ಕೇವಲ 1% ಭಾರತೀಯರು ಮಾತ್ರ ಐಟಿ ರಿಟರ್ನ್ಸ್ ಫೈಲ್ ಮಾಡುತ್ತಾರೆ: ಇಲ್ಲಿವೆ ಕೆಲ ಸತ್ಯಾಂಶಗಳು

ನಮ್ಮ ದೇಶದಲ್ಲಿ ಕೇವಲ ಬೆರಳಣಿಕೆಯೆಷ್ಟು ಭಾರತೀಯರು ಮಾತ್ರ ತೆರಿಗೆಯನ್ನು ಕಟ್ಟುತ್ತಾರೆ. ಅದರಲ್ಲೂ ರಿಟರ್ನ್ಸ್ ಫೈಲ್ ಮೇಲೆ ಕೆಲವೆ ಕೆಲ ಜನರು ಮಾತ್ರ ತೆರಿಗೆಯನ್ನು ಪಾವತಿಸುತ್ತಾರೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಭಾರತೀಯರು ಅನೇಕ ಹರಸಾಹಸಗಳನ್ನೇ ಮಾಡುತ್ತಾರೆ. ಭಾರತದಲ್ಲಿ ಇರುವಷ್ಟು ಕಪ್ಪುಹಣ ಬೇರೆ ಯಾವ ರಾಷ್ಟ್ರಗಳಲ್ಲೂ ಇರಲಿಕ್ಕಿಲ್ಲ.

ಹೀಗಾಗಿಯೇ ಆದಾಯ ತೆರಿಗೆ ಇಲಾಖೆಯವರು ತನ್ನ ತೆರಿಗೆಯ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಅನೇಕ ತಂತ್ರಗಳನ್ನು ರೂಪಿಸುತ್ತಿದೆ. ವೈಯಕ್ತಿಕವಾಗಿ ಹೆಚ್ಚೆಚ್ಚು ಜನರು ತೆರಿಗೆಯನ್ನು ಪಾವತಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತಿದೆ.

ಆದಾಯ ತೆರಿಗೆ ಇಲಾಖೆಯವರು ಏನೇ ಕಾರ್ಯತಂತ್ರಗಳನ್ನು ರೂಪಿಸಿದರೂ ಕೆಲವೆ ಜನರು ಮಾತ್ರ ಐಟಿ ರಿಟರ್ನ್ಸ್ ಫೈಲ್ ಮಾಡುತ್ತಾರೆ ಎಂಬುದಕ್ಕೆ ಕುತೂಹಲಕಾರಿ ಅಂಶಗಳನ್ನು ಪಿಟಿಐ ಇತ್ತೀಚಿಗೆ ವರದಿ ಮಾಡಿದೆ. ಅವುಗಳಲ್ಲಿನ ಕೆಲ ಅಚ್ಚರಿಕರ ಸಂಗತಿಗಳು ಇಲ್ಲಿವೆ ನೋಡಿ...

1% ಭಾರತೀಯರು ರಿಟರ್ನ್ಸ್ ಫೈಲ್ ಮಾಡುತ್ತಾರೆ

1% ಭಾರತೀಯರು ರಿಟರ್ನ್ಸ್ ಫೈಲ್ ಮಾಡುತ್ತಾರೆ

2012-13ರಲ್ಲಿ 4.72 ಕೋಟಿಯಷ್ಟು ಐಟಿ ಫೈಲ್ ಮಾಡಿದವರ ಸಂಖ್ಯೆ 2014-15ರಲ್ಲಿ ಪರಿಣಾಮಕಾರಿಯಾಗಿ ಏರಿಕೆಯಾಗಿದ್ದು ಹೆಚ್ಚುಕಡಿಮೆ 5.17 ಕೋಟಿಯಷ್ಟು ಜನ ಐಟಿ ಫೈಲ್ ಮಾಡಿದ್ದಾರೆ. ಅಂದರೆ ಒಂದು ವರ್ಷದಲ್ಲಿ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕೆವಲ 1% ಜನರು ಮಾತ್ರ ಐಟಿ ರಿಟರ್ನ್ಸ್ ಫೈಲ್ ಮಾಡಿದ್ದಾರೆ.

ಕೋಟಿಗಿಂತ ಹೆಚ್ಚು ಆದಾಯ ಇರುವ ಕೆಲವೆ ಜನರು ತೆರಿಗೆ ಕಟ್ಟುತ್ತಾರೆ

ಕೋಟಿಗಿಂತ ಹೆಚ್ಚು ಆದಾಯ ಇರುವ ಕೆಲವೆ ಜನರು ತೆರಿಗೆ ಕಟ್ಟುತ್ತಾರೆ

ಒಂದು ಕೋಟಿಗಿಂತ ಹೆಚ್ಚು ಆದಾಯ ಇರುವ ಜನರು ತುಂಬಾ ಕಡಿಮೆ ಸಂಖ್ಯೆಯಲ್ಲಿ ವೈಯಕ್ತಿಕವಾಗಿ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಅಂದರೆ ಕೆವಲ 5430 ಜನರು ವ್ಯಕ್ತಿಗತವಾಗಿ ತೆರಿಗೆ ಪಾವತಿಸಿದ್ದಾರೆ. ಇದನ್ನು ಹೊರತುಪಡಿಸಿ ರೂ. 1.5 ಕೋಟಿ ವ್ಯಾಪ್ತಿಯಲ್ಲಿ 5000ಕ್ಕಿಂತಲೂ ಹೆಚ್ಚಿನ ಜನರು ಬರುತ್ತಾರೆ.

ಹೆಚ್ಚು ಸಂಬಳ ಗಳಿಸುವ ತೆರಿಗೆಯಲ್ಲಿ ಕೆವಲ 6 ವ್ಯಕ್ತಿಗಳು

ಹೆಚ್ಚು ಸಂಬಳ ಗಳಿಸುವ ತೆರಿಗೆಯಲ್ಲಿ ಕೆವಲ 6 ವ್ಯಕ್ತಿಗಳು

ಕೆವಲ 6 ವ್ಯಕ್ತಿಗಳು ಮಾತ್ರ ಹೆಚ್ಚು ಆದಾಯ ಗಳಿಸುವ ಪರಿಧಿಯಲ್ಲಿ ಬರುತ್ತಿದ್ದು, ಅಂದರೆ 50-60 ಕೋಟಿ ಸಂಬಳದ ಆದಾಯದಲ್ಲಿ ಒಳಗೊಳ್ಳುತ್ತಾರೆ. ರೂ. 1 ರಿಂದ 5 ಕೋಟಿ ಆದಾಯ ಗಳಿಸುವ ವ್ಯಾಪ್ತಿಯಲ್ಲಿ 17,515 ವ್ಯಕ್ತಿಗಳು ಸೇರಿದ್ದಾರೆ.

ಅತಿ ಹೆಚ್ಚು ತೆರಿಗೆ ಕಟ್ಟುವವರಲ್ಲಿ 3 ವ್ಯಕ್ತಿಗಳು

ಅತಿ ಹೆಚ್ಚು ತೆರಿಗೆ ಕಟ್ಟುವವರಲ್ಲಿ 3 ವ್ಯಕ್ತಿಗಳು

100-500 ಕೋಟಿ ಆದಾಯ ಇರುವವರಲ್ಲಿ ಕೆವಲ ಮೂರು ವ್ಯಕ್ತಿಗಳು ಮಾತ್ರ ತೆರಿಗೆಯನ್ನು ಕಟ್ಟುತ್ತಿದ್ದು, ಅವರು 437 ಕೋಟಿಯಷ್ಟು ತೆರಿಗೆಯನ್ನು ಪಾವತಿದ್ದಾರೆ.

4.72 ಕೋಟಿ ಪರಿಣಾಮಕಾರಿ ತೆರಿಗೆ

4.72 ಕೋಟಿ ಪರಿಣಾಮಕಾರಿ ತೆರಿಗೆ

2013-14ರಲ್ಲಿ ತೆರಿಗೆ ಆದಾಯ ಇಲಾಖೆ 4.72 ಕೋಟಿಯಷ್ಟು ಪರಿಣಾಮಕಾರಿ ತೆರಿಗೆಯನ್ನು ಕಟ್ಟಿಸಿದೆ. ಇದರಲ್ಲಿ ಐಟಿಆರ್ ಫೈಲ್ ಮಾಡಿದವರು ಮತ್ತು ಟಿಡಿಎಸ್ ಪಾವತಿಸಿದವರು ಒಳಗೊಂಡಿದೆ. ಆದರೆ 2013-14ರಲ್ಲಿ ರಿಟರ್ನ್ಸ್ ಫೈಲ್ ಮಾಡಿದವರು ಒಳಗೊಂಡಿಲ್ಲ. ಆದರೆ ಆ ವರ್ಷದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಕೆವಲ ಶೇ. ಒಂದರಷ್ಟು ವ್ಯಕ್ತಿಗಳು ಮಾತ್ರ ರಿಟರ್ನ್ಸ್ ಫೈಲ್ ಮಾಡಿದ್ದಾರೆ.

ಸಂಬಳ ಗಳಿಸುವವರು ಗಮನಾರ್ಹ ಸಂಖ್ಯೆಯಲ್ಲಿ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ

ಸಂಬಳ ಗಳಿಸುವವರು ಗಮನಾರ್ಹ ಸಂಖ್ಯೆಯಲ್ಲಿ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ್ದಾರೆ

2013-14ನೇ ಸಾಲಿನಲ್ಲಿ ಹೆಚ್ಚುಕಡಿಮೆ 2.87 ಕೋಟಿ ಸಂಬಳ ಗಳಿಸುವವರು ಐಟಿ ರಿಟರ್ನ್ಸ್ ಫೈಲ್ ಮಾಡಿದ್ದಾರೆಂಬುದು ಮೌಲ್ಯಮಾಪನದಿಂದ ತಿಳಿದಿದೆ. ಹೆಚ್ಚು ಸಂಖ್ಯೆಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದವರಲ್ಲಿ ಸಂಬಳ ಗಳಿಸುವವರೆ ಸೇರಿದ್ದಾರೆ.

20% ಹೆಚ್ಚು ಸಂಖ್ಯೆಯಲ್ಲಿ ತೆರಿಗೆದಾರರು

20% ಹೆಚ್ಚು ಸಂಖ್ಯೆಯಲ್ಲಿ ತೆರಿಗೆದಾರರು

2011-12ರ ಹಣಕಾಸಿನ ವರ್ಷದಲ್ಲಿ 20.23 ಲಕ್ಷಕ್ಕಿಂತ ಹೆಚ್ಚಿನ ತೆರಿಗೆದಾರರು 5.5-9.5 ಲಕ್ಷವನ್ನು ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+