ಭಾರತದ ಟಾಪ್ 10 ಬ್ರ್ಯಾಂಡುಗಳು

ಕಂಪನಿಗಳ ಆದಾಯ, ಲಾಭ, ಅನ್ವೇಷಕಾರಿ ಯೋಜನೆಗಳು ಮತ್ತು ಭವಿಷ್ಯತ್ತಿನ ನಿರೀಕ್ಷೆ ಮುಂತಾದ ಆಧಾರಗಳ ಮೇಲೆ ಈ ಹಣಕಾಸು ಬ್ರ್ಯಾಂಡುಗಳು ಭಾರತದ ಪ್ರಸಿದ್ದ ಮತ್ತು ಟಾಪ್ 10 ಬ್ರ್ಯಾಂಡುಗಳಾಗಿ ಹೊರಹೊಮ್ಮಿವೆ.

ಸಮೀಕ್ಷೆಯೊಂದರ ಪ್ರಕಾರ ಅಗ್ರ 25 ಬ್ರ್ಯಾಂಡುಗಳಲ್ಲಿ ಏರ್ಟೆಲ್ ಬ್ರ್ಯಾಂಡ್ ತನ್ನ ಮೌಲ್ಯವನ್ನು ಶೇ. 28ರಷ್ಟು ಹೆಚ್ಚಿಸಿದೆ. ಮಹೀಂದ್ರಾ ಗ್ರೂಪ್ ತನ್ನ ಬ್ರ್ಯಾಂಡ್ ಮೌಲ್ಯವನ್ನು ಶೇ. 37 ರಿಂದ $2.95 ಬಿಲಿಯನ್ ಹೆಚ್ಚಿಸಿದೆ.

HDFC ಬ್ಯಾಂಕ್, ಐಡಿಯಾ ಸೆಲ್ಯುಲರ್ ಮತ್ತು ಅಮೂಲ್ ಶ್ರೇಣಿಯಲ್ಲಿ ಮೇಲಕ್ಕೆ ಏರಿವೆ. ಅದಾನಿ ಗ್ರೂಪ್ ಕಳೆದ ವರ್ಷದ 26ನೇ ಸ್ಥಾನದಿಂದ 60ನೇ ಸ್ಥಾನಕ್ಕೆ ಕುಸಿದಿದೆ. ಸುಜ್ಲೋನ್, ಇಂಡಿಯನ್ ಓವರ್ಸಿಸ್ ಬ್ಯಾಂಕ್ ಮತ್ತು ವೋಲ್ಟಾಸ್ ಕಂಪನಿಗಳೂ ಕೂಡ ಶ್ರೇಣಿಯಲ್ಲಿ ಕುಸಿದಿವೆ.

ಭಾರತದ ಅಗ್ರ 10 ಬ್ರ್ಯಾಂಡುಗಳ ವಿವರ ಇಲ್ಲಿದೆ ನೋಡಿ.

ಟಾಟಾ ಗ್ರೂಪ್

ಟಾಟಾ ಗ್ರೂಪ್

ಕಳೆದ ವರ್ಷಕ್ಕೆ ಹೋಲಿಸಿದರೆ ಮೌಲ್ಯಮಾಪನದಲ್ಲಿ ಶೇ 11ರಷ್ಟು ಇಳಿಕೆ ಕಂಡರೂ ಸಹ ಟಾಟಾ ಗ್ರೂಪ್ ಮತ್ತೆ ಅಗ್ರ ಸ್ಥಾನಕ್ಕೆ ಏರಿದೆ.

ಬಹುಷಹ ಯುಕೆ ಮಾರುಕಟ್ಟೆಯಲ್ಲಿನ ಎಕ್ಷಪೋಸರ್(ಮಾನ್ಯತೆ) ಮತ್ತು ಉಕ್ಕಿನ ಉದ್ಯಮದಲ್ಲಿನ ಏರಿಳಿತದಿಂದಾಗಿ ಮೌಲ್ಯಮಾಪನದಲ್ಲಿ ಇಳಿಕೆಯಾಗಿದೆ.

ಕಳೆದ ವರ್ಷದ ಎಎ ರೇಟಿಂಗ್ ಆಗಿದ್ದರೆ ಈ ಬಾರಿ ಎ+ ರೇಟಿಂಗ್ ಆಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪನಿಯ ಬ್ರಾಂಡ್ ಮೌಲ್ಯ $15.3 ಬಿಲಿಯನ್ ನಿಂದ $13.7 ಬಿಲಿಯನ್ ಗೆ ಕುಸಿದಿದೆ.

ಎಲ್ಐಸಿ

ಎಲ್ಐಸಿ

2015-16ರ ಸಾಲಿನಲ್ಲಿ ಭಾರತೀಯ ಜೀವ ವಿಮಾ ನಿಗಮ ಎರಡನೇ ಸ್ಥಾನದಲ್ಲಿ ನಿಂತಿದೆ. ಕಳೆದ ವರ್ಷ ಎಲ್ಐಸಿ ಕಂಪನಿಯ ಬ್ರಾಂಡ್ ಮೌಲ್ಯ $4.1 ಬಿಲಿಯನ್ ಆಗಿತ್ತು. ಈ ವರ್ಷ ಇದು $6.6 ಬಿಲಿಯನ್ ಆಗಿದೆ.

ಏರ್ಟೆಲ್

ಏರ್ಟೆಲ್

ಏರ್ಟೆಲ್ ಕಂಪನಿಯ ಬ್ರ್ಯಾಂಡ್ ಫೈನಾನ್ಸ್ ಬೆಲೆ $5.7 ಬಿಲಿಯನ್ ಆಗಿದೆ. ಕಳೆದ ವರ್ಷ ಕಂಪನಿಯ ಮೌಲ್ಯ $4.5 ಬಿಲಿಯನ್ ಆಗಿತ್ತು. ಕಳೆದ ವರ್ಷ ಎಎಎ- ಇದ್ದ ರೇಟಿಂಗ್ ಈ ಬಾರಿ ಎಎ+ ಆಗಿದ್ದು, ರೇಟಿಂಗ್ ನಲ್ಲಿ ಏರಿಕೆ ಕಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ 2ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದೆ. ಕಂಪನಿ ಬ್ರ್ಯಾಂಡ್ ಬೆಲೆ $6.5ಬಿಲಿಯನ್ ನಿಂದ $5.7 ಬಿಲಿಯನ್ ಗೆ ಇಳಿಕೆ ಕಂಡಿದೆ. ಆದರೆ ಕಂಪನಿ ಕಳೆದ ಸಾಲಿನ ಎಎ+ ರೇಟಿಂಗ್ ಉಳಿಸಿಕೊಂಡಿದೆ.

ಇನ್ಫೋಸಿಸ್

ಇನ್ಫೋಸಿಸ್

ಕಳೆದ ವರ್ಷಕ್ಕೆ ಹೋಲಿಸಿದರೆ ಇನ್ಫೋಸಿಸ್ ತನ್ನ ಬ್ರ್ಯಾಂಡ್ ಮೌಲ್ಯವನ್ನು 9ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಹೆಚ್ಚಿಸಿಕೊಂಡಿದೆ. ಕಂಪನಿಯ ಬೆಲೆ $3.4 ಬಿಲಿಯನ್ ನಿಂದ $4.7 ಬಿಲಿಯನ್ ಗೆ ಏರಿದೆ.
ಕಂಪನಿಯ ರೇಟಿಂಗ್ ಕೂಡ ಎಎ ಇಂದ ಎಎ+ ಗೆ ಏರಿದೆ.

ರಿಲಾಯನ್ಸ್ ಇಂಡಸ್ಟ್ರಿಸ್

ರಿಲಾಯನ್ಸ್ ಇಂಡಸ್ಟ್ರಿಸ್

2015ರಲ್ಲಿ ರಿಲಾಯನ್ಸ್ ಇಂಡಸ್ಟ್ರಿಸ್ $3.6 ಬಿಲಿಯನ್ ನಿಂದ $3.5 ಬಿಲಿಯನ್ ಗೆ ಕುಸಿದಿದೆ. ಆದರೆ ಕಂಪನಿ ಕಳೆದ ಸಾಲಿನ ಎಎ+ ರೇಟಿಂಗ್ ಉಳಿಸಿಕೊಂಡಿದ್ದು, ಕಳೆದ ಸಾಲಿನ ೫ನೇ ಸ್ಥಾನವನ್ನು ಉಳಿಸಿಕೊಂಡಿದೆ.

ಓಎನ್ ಜಿಸಿ

ಓಎನ್ ಜಿಸಿ

ತೈಲ ಮತ್ತು ನೈಸರ್ಗಿಕ ಅನೀಲ ಕಾರ್ಪೊರೇಶನ್ (ONGC ) ಭಾರತದ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಇದರ ಕೇಂದ್ರ ಕಚೇರಿ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿದೆ.
ಕಂಪನಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಮೇಲಕ್ಕೆರಿದೆ. ಕಳೆದ ಸಾಲಿಗೆ ಹೋಲಿಸಿದರೆ ಕಂಪನಿಯ ಬ್ರ್ಯಾಂಡ್ ಮೌಲ್ಯ $2.8 ಬಿಲಿಯನ್ ನಿಂದ $3.4 ಬಿಲಿಯನ್ ಗೆ ಏರಿಕೆ ಕಂಡಿದೆ. ಎಎ ಇಂದ ಎಎ+ ಗೆ ಕಂಪನಿ ರೇಟಿಂಗ್ ಹೆಚ್ಚಿಸಿದೆ..

ಲಾರ್ಸನ್ ಮತ್ತು ಟರ್ಬೊ

ಲಾರ್ಸನ್ ಮತ್ತು ಟರ್ಬೊ

ಲಾರ್ಸನ್ ಮತ್ತು ಟರ್ಬೊ ಅದೇ ಸ್ಥಾನವನ್ನು ಉಳಿಸಿಕೊಂಡಿದ್ದು, ಕಂಪನಿ ಮೌಲ್ಯ $3.3 ಬಿಲಿಯನ್ ಆಗಿದೆ. ಎಎ ಯಿಂದ ಎಎ+ ಗೆ ರೇಟಿಂಗ್ ಏರಿಕೆ ಕಂಡಿದೆ.

ಇಂಡಿಯನ್ ಆಯಿಲ್

ಇಂಡಿಯನ್ ಆಯಿಲ್

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಭಾರತ ಸರ್ಕಾರದ ಸಂಸ್ಥೆಯಾಗಿದೆ. ಕಳೆದ ವರ್ಷದ ಸ್ಥಾನದಿಂದ ಕಂಪನಿ 9ನೇ ಸ್ಥಾನಕ್ಕೆ ಜಾರಿದೆ. ಕಂಪನಿ ಬ್ರ್ಯಾಂಡ್ ಮೌಲ್ಯ $3.2 ಬಿಲಿಯನ್ ನಿಂದ $3.3 ಬಿಲಿಯನ್ ಹೆಚ್ಚಿದೆ.

HCL ಟೆಕ್ನಾಲಜೀಸ್

HCL ಟೆಕ್ನಾಲಜೀಸ್

HCL ಟೆಕ್ನಾಲಜೀಸ್ 9ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿದಿದೆ. ಕಂಪನಿ ಮೌಲ್ಯ $3.2 ಬಿಲಿಯನ್ ಆಗಿದ್ದು, ಎಎ+ ರೇಟಿಂಗ್ ಹೊಂದಿದೆ. ಆದರೆ ಕಳೆದ ವರ್ಷ ಕಂಪನಿಯ ಬ್ರ್ಯಾಂಡ್ ಮೌಲ್ಯ $3.1 ಬಿಲಿಯನ್ ಹಾಗೂ ಎಎ ರೇಟಿಂಗ್ ಹೊಂದಿತ್ತು.

Read more about business

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+