವನ್ನು ನಿರ್ಧಾರ ಮಾಡಲಾಗುವುದು. ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ನೇತೃತ್ವದಲ್ಲಿ ಸಭೆ ನಡೆಯಲಿದೆ.[ಆನ್ ಲೈನ್ ನಲ್ಲೇ ಪಿಎಫ್ ಹಣ ವಿಥ್ ಡ್ರಾ ಮಾಡಿ]
ಇಪಿಎಫ್‌ಒ ಕಳೆದ ಎರಡು ಹಣಕಾಸು ವರ್ಷಗಳಿಗೆ ಅಂದರೆ 2013-14 ಮತ್ತು 2014-15ಕ್ಕೆ ಶೇ 8.75ರಷ್ಟು ಬಡ್ಡಿ ನೀಡಿತ್ತು. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ತಗ್ಗಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಪಿಎಫ್ ಬಡ್ಡಿಯನ್ನು ಶೇ 8.75ನ್ನೇ ಉಳಿಸಿಕೊಳ್ಳುವುದೋ ಅಥವಾ ಏರಿಕೆ ಮಾಡುವುದೋ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.[ನಿಮ್ಮ ಪಿಎಫ್ ಹಣ ಪಡೆಯಲು ಮಾಲೀಕರ ಹಂಗಿಲ್ಲ]
ಯಾವುದೇ ಒಂದು ಕಡೆಯಲ್ಲಿ ಬಡ್ಡಿ ದರ ಹೆಚ್ಚಳ ಮಾಡಿದರೆ ಅದು ಉಳಿದ ಉಳಿತಾಯ ಯೋಜನೆಗಳ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಸರ್ಕಾರ ಈಗ ನೀಡುತ್ತಿರುವ ಬಡ್ಡಿ ಪ್ರಮಾಣ ಕಾಯ್ದುಕೊಂಡರೂ ಆಶ್ಚರ್ಯವಿಲ್ಲ.