ಬೆಂಗಳೂರು ಮೂಲದ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ತನ್ನ ಮೂರನೇ ತ್ರೈಮಾಸಿಕದಲ್ಲಿ ಶೇ. 4 ಲಾಭ ಗಳಿಸಿದೆ. ಷೇರು ಮಾರುಕಟ್ಟೆ ತಲ್ಲಣದ ನಡುವೆಯೂ ಇನ್ಫಿ ಸಾಧನೆ ಮೆಚ್ಚಲೇಬೇಕು.
ಯಾವ ಕಾರಣದಿಂದ ಇನ್ಫೋಸಿಸ್ ಅಧಿಕ ಲಾಭ ಗಳಿಸಲು ಸಾಧ್ಯವಾಯಿತು ಎಂಬುದನ್ನು ನಾವು ಲೆಕ್ಕ ಹಾಕಬೇಕು. ಇನ್ಫಿ ಲಾಭ ಗಳಿಸಲು ಕಾರಣವಾದ ನಾಲ್ಕು ಅಂಶಗಳು ಇಲ್ಲಿವೆ.[Q3ಗೆ ಮುನ್ನ ನೆಲ ಕಚ್ಚಿದ್ದ ಟಿಸಿಎಸ್ ಷೇರುಗಳು]

1. ರೆವೆನ್ಯೂ ಗೈಡನ್ಸ್
ಕಂಪನಿ ತನ್ನ ಹಣಕಾಸು ವ್ಯವಹಾರದಲ್ಲಿ ಮಹತ್ತರ ಬದಲಾವಣೆ ಮಾಡಿತ್ತು. ರೆವೆನ್ಯೂ ಗೈಡನ್ಸ್ ನ್ನು ಶೇ. 12.8 ರಿಂದ ಶೇ. 13.2 ಕ್ಕೆ ಏರಿಸಿದ್ದು ಲಾಭದಾಯಕವಾಗಿ ಮಾರ್ಪಾಡಾಯಿತು. ಅಕ್ಟೋಬರ್ ನಲ್ಲಿ ತೆಗೆದುಕೊಂಡ ಬದಲಾವಣೆಗಳು ಲಾಭ ತಂದವು.
2. ನಿವ್ವಳ ಲಾಭ
ಕಳೆದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲೇ ಕಂಪನಿ ಶೇ. 2 ರಷ್ಟು ಲಾಭ ದಾಖಲಿಸಿತ್ತು. ಆದಾಯ ಸಹ ಶೇ. 1.7 ಏರಿಕೆ ದಾಖಲಿಸಿತ್ತು.
3. ಡಾಲರ್ ಎದಿರು
ಡಾಲರ್ ಲೆಕ್ಕದಲ್ಲೂ ಇನ್ಫಿ ಮಹತ್ತರ ಲಾಭ ಗಳಿಸಿತು. ಡಾಲರ್ ಲೆಕ್ಕದಲ್ಲಿ 524 ಮಿಲಿಯನ್ ಗೆ ಲಾಭ ಏರಿತ್ತು. ಇದರೊಂದಿಗೆ ಆದಾಯವು ಶೇ. 8.5 ಏರಿಕೆ ದಾಖಲಿಸಿತ್ತು.[Q3: ಇನ್ಫೋಸಿಸ್ ಗೆ ನಿರೀಕ್ಷೆಗೂ ಮೀರಿದ ಲಾಭ]
4. ತೆರಿಗೆ ಬಿಟ್ಟು ಲಾಭ
ಮೂಲಾಂಕಲ್ಲೂ ಕಂಪನಿ ಗಣನೀಯ ಪ್ರಮಾಣದ ಏರಿಕೆ ದಾಖಲಿಸಿತು. ತ್ರೈಮಾಸಿಕದ ಅಂತ್ಯಕ್ಕೆ 3,993 ಕೋಟಿ ಲಾಭ ದಾಖಲಿಸಿ 153 ಮೂಲಾಂಕದ ಹೆಚ್ಚಳ ಕಂಡಿತು. ಶೇ. 25.53 ಏರಿಕೆ ದಾಖಲೆಯೇ ಸರಿ.
ಇದಲ್ಲದೇ ಕೌಶಲ್ಯ ಅಭಿವೃದ್ಧಿ, ಮೂಲ ವ್ಯವಸ್ಥೆಗಳ ಸುಧಾರಣೆಗೆ ಹೆಚ್ಚಿನ ಗಮನ ನೀಡಿದ್ದು ಕಂಪನಿಯ ಸಾಧನೆಗೆ ಕಾರಣವಾಯಿತು ಎಂದು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಹೇಳಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹೇಗಿದೆ?
ಶೇ. 4.77 ಏರಿಕೆ ಕಂಡಿರುವ ಇನ್ಫೋಸಿಸ್ ಷೇರುಗಳು 1,1133 ರು. ಮುಖಬೆಲೆಯಲ್ಲಿ ಮಾರಾಟವಾಗುತ್ತಿವೆ. ಇಂಟ್ರಾ ಡೇ ಮಾರುಕಟ್ಟೆಯಲ್ಲಿಯೂ ಉತ್ತಮ ಲಾಭವನ್ನೇ ತಂದು ಕೊಡುತ್ತಿವೆ. (ಗುಡ್ ರಿಟರ್ನ್ಸ್.ಇನ್)


Click it and Unblock the Notifications