ಈಗಾಗಲೇ ಅನೇಕ ಕಂಪನಿಗಳು ತಮ್ಮ ಮೊದಲ ತ್ರೈಮಾಸಿಕದ ಫಲಿತಾಂಶವನ್ನು ಬಿಡುಗಡೆಗೊಳಿಸಿವೆ. ಕೆಲವು ಲಾಭ ಗಳಿಸಿದ್ದರೆ ಮತ್ತೆ ಕೆಲವು ನಷ್ಟ ಅನುಭವಿಸಿವೆ.
ಎಸ್ಬಿಎಂ, ಮಾರುತಿ ಸುಜುಕಿ, ಐಡಿಎಫ್ಸಿ, ಎಸ್ಬಿಟಿ, ವಿ-ಗಾರ್ಡ್ ಕಂಪನಿಗಳು ಮೊದಲ ತ್ರೈಮಾಸಿಕದ ಫಲಿತಾಂಶ ಬಿಡುಗಡೆ ಮಾಡಿದ್ದು ಅವುಗಳ ವಿವರ ಇಲ್ಲಿದೆ. (ಷೇರುಗಳು)
* ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರೂ. 472 ಕೋಟಿ ನಷ್ಟ ಅನುಭವಿಸಿದೆ. * ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಇಂಡಿಯಾದ ನಿವ್ವಳ ಲಾಭವು ಶೇ. 23ರಷ್ಟು ಹೆಚ್ಚಾಗಿದ್ದು, ರೂ. 1486 ಕೋಟಿಗಳಿಗೆ ತಲುಪಿದೆ. * ಖಾಸಗಿ ವಲಯದ ಐಡಿಎಫ್ಸಿ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 60ರಷ್ಟು ನಿವ್ವಳ ಲಾಭ ಗಳಿಸಿದ್ದು, ರೂ. 265 ಕೋಟಿಗಳಿಗೆ ತಲುಪಿದೆ. * ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಟ್ರಾವನ್ಕೊರ್ ರೂ. 742.89 ನಷ್ಟ ಅನುಭವಿಸಿದೆ. * ವಸೂಲಿಯಾಗದ ಸಾಲದ ಪ್ರಮಾಣ(ಎನ್ ಪಿಎ) ರೂ. 1170 ಕೋಟಿ ಇದ್ದು, ಜತೆಗೆ ಭವಿಷ್ಯದಲ್ಲಿನ ನಷ್ಟ ಭರಿಸಲು ತೆಗೆದಿರಿಸಿರುವ ಹೆಚ್ಚುವರಿ ಮೊತ್ತದಿಂದಾಗಿ ಹೆಚ್ಚಾಗಿ ನಷ್ಟ ಸಂಭವಿಸಿದೆ. * ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 70.03ರಷ್ಟು ನಿವ್ವಳ ಲಾಭ ಗಳಿಸಿದ್ದು, ರೂ. 42.78 ಕೋಟಿಗಳಿಗೆ ತಲುಪಿದೆ.
ಎಸ್ಬಿಎಂ(SBM)
* ವಸೂಲಿಯಾಗದ ಸಾಲದ ಪ್ರಮಾಣ(ಎನ್ ಪಿಎ) ಹೆಚ್ಚಾಗಿದೆ. ಜತೆಗೆ ಭವಿಷ್ಯದಲ್ಲಿನ ನಷ್ಟ ಭರಿಸಲು ತೆಗೆದಿರಿಸಿರುವ ರೂ. 132 ಕೋಟಿಗಳಿಂದ ರೂ. 1036 ಕೋಟಿಗಳಿಗೆ ಅಂದರೆ ಎಂಟು ಪಟ್ಟು ಹೆಚ್ಚಾಗಿ ನಷ್ಟ ಸಂಭವಿಸಿದೆ.
* ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ. 94 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿತ್ತು.
* ಸರಾಸರಿ ಎನ್ ಪಿಎ ರೂ. 2214 ಕೋಟಿಗಳಿಂದ ರೂ. 4323 ಕೋಟಿಗಳಿಗೆ ಏರಿಕೆ ಕಂಡಿವೆ. ಒಟ್ಟು ವರಮಾನ ರೂ. ೧೯೫೨ ಕೋಟಿಗಳಿಂದ ರೂ. 1988 ಕೋಟಿಗಳಿಗೆ ಅಲ್ಪ ಏರಿಕೆ ಕಂಡಿದೆ.
ಮಾರುತಿ ಸುಜುಕಿ
* ಹಿಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ. 1208 ಕೋಟಿ ನಿವ್ವಳ ಲಾಭ ಗಳಿಸಿತ್ತು. ಕಚ್ಚಾ ಸರಕಿನ ವೆಚ್ಚ ತಗ್ಗಿರುವುದು ಮತ್ತು ಕಾರ್ಯಾಚರಣೆ ಹೊರತಾದ ವರಮಾನದಲ್ಲಿ ಏರಿಕೆ ಕಂಡಿದೆ.
* ನಿವ್ವಳ ಮಾರಾಟವು ಶೇ. 12ರಷ್ಟು ಹೆಚ್ಚಾಗಿದ್ದು, ರೂ. 13078 ಕೋಟಿಗಳಿಂದ ರೂ. 14654 ಕೋಟಿಗಳಿಗೆ ಏರಿಕೆ ಕಂಡಿದೆ.
ಐಡಿಎಫ್ಸಿ(IDFC)
* ನಿವ್ವಳ ಬಡ್ಡಿ ಆದಾಯ, ಬಡ್ಡಿ ಗಳಿಕೆಯ ವ್ಯತ್ಯಾಸದಲ್ಲಿ ಮತ್ತು ವಿಸ್ತಾರದಲ್ಲಿ ಶೇ. 25ರಷ್ಟು ಏರಿಕೆಯಾಗಿದ್ದು, 515 ಕೋಟಿಗಳಿಗೆ ತಲುಪಿದೆ.
* ಹಿಂದಿನ ಫಲಿತಾಂಶಕ್ಕೆ ಹೊಲಿಸಿದರೆ ನಿವ್ವಳ ಲಾಭ ಶೇ. 2.1ರಿಂದ ಶೇ. 2.4ಕ್ಕೆ ಹೆಚ್ಚಳ ಕಂಡಿದೆ.
ಎಸ್ಬಿಟಿ(SBT)
* ಕಳೆದ ಹಣಕಾಸು ವರ್ಷದಲ್ಲಿ ಇದರ ನಿವ್ವಳ ಲಾಭ ರೂ. 81.32 ಕೋಟಿಗಳಷ್ಟಿತ್ತು.
ವಿ-ಗಾರ್ಡ್
* ಕಂಪನಿ ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 25.16 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿತ್ತು.
* ಕಂಪನಿಯ ತಲಾ ಒಂದು ಷೇರು ಶೇ. 5.05 ಅಂದರೆ ರೂ. 1563ಕ್ಕೆ ಬಿಎಸ್ಇ ಯಲ್ಲಿ ಮಾರಾಟವಾಗುತ್ತಿದ್ದವು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications