ಕಾರ್ಪೊರೇಟರ್ಸ್ ಗಳಿಗೆ ಕಬಾಲಿ ಪ್ರಮೋಷನ್ ಹುಚ್ಚು!!!

ಬೆಳ್ಳಿ ನಾಣ್ಯ, ಕ್ರೆಡಿಟ್ ಕಾರ್ಡ್, ಏರ್ ಏಷಿಯಾ ಮೂಲಕ ಕಬಾಲಿ ಪ್ರಮೋಷನ್ !!

ಇದೇ ಮೊದಲ ಬಾರಿಗೆ ಒಬ್ಬ ನಟನನ್ನು ನಾಣ್ಯ, ಕ್ರೆಡಿಟ್ ಕಾರ್ಡ್ ಮತ್ತು ಏರ್ ಏಷಿಯಾ ಫ್ಲೈಟ್ ಮೂಲಕ ಪ್ರಮೋಟ್ ಮಾಡಲಾಗುತ್ತಿದೆ.

ಭಾರತದ ಸೂಪರ್ ಸ್ಟಾರ್ ಹಾಗೂ ಏಷಿಯಾದ ಎರಡನೇ ದೊಡ್ಡ ನಟ ರಜನೀಕಾಂತರ ಹವಾ ಮತ್ತು ಜಪ ಜಗತ್ತಿನಾದ್ಯಂತ ಸಾಗಿದೆ. ಇದಕ್ಕೆ ಕಾರಣ ಕಬಾಲಿ...! ಕಬಾಲಿ ಸಿನೆಮಾ ಇಂದು ಜಗತ್ತಿನಾದ್ಯಂತ ಗ್ರಾಂಡ್ ಆಗಿ ಬಿಡುಗಡೆ ಆಗುತ್ತಿದೆ. ಕಬಾಲಿ ಮೇನಿಯಾ ಕೆವಲ ಅಭಿಮಾನಿಗಳಿಗಷ್ಟೆ ಅಲ್ಲ ಕೆಲ ಪ್ರಸಿದ್ದ ಕಂಪನಿಗಳಿಗೂ ಆವರಿಸಿದೆ.

ಸಿಂಗಂ ಸಿಂಗಲ್ ಆಗಿ ಬರತ್ತೆ... ಕಬಾಲಿ ಮಿಂಗಲ್ ಆಗಿ ಬರತ್ತೆ.... ಕಬಾಲಿ ಡಾ....
ಅದರ ಒಂದು ಚಿತ್ರಣ ಇಲ್ಲಿದೆ ನೋಡಿ...

ಏರ್ ಏಷಿಯಾ

ಏರ್ ಏಷಿಯಾ

ಸೂಪರಸ್ಟಾರ್ ರಜಿನಿಕಾಂತ ಅಭಿನಯದ ಕಬಾಲಿ ಚಿತ್ರದ ಪ್ರಮೋಷನ್ ಗೆ ಏರ್ ಏಷಿಯಾ ಮುಂದಾಗಿದ್ದು, "ಸೂಪರಸ್ಟಾರ್ ನಂತೆ ಹಾರಾಡಿ" ಎಂದು ತನ್ನ ಗ್ರಾಹಕರಿಗೆ ಹೇಳಿದೆ. ಏರ್ಲೈನ್ ಒಂದು ವಿಮಾನವನ್ನು ರಜಿನಿಕಾಂತರಿಗಾಗಿ ಸಮರ್ಪಿಸಿದ್ದು, ಅದರ ಮೇಲೆ ರಜಿನಿಕಾಂತ ಮತ್ತು ಕಬಾಲಿ ಚಿತ್ರದ ಪ್ರಮೋಷನ್ ಚಿತ್ರಗಳಿವೆ.

ಪೋಟೊ ಸೌಜನ್ಯ: ಏರ್ ಏಷಿಯಾ

ಮುತ್ತೊಟ್ ಪಿನ್ ಕಾರ್ಪ್

ಮುತ್ತೊಟ್ ಪಿನ್ ಕಾರ್ಪ್

ಇತ್ತೀಚಿಗೆ ಮುತ್ತೊಟ್ ಪಿನ್ ಕಾರ್ಪ್ ರಜನಿಕಾಂತರ ಮುಖಚಿತ್ರವಿರುವ ನಾಣ್ಯಗಳನ್ನು ಬಿಡುಗಡೆ ಮಾಡಿದೆ. ಈ ಕಂಪನಿ ನಿರೀಕ್ಷಿತ ಕಬಾಲಿ ಚಿತ್ರದ ಸಹಾಯಕ ಪ್ರಾಯೋಜಕತ್ವವನ್ನು ಹೊಂದಿದೆ. ರಜನಿಕಾಂತ ಚಿತ್ರವಿರುವ ಈ ನಾಣ್ಯಗಳು ದೇಶದ 3,800 ಶಾಖೆಗಳಲ್ಲಿ ಲಭ್ಯವಿದೆ.
ಬೆಳ್ಳಿ ನಾಣ್ಯಗಳ ಬೆಲೆಯನ್ನು ಐದು ಗ್ರಾಂ ನಾಣ್ಯಕ್ಕೆ ರೂ. 250, 10 ಗ್ರಾಂ ಗೆ ರೂ. 700, 20 ಗ್ರಾಂ ಗೆ ರೂ. 1400, ಮತ್ತು 10 ಗ್ರಾಂ ಗೆ ಪೆಂಡೆಂಟ್ ರೂ. 700 ನಿಗದಿಪಡಿಸಿದೆ.

ಭಾರ್ತಿ ಏರಟೆಲ್

ಭಾರ್ತಿ ಏರಟೆಲ್

ದೂರಸಂಪರ್ಕ ದಿಗ್ಗಜ ಭಾರ್ತಿ ಏರಟೆಲ್ ನವರು ಕಬಾಲಿ ಪ್ರಚಾರಾಂದೋಲನದಲ್ಲಿ ನಿರ್ಮಾಪಕರೊಂದಿಗೆ ಕೈಜೋಡಿಸಿದ್ದಾರೆ. ಏರಟೆಲ್ ನವರು ಕಬಾಲಿ ರಿಚಾರ್ಜ್ ಪ್ಯಾಕ್ ಬಿಡುಗಡೆಗೊಳಿಸಿದ್ದು, ಒಂದು ಗಂಟೆ ಅನ್ ಲಿಮಿಟೆಡ್ 2ಜಿ ಇಂಟರ್ನೆಟ್ ಬಳಸಬಹುದು. ಇದರಲ್ಲಿ ಕಬಾಲಿಯ ಎಕ್ಷಕ್ಲೂಸಿವ್ ಚಿತ್ರಗಳಿವೆ. ಏರಟೆಲ್ ಬಳಕೆದಾರರು SMS ಮೂಲಕ ನೇರವಾಗಿ ರಜಿನಿಕಾಂತರನ್ನು ವಿಶ್ ಮಾಡಬಹುದಾಗಿದೆ.

ಸಿಟಿ ಬ್ಯಾಂಕ್

ಸಿಟಿ ಬ್ಯಾಂಕ್

ಸಿಟಿ ಬ್ಯಾಂಕಿನವರು ಸಹ ರಜನಿಕಾಂತರ ಮುಖಚಿತ್ರವಿರುವ ಕಬಾಲಿ ಕ್ರೆಡಿಟ್ ಕಾರ್ಡ್ ಗಳನ್ನು ಬಿಡುಗಡೆಗೊಳಿಸುತ್ತದೆ ಎಂದು ವರದಿ ಆಗಿದೆ.

ಮೊದಲ ಬಾರಿಗೆ ನಾಣ್ಯಗಳ ಮೂಲಕ ನಟನನ್ನು ಪ್ರಮೋಟ್ ಮಾಡಲಾಗುತ್ತಿದ್ದು, ಉತ್ಪಾದನೆ ಮತ್ತು ಬ್ರ್ಯಾಂಡಿಂಗ್ ಚಟುವಟಿಕೆಗಾಗಿ 20 ಕೋಟಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಈ ನಾಣ್ಯಗಳು ಕಬಾಲಿ ಬಿಡುಗಡೆ ಆಗುವ ದಿನದಿಂದ ಸಿಗಲಿವೆ ಎಂದು ಮುತ್ತೋಟ್ ಗ್ರೂಪ್, ಪ್ರೆಸಿಯಸ್ ಮೆಟಲ್ ಡಿವಿಸನ್, ಕೆಯೂರ್ ಷಾ ಸಿಇಓ ಪಿಟಿಐ ವರದಿಗಾರರಿಗೆ ತಿಳಿಸಿದ್ದಾರೆ.

ಆದರೆ, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ರಜಿನಿಕಾಂತ್ ಮುಖಚಿತ್ರವಿರುವ ನಾಣ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸದಂತೆ ಆದೇಶ ಹೊರಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+