ಬಂಗಾರವೆಂದರೆ ಭಾರತೀಯರಿಗೆ ಎಲ್ಲಿಲ್ಲದ ವ್ಯಾಮೋಹ ಎಂದೆ ಹೇಳಬಹುದು. ಹೆಚ್ಚೆಚ್ಚು ಆಭರಣಗಳನ್ನು ಇಷ್ಟಪಡುವ ಹಾಗೂ ಧರಿಸುವ ಮಹಿಳೆಯರನ್ನು ಸಾಮಾನ್ಯವಾಗಿ ಆಭರಣ ಸುಂದರಿಯರು ಎಂದು ಕರೆಯುತ್ತಾರೆ. ಇದು ಅವರ ಪ್ರತಿಷ್ಠೆಯ ವಿಷಯವೂ ಕೂಡ. ಹೀಗಾಗಿ ಬಂಗಾರ ಪ್ರಿಯರಿಗೆ ಇಲ್ಲಿದೆ ಸಂತೋಷದ ಸುದ್ದಿ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಸಾರ್ವಭೌಮ ಗೋಲ್ಡ್ ಬಾಂಡ್ ನಾಲ್ಕನೇ ಉತ್ಪನ್ನವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಜುಲೈ 18, 2016 ರಿಂದ ಜುಲೈ 22, 2016 ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು ಹಾಗೂ ಬಾಂಡುಗಳನ್ನು ಅಗಸ್ಟ್ 5ರಂದು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದೆ.

ಹಣಕಾಸಿನ ಆಸ್ತಿಯಾಗಿ ಅಭಿವೃದ್ಧಿ ಪಡಿಸಲು ಲೋಹದ ಚಿನ್ನದ ಖರೀದಿಗೆ ಪರ್ಯಾಯವಾಗಿ ಸಾರ್ವಭೌಮ ಗೋಲ್ಡ್ ಬಾಂಡ್ ನ್ನು ಖರೀದಿಸಬೇಕೆಂದು ಹಣಕಾಸು ಸಚಿವರು 2015/16 ರ ಕೇಂದ್ರ ಬಜೆಟ್ ನಲ್ಲಿ ತಿಳಿಸಿದ್ದಾರೆ.
ಈ ಬಾಂಡುಗಳನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯ ಲಿಮಿಟೆಡ್, ನಿಗದಿತ ಅಂಚೆ ಕಚೇರಿಗಳು, ಮಾನ್ಯತೆ ಪಡೆದ ರಾಷ್ಟ್ರೀಯ ಸ್ಟಾಕ್ ವಿನಿಮಯ ಹಾಗೂ ಬಾಂಬೆ ಸ್ಟಾಕ್ ವಿನಿಮಯ ಕೆಂದ್ರಗಳ ಮೂಲಕ ಮಾರಾಟ ಮಾಡಲಾಗುವುದು.
ಈ ಬಾಂಡ್ ಗಳನ್ನು ಹಣಕಾಸಿನ ವಿಭಾಗಗಳಲ್ಲಿ ನೀಡಲಾಗುವುದು ಹಾಗೂ ಕಾಲ ಸೂಚನೆಯನ್ನು ಮುಕ್ತವಾಗಿ ಇಡಲಾಗುವುದು. ಒಬ್ಬ ವ್ಯಕ್ತಿಗೆ ಆಯಾ ಹಣಕಾಸಿನ ವರ್ಷಕ್ಕೆ ಅನುಗುಣವಾಗಿ ಕನಿಷ್ಟ ಹೂಡಿಕೆಯ ಮೀತಿ ಒಂದು ಗ್ರಾಂ ಮತ್ತು ಗರಿಷ್ಠ ಮೀತಿ 500 ಗ್ರಾಂ ಇರುತ್ತದೆ.
1961ರ ಆದಾಯ ತೆರಿಗೆ ಕಾಯಿದೆಯ ಪ್ರಕಾರ ಗೋಲ್ಡ್ ಬಾಂಡ್ ಗಳ ಮೇಲೆ ಬಡ್ಡಿಯನ್ನು ಪಾವತಿಸಲು ಅವಕಾಶ ಮಾಡಲಾಗಿರುತ್ತದೆ. ಜೊತೆಗೆ ತೆರಿಗೆ ವಿನಾಯಿತಿಯೂ ಇರುತ್ತದೆ.


Click it and Unblock the Notifications