ಡಿಎಂಕೆಗೆ ಸೋಲು, ನೆಲಕಚ್ಚಿದ ಸನ್ ಟಿವಿ ಷೇರುಗಳು!

ಚೆನ್ನೈ, ಮೇ 19: ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ(ಮೇ 19) ಹೊರ ಬಂದಿದ್ದು, ಆಡಳಿತಾರೂಢ ಎಐಎಡಿಎಕೆ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದೆ. ಈ ಡಿಎಂಕೆ ಪಕ್ಷ ಸೋಲು ಅನುಭವಿಸಿದ್ದರಿಂದ ನಿರೀಕ್ಷೆಯಂತೆ ಸನ್ ಟಿವಿ ಷೇರುಗಳು ನೆಲಕಚ್ಚಿವೆ.

ಜಯಲಲಿತಾ ನೇತೃತ್ವದ ಪಕ್ಷ 232 ಸ್ಥಾನಗಳ ಪೈಕಿ 135 ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಮತ್ತೊಮ್ಮೆ ಅಧಿಕಾರ ಸ್ಥಾಪಿಸಲು ಸಜ್ಜಾಗಿದೆ. ಕರುಣಾನಿಧಿ ನೇತೃತ್ವದ ಡಿಎಂಕೆ ಪಕ್ಷ ಎರಡನೇ ಸ್ಥಾನಕ್ಕೆ ಕುಸಿದಿದ್ದರಿಂದ ಸನ್ ಟಿವಿ ಷೇರುಗಳು ಶೇ 10ರಷ್ಟು ಇಳಿಕೆಯಾಗಿದೆ.[ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ]

ಡಿಎಂಕೆಗೆ ಸೋಲು, ನೆಲಕಚ್ಚಿದ ಸನ್ ಟಿವಿ ಷೇರುಗಳು!
Sun TV Network: Quotes, News
BSE 592.60BSE Quote14.7 (-2.48%)
NSE 593.30NSE Quote15.3 (-2.58%)

ಏರು ಪೇರಾದ ಸಮೀಕ್ಷೆ ವರದಿ: ಕಳೆದ ಒಂದು ವಾರದಿಂದ ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆ ವರದಿಗಳಲ್ಲಿ ಡಿಎಂಕೆಗೆ ನಿಚ್ಚಳ ಗೆಲುವು ಎಂದು ಹೇಳಲಾಗಿತ್ತು. ಆದರೆ, ಚುನಾವಣೆ ಫಲಿತಾಂಶ ಇದಕ್ಕೆ ವ್ಯತಿರಿಕ್ತವಾಗಿ ಬಂದಿದ್ದು, ಷೇರುಪೇಟೆಯಲ್ಲಿ ಪರಿಣಾಮ ಬೀರಿದೆ.

ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅವರ ಸಂಬಂಧಿ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಷೇರುಗಳು ಗುರುವಾರ ಬೆಳಗ್ಗೆನಿಂದಲೇ ಕುಸಿಯಲು ಆರಂಭಿಸಿತು. 288ರು ನಂತೆ ಶೇ 10ರಷ್ಟು ಇಳಿಕೆ ಕಂಡು ಬಂದಿತು.

ಈ ಸಮಯಕ್ಕೆ ಬಿಎಸ್ ಇನಲ್ಲಿ 56.85ರು ಕಳೆದುಕೊಂಡು 370.80 ರು (ಶೇ 13.30 ಇಳಿಕೆ) ನಂತೆ ವಹಿವಾಟು ನಡೆಸಿದ್ದರೆ, ಎನ್ಎಸ್ಇನಲ್ಲಿ 370.೦0 ರು (ಶೇ 13.44 ಇಳಿಕೆ) ನಂತೆ ಇಳಿದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+