47% ಭಾರತೀಯರು ನಿವೃತ್ತಿ ನಂತರದ ಭವಿಷ್ಯಕ್ಕಾಗಿ ಉಳಿತಾಯ ಮಾಡುತ್ತಿಲ್ಲ: ಸಮೀಕ್ಷೆ

ನಿವೃತ್ತಿ ನಂತರದ ಹಣಕಾಸಿನ ಭದ್ರತೆ ಹೆಚ್ಚು ಮೌಲ್ಯ ಹೊಂದಿರುತ್ತದೆ. ನಿವೃತ್ತಿ ನಂತರವೂ ಜಿವನ ಸುಖಕರವಾಗಿರಬೇಕು, ಆರ್ಥಿಕ ತೊಂದರೆಗಳನ್ನು ಎದುರಿಸಬೇಕೆಂದು ಎಲ್ಲರ ಆಸೆಯಾಗಿರುತ್ತದೆ.

ವರದಿಯ ಪ್ರಕಾರ ಶೇ. 47ರಷ್ಟು ಭಾರತೀಯರು ನಿವೃತ್ತಿ ನಂತರದ ಆರ್ಥಿಕ ಭದ್ರತೆಗಾಗಿ, ಭವಿಷ್ಯಕ್ಕಾಗಿ ಉಳಿತಾಯ ಮಾಡುವುದಿಲ್ಲ. ಬಾರತದ ಶೇ. 44ರಷ್ಟು ಕೆಲಸ ಮಾಡುವ ಜನರು ತಮ್ಮ ನಿವೃತ್ತಿ ನಂತರದ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ನಿಲ್ಲಿಸಿವೆ ಅಥವಾ ತೊಂದರೆಗಳನ್ನು ಎದುರಿಸಿದ್ದಾರೆ ಎಂಬುದಾಗಿ ಸಮೀಕ್ಷೆ ಹೇಳಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಉಳಿತಾಯ ಮಾಡುವ ಪ್ರವೃತ್ತಿ ಇಲ್ಲ

ಉಳಿತಾಯ ಮಾಡುವ ಪ್ರವೃತ್ತಿ ಇಲ್ಲ

ಅಂತದರಲ್ಲೂ ಶೇ. 47ರಷ್ಟು ಭಾರತೀಯರು ನಿವೃತ್ತಿ ನಂತರದ ಆರ್ಥಿಕ ಭದ್ರತೆಗಾಗಿ, ಭವಿಷ್ಯಕ್ಕಾಗಿ ಉಳಿತಾಯ ಮಾಡುವುದಿಲ್ಲ ಎಂಬುದಾಗಿ ಸಮೀಕ್ಷೆ ಹೇಳಿದೆ. ಅನೇಕ ಸಮಸ್ಯೆಗಳಿಂದಾಗಿ, ಉಳಿತಾಯ ಮಾಡುವ ಪ್ರವೃತ್ತಿ ಇಲ್ಲದೆ ಇರುವುದರಿಂದಾಗಿ ಅಥವಾ ದುಂದುವೆಚ್ಚದಿಂದಾಗಿ ಉಳಿತಾಯ ಮಾಡಲು ಸಾಧ್ಯವಾಗಿಲ್ಲವೆಂದು ಹೇಳಿದೆ.

ಶೇ. 47ರಷ್ಟು ಕಲ್ಪನೆ ಇಲ್ಲ

ಶೇ. 47ರಷ್ಟು ಕಲ್ಪನೆ ಇಲ್ಲ

ಹೆಚ್ಚಿನ ಸಂಖ್ಯೆಯ (47%) ಉದ್ಯೋಗ/ಕೆಲಸ ಮಾಡುವ ಭಾರತೀಯರು ನಿವೃತ್ತಿ ನಂತರದ ಜೀವನಕ್ಕಾಗಿ ಉಳಿತಾಯ ಮಾಡಲು ಪ್ರಾರಂಭಿಸಿಲ್ಲ ಅಥವಾ ಉಳಿತಾಯ ಮಾಡುವುದನ್ನು ನಿಲ್ಲಿಸಿದ್ದಾರೆ ಅಥವಾ ಉಳಿತಾಯ ಮಾಡುವ ಸಂದರ್ಭಗಳಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ.

HSBC ವರದಿ

HSBC ವರದಿ

HSBC ವರದಿ ಪ್ರಕಾರ ಭಾರತೀಯರ ನಿವೃತ್ತಿಯ ನಂತರದ ಉಳಿತಾಯದ ಪ್ರಮಾಣ ಜಾಗತಿಕ ಸರಾಸರಿ (46%) ಗಿಂತಲೂ ಹೆಚ್ಚಿದೆ.

Ipsos MORI ಆನ್ಲೈನ್ ಮೂಲಕ ಈ ಸಮೀಕ್ಷೆ

Ipsos MORI ಆನ್ಲೈನ್ ಮೂಲಕ ಈ ಸಮೀಕ್ಷೆ


2015ರ ಸೆಪ್ಟಂಬರ್ ಮತ್ತು ಅಕ್ಟೋಬರ್ ನಲ್ಲಿ Ipsos MORI ಆನ್ಲೈನ್ ಮೂಲಕ ಈ ಸಮೀಕ್ಷೆಯನ್ನು ಕೈಗೊಂಡಿರುತ್ತದೆ. ಇದು ತನ್ನ ೧೩ನೇ ಸರಣಿಯಲ್ಲಿ ಅರ್ಜೆಂಟಿನಾ, ಆಸ್ಟ್ರೇಲಿಯ, ಬ್ರೆಜಿಲ್, ಕೆನಡಾ, ಚೀನಾ, ಈಜಿಪ್ಟ್, ಪ್ರಾನ್ಸ್, ಹಾಂಗ್ ಕಾಂಗ್, ಭಾರತ, ಇಂಡೋನೇಷ್ಯಾ, ಮಲೇಷ್ಯಾ, ಮೆಕ್ಷಕೊ, ಸಿಂಗಾಪುರ, ತೈವಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್ಡಮ್, ಯುನೈಟೆಡ ಸ್ಟೇಟ್ಸ್ ಸೇರಿದಂತೆ ಪ್ರಪಂಚಾದಾದ್ಯಂತ 17 ದೇಶಗಳಲ್ಲಿ ಮತ್ತು ಅನೇಕ ಪ್ರಾಂತ್ಯಗಳಲ್ಲಿ ಸಮೀಕ್ಷೆ ಕೈಗೊಂಡಿದೆ. ಇದರಲ್ಲಿ 18,207 ಜನ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಜನಸಂಖ್ಯೆಯ 1/5ರಷ್ಟು ಉಳಿತಾಯ ಮಾಡುತ್ತಿಲ್ಲ

ಜನಸಂಖ್ಯೆಯ 1/5ರಷ್ಟು ಉಳಿತಾಯ ಮಾಡುತ್ತಿಲ್ಲ

ಇದಲ್ಲದೆ, ಕೆಲಸ ಮಾಡುವ ಒಟ್ಟು ಜನಸಂಖ್ಯೆಯ ಐದನೇ ಒಂದರಷ್ಟು (21%) ಜನರು ನಿವೃತ್ತಿ ನಂತರದ ಭವಿಷ್ಯಕ್ಕಾಗಿ ಇನ್ನೂ ಉಳಿತಾಯ ಮಾಡುತ್ತಿಲ್ಲವೆಂದು ಸಮೀಕ್ಷೆ ವರದಿಯಲ್ಲಿ ತಿಳಿಸಿದೆ. ಶೇ. 22ರಷ್ಟು 60ರ ವಯಸ್ಸಿನವರು ಮತ್ತು ಮೇಲ್ಪಟ್ಟವರು ಹಾಗೂ ಶೇ. 14ರಷ್ಟು ೫೦ರ ವಯಸ್ಸಿನವರು ನಿವೃತ್ತಿ ನಂತರದ ಜೀವನಕ್ಕಾಗಿ ಉಳಿತಾಯ ಮಾಡಲು ಪ್ರಾರಂಭಿಸಿಲ್ಲ.

ನಿವೃತ್ತಿ ಸಲಹೆಗಾರರು

ನಿವೃತ್ತಿ ಸಲಹೆಗಾರರು

ಹತ್ತರಲ್ಲಿ ಒಬ್ಬ ವ್ಯಕ್ತಿಯೂ ಕೂಡ ನಿವೃತ್ತಿ ನಂತರದ ವೃತ್ತಿಪರ ಸಲಹೆ ಅಥವಾ ಮಾಹಿತಿಯನ್ನು ಪಡೆದಿಲ್ಲ ಎಂಬುದನ್ನು ಸಹ ಸಮೀಕ್ಷೆ ವರದಿ ಮಾಡಿದೆ. ಕುತೂಹಲಕಾರಿ ಸಂಗತಿಯೆಂದರೆ ಸ್ನೇಹಿತರು ಮತ್ತು ಕುಟುಂಬದವರೇ ನಿವೃತ್ತಿ ನಂತರದ ಸಲಹೆಗಾರರಾಗಿದ್ದಾರೆ ಅಥವಾ ಮಾಹಿತಿಯ ಮೂಲವಾಗಿದ್ದಾರೆ ಎಂದು ವರದಿ ತಿಳಿಸಿದೆ.

ನಿವೃತ್ತಿ ಪೂರ್ವ ಮತ್ತು ನಂತರದ ನಿವೃತ್ತಿ ಸಲಹೆಗಾರರು

ನಿವೃತ್ತಿ ಪೂರ್ವ ಮತ್ತು ನಂತರದ ನಿವೃತ್ತಿ ಸಲಹೆಗಾರರು

ನಿವೃತ್ತಿ ಪೂರ್ವದಲ್ಲಿ 40%ರಷ್ಟು ಮತ್ತು ನಿವೃತ್ತಿ ನಂತರದಲ್ಲಿ 53%ರಷ್ಟು ಜನರು ನಿವೃತ್ತಿ ಸಂಬಂಧಿತ ಮಾಹಿತಿಯನ್ನು ವೃತ್ತಿಪರರಿಂದ ಅಂದರೆ ಹಣಕಾಸು ಸಲಹೆಗಾರರು, ಸರ್ಕಾರಿ ಏಜೆನ್ಸಿ, ವಿಮೆ ದಲ್ಲಾಳಿಗಳು, ಬ್ಯಾಂಕು ಸಲಹೆಗಾರರು ಮತ್ತು ಇನ್ನೀತರರಿಂದ ಸಲಹೆಯನ್ನು ಪಡೆದಿರುತ್ತಾರೆ.

ಪ್ರತಿಯೊಬ್ಬರಿಗೂ ನಿವೃತ್ತಿ ನಂತರದ ಜೀವನ ಒಂದು ಬಹುಮುಖ್ಯ ಘಟ್ಟವಾಗಿರುತ್ತದೆ. ಈ ಕಾಲಘಟ್ಟದಲ್ಲಿ ಅನೇಕ ಅಭದ್ರತೆಗಳು ಕಾಡುತ್ತವೆ. ಮಕ್ಕಳು ಸರಿಯಾಗಿ ನೋಡದೆ ಇರಬಹುದು, ಆನಾರೋಗ್ಯ ಕೈಕೊಡಬಹುದು ಅನೇಕ ಸಮಸ್ಯೆಗಳು ಎದುರುಗೊಳ್ಳುವ ಕಾಲವದು. ಹೀಗಾಗಿ ನಿವೃತ್ತಿ ನಂತರದ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ಎಲ್ಲರೂ ಪಾಲಿಸಿದರೆ ಮುಂದಿನ ಜೀವನ ಸುಖಕರವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+