ಐಟಿ ಜಗತ್ತಿನ ದಿಗ್ಗಜ ಕಂಪನಿ ಇನ್ಫೊಸಿಸ್ ಷೇರುಗಳು ಈ ತ್ರೈಮಾಸಿಕದಲ್ಲಿ ನೆಲಕಚ್ಚಿವೆ. ಕಳೆದ ಕೆಲ ತ್ರೈಮಾಸಿಕಗಳಿಗೆ ಹೋಲಿಸಿದರೆ ಈ ತ್ರೈಮಾಸಿಕದ ಷೇರುಗಳು ಗಣನೀಯವಾಗಿ ಇಳಿಮುಖವಾಗಿವೆ ಹಾಗೂ ಕಂಪನಿಯ ಕೆಲ ತಪ್ಪು ಎಣಿಕೆಯಿಂದಾಗಿ ಷೇರುಗಳು ಮುಗ್ಗರಿಸಿವೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಶೇ 9ರಷ್ಟು ಷೇರುಗಳು ಮುಗ್ಗರಿಸಿದ್ದಕ್ಕೆ ಇಲ್ಲಿ 5 ಪ್ರಮುಖ ಕಾರಣಗಳನ್ನು ನೀಡಲಾಗಿದೆ.[ಭಾರತದ ಅತ್ಯುತ್ತಮ 5 ಮೊಬೈಲ್ ಅಪ್ಲಿಕೇಶನ್‌ಗಳು ಯಾವವು?]
ಆದಾಯ ಸಂಬಂಧಿ ಮಾರ್ಗದರ್ಶನದ ಕೊರತೆ
ಪ್ರಸ್ತುತ ವರ್ಷದಲ್ಲಿ ಕಂಪನಿಯ ವರಮಾನಕ್ಕೆ ಸಂಬಂಧಿಸಿದಂತೆ ಸರಿಯಾದ ಮಾರ್ಗದರ್ಶನ ಇಲ್ಲದಿರುವುದು ಷೇರುಗಳು ಮುಗ್ಗರಿಸಲು ಮುಖ್ಯವಾದ ಕಾರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಕಳೆದ ಬಾರಿ 11.5% - 13.5% ರ ವ್ಯಾಪ್ತಿಯಲ್ಲಿದ್ದ ಕಂಪನಿಯ ಮಾರ್ಗದರ್ಶಿ ವೆಚ್ಚ ಈ ಸಾಲಿನಲ್ಲಿ 10.5% -12% ಕ್ಕೆ ಇಳಿದಿದೆ. ಇದು ಖಂಡಿತವಾಗಿಯೂ ಉತ್ತಮ ಬೆಳವಣಿಗೆ ಅಲ್ಲ.
ಡಾಲರ್ ಆದಾಯ ಅಂದಾಜಿಸುವಲ್ಲಿ ವಿಫಲ
ಕಂಪನಿಯು $2500 ಮಿಲಿಯನ್ ಡಾಲರ್ ನಿಂದ $2501 ಮಿಲಿಯನ್ ಡಾಲರ್ ನಷ್ಟು ಆದಾಯದಲ್ಲಿ ಅತಿದೊಡ್ಡ ವೈಫಲ್ಯ ಕಂಡಿದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಡಾಲರ್ ಆದಾಯದಲ್ಲಿ ವೈಫಲ್ಯ ಅನುಭವಿಸುವುದು ಒಳ್ಳೆಯ ವಿಚಾರವಲ್ಲ. ಹೀಗಾಗಿ 9%ರಷ್ಟು ಕಂಪನಿಯ ಆದಾಯದಲ್ಲಿ ನಷ್ಟ ಉಂಟಾಗಿದೆ.
ರೂಪಾಯಿ ಆದಾಯದಲ್ಲಿ ವೈಫಲ್ಯ
17,000 ಕೋಟಿ ಆದಾಯದ ನಿರೀಕ್ಷೆಯಲ್ಲಿದ್ದ ಇನ್ಫೊಸಿಸ್ ಕೆವಲ 16,782 ಕೋಟಿ ರೂಪಾಯಿ ಆದಾಯವನ್ನು ವರದಿ ಮಾಡಿದೆ. ಹೀಗಾಗಿ ರೂಪಾಯಿ ಆದಾಯದಲ್ಲೂ ಕಂಪನಿಗೆ ದೊಡ್ಡ ಹೊಡೆತ ಬಿದ್ದಿದೆ.
ನಿರಾಶಾದಾಯಕ ಕಾಮೆಂಟರಿ
ಷೇರುದಾರರು ಕಂಪನಿಯಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡದೆ ಇರುವುದರಿಂದ ಯೋಜನೆಗಳನ್ನು, ಪ್ಯಾಕೇಜ್ ಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ತ್ರೈಮಾಸಿಕದ ಮುಂಚಿತವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷಿಸಿದ್ದ ಆದಾಯ ಗಳಿಸಲು ಸಾಧ್ಯವಾಗಿಲ್ಲ ಎಂದು ಇನ್ಫೊಸಿಸ್ ಸಿಇಓ ವಿಶಾಲ್ ಸಿಕ್ಕಾ ಪ್ರತಿಕ್ರಿಯಿಸಿದ್ದಾರೆ.
ಸ್ಟಾಕುಗಳಲ್ಲಿ ಶೇ 9 ಇಳಿಕೆ
ಕಂಪನಿಯ ವ್ಯಾಪಾರ ಶೇ 9ರಷ್ಟು ಮುಗ್ಗರಿಸಿದ್ದಾಗ ಸ್ಟಾಕ್ ಮೇಲಿನ ಕೊನೆಯ ವ್ಯಾಪಾರ 1070 ರೂ. ಆಗಿತ್ತು.


Click it and Unblock the Notifications