For Quick Alerts
ALLOW NOTIFICATIONS  
For Daily Alerts

ಸರ್ಕಾರಿ ಬ್ಯಾಂಕ್ ನೌಕರರ ಮುಷ್ಕರ: ಇಂದು ಮತ್ತು ನಾಳೆ

|

ಭಾರತೀಯ ಸ್ಟೇಟ್ ಬ್ಯಾಂಕಿ (ಎಸ್ಬಿಐ) ನೊಂದಿಗೆ 5 ಬ್ಯಾಂಕುಗಳ ವಿಲೀನ ಹಾಗೂ ಐಡಿಬಿಐ ಬ್ಯಾಂಕಿನ ಖಾಸಗಿಕರಣ ವಿರೋಧಿಸಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ನೌಕರರು ಇಂದು ಮತ್ತು ನಾಳೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಜುಲೈ 12 ಮತ್ತು 13 ರಂದು ದೇಶ್ಯಾದಂತ ಬ್ಯಾಂಕ್ ಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಬ್ಯಾಂಕ್ ನೌಕರರ ಮುಷ್ಕರ: ಇಂದು ಮತ್ತು ನಾಳೆ

ಕಾರ್ಮಿಕ ಆಯುಕ್ತರೊಂದಿಗಿನ ಮಾತುಕತೆ ವಿಫಲಗೊಂಡಿರು ಹಿನ್ನೆಲೆಯಲ್ಲಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಬಾರತೀಯ ಬ್ಯಾಂಕ್ ನೌಕರರ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಸಿ. ಎಚ್. ವೆಂಕಟಾಚಲಂ ಹೇಳಿದ್ದಾರೆ. ಅಖಿಲ ಬಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಸ್ಟೇಟ್ ಸೆಕ್ಟರ್ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಶನ್ ಮುಷ್ಕರಕ್ಕೆ ಬೆಂಬಲ ನೀಡಿವೆ.

ಎಸ್ಬಿಐ ನ 5 ಸಹವರ್ತಿ ಬ್ಯಾಂಕುಗಳು ಜುಲೈ 12 ರಂದು ಮುಷ್ಕರಕ್ಕೆ ಕರೆ ನೀಡಿದ್ದು ಜುಲೈ13 ರಂದು ಸರ್ಕಾರಿ ಸ್ವಾ ಮ್ಯದ ಬ್ಯಾಂಕುಗಳು ಮುಷ್ಕರಕ್ಕೆ ಮುಂದಾಗಿವೆ.

ಮುಷ್ಕರದಿಂದಾಗಿ ಬ್ಯಾಂಕುಗಳ ಶಾಖೆಗಳಲ್ಲಿ ಎರಡು ದಿನಗಳವರೆಗೆ ಚೆಕ್ ಕ್ಲಿಯರೆನ್ಸ್, ಹಣ ಪಡೆಯುವುದು,ಮತ್ತು ಜಮಾ ಮಾಡುವುದು ಸೇರಿದಂತೆ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿಯಾಗಲಿದೆ.

ಹೀಗಾಗಿ ಬ್ಯಾಂಕುಗಳ ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರು ತುರ್ತಾಗಿ ಆಗಬೇಕಿರುವ ಬ್ಯಾಂಕಿನ ವ್ಯವಹಾರಗಳನ್ನು ಇಂದೆ ಮಾಡಿ ಮುಗಿಸುವುದು ಸೂಕ್ತ.

English summary

Tomorrow and day after tomorrow Banks Strike against SBI Tieup

Banking operations could be hit for two days this week as a section of public sector bank employees have threatened to go on a nationwide strike beginning July 12 to protest against the proposed merger of SBI associates and privatisation of IDBI Bank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X