ಅಮೆರಿಕದ ನಿಯತಕಾಲಿಕೆ ಪೋರ್ಬ್ಸ್ ಪ್ರಕಟಿಸುವ ವಾರ್ಷಿಕ ಜಾಗತಿಕ ಶತಕೋಟ್ಯಾಧೀಶ್ವರ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ.
ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ ಜಿ ಹಾಗೂ ಹೆಚ್ಸಿಎಲ್ ಸಮೂಹ ಸಂಸ್ಥೆಗಳ ಸಹ ಸಂಸ್ಥಾಪಕ ಶಿವ ನಾಡಾರ್ ಮೊದಲ 20 ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ.
ಗೂಗಲ್ ಮುಖ್ಯಸ್ಥ ಎರಿಕ್ ಸ್ಮಿತ್ ಮತ್ತು ಉಬರ್ ಸಿಇಒ ಟ್ರಾವಿಸ್ ಕಲನಿಕ್ ಅವರನ್ನು ಪ್ರೇಮ್ ಜಿ ಮತ್ತು ನಾಡಾರ್ ಹಿಂದಿಕ್ಕಿರುವುದು ವಿಶೇಷ ಸಾಧನೆಯಾಗಿದೆ.
ಅಮೆರಿಕದ ನಿಯತಕಾಲಿಕೆ ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ (forbes tech tycoons) ಮೈಕ್ರೊಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಈ ಬಾರಿಯೂ ಅಗ್ರ ಸ್ಥಾನ ಪಡೆದಿದ್ದಾರೆ.
ಭಾರತದ ಮೂಲದ ಅಮೇರಿಕಾ ವಾಸಿ ಸಾಪ್ಟವೇರ್ ಉದ್ಯಮಿ ಸಿಂಪೋನಿ ಟೆಕ್ನಾಲಜಿ ಗ್ರೂಪ್ ಸಿಇಒ ರೊಮೇಶ್ ವಾದ್ವಾನಿ 67ನೇ ಸ್ಥಾನ ಪಡೆದಿದ್ದು, USD 3 ಬಿಲಿಯನ್ ನಿವ್ವಳ ಆಸ್ತಿ ಹೊಂದಿದ್ದಾರೆ. ಹೊರಗುತ್ತಿಗೆ ಸಂಸ್ಥೆ ಸಿಂಟೆಲ್ ಸಂಸ್ಥಾಪಕ ಭರತ್ ದೇಸಾಯಿ ಮತ್ತು ಅವರ ಪತ್ನಿ ನೀರಜ್ ಸೇಠಿ ಕೂಡ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಪೋರ್ಬ್ಸ್ ಪಟ್ಟಿಯಲ್ಲಿ ಅಮೆರಿಕಾ ಸಿಂಹಪಾಲು ಪಡೆದಿದ್ದು, ಏಷಿಯಾದ ಚೀನಾ ನಂತರದ ಸ್ಥಾನದಲ್ಲಿದೆ. ಅಲ್ಲದೆ ಕೇವಲ ಐದು ಮಹಿಳಾ ಉದ್ಯಮಿಗಳು ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಲು ಸಫಲರಾಗಿದ್ದಾರೆ.
ಬಿಲ್ ಗೇಟ್ಸ್
ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಮೈಕ್ರೊಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಈ ಬಾರಿಯೂ ಅಗ್ರ ಸ್ಥಾನ ಪಡೆದಿದ್ದಾರೆ.
ಇವರು USD 78.4 ಬಿಲಿಯನ್ ಆಸ್ತಿ ಒಡೆಯರಾಗಿದ್ದಾರೆ.
ಮೈಕ್ರೊಸಾಫ್ಟ್ ಅಮೆರಿಕಾದ ಎಂಎನ್ಸಿ ಕಂಪನಿಯಾಗಿದ್ದು, ಕಂಪ್ಯೂಟರ್ ಕ್ಷೇತ್ರದಲ್ಲಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.
ಜೆಫ್ ಬಿಜೋಸ್
ಅಮೆರಿಕಾ ಮೂಲದ ಉದ್ಯಮಿಯಾದ ಇವರು ಟೆಕ್ ಅಮೆಜಾನ್ ಕಂಪನಿಯ ಸಿಇಒ ಮತ್ತು ಸಂಸ್ಥಾಪಕರು.
ಜೆಫ್ ಬಿಜೋಸ್ ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಇವರು USD 67 ಬಿಲಿಯನ್ ಆಸ್ತಿ ಒಡೆಯರಾಗಿದ್ದಾರೆ.
ಅಮೆಜಾನ್.ಕಾಮ್ ಜಗತ್ತಿನ ಪ್ರತಿಷ್ಠಿತ ಇ-ಕಾಮರ್ಸ್, ಆನ್ಲೈನ್ ಮಾರುಕಟ್ಟೆಯ ಬೃಹತ್ ಕಂಪನಿಯಾಗಿದೆ.
ಮಾರ್ಕ್ ಜುಗರ್ ಬರ್ಗ್
ಅಮೆರಿಕಾ ಮೂಲದ ಮಾರ್ಕ್ ಜುಗರ್ ಬರ್ಗ್ ಪ್ರಸಿದ್ದ ಅಂತರ್ಜಾಲ ಉದ್ಯಮಿ, ಪ್ರೋಗ್ರಾಮರ್ ಆಗಿದ್ದಾರೆ.
ಇವರು ಪೇಸ್ಬುಕ್ ಸಂಸ್ಥೆಯ ಚೇರಮನ್, ಸಿಇಒ ಮತ್ತು ಸಹಸಂಸ್ಥಾಪಕರಾಗಿದ್ದಾರೆ.
ಇವರ ನೇತೃತ್ವದಲ್ಲಿ ಸಾಮಾಜಿಕ ಮಾದ್ಯಮವಾದ ಪೇಸ್ಬುಕ್ ಸಂಸ್ಥೆ ಮಹತ್ತರ ಸಾಧನೆ ಮಾಡಿದೆ.
ಇವರು USD 53.9 ಬಿಲಿಯನ್ ಆಸ್ತಿ ಹೊಂದಿದ್ದಾರೆ.
ಲ್ಯಾರಿ ಎಲಿಸನ್
ಲ್ಯಾರಿ ಎಲಿಸನ್ ಅಮೆರಿಕಾದ ಉದ್ಯಮಿ ಹಾಗೂ ಓರಾಕಲ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ.
ಲ್ಯಾರಿ ಎಲಿಸನ್ USD 51.9 ಬಿಲಿಯನ್ ಆಸ್ತಿಯ ಒಡೆಯರಾಗಿದ್ದಾರೆ.
ಜಾಕ್ ಮಾ
ಜಾಕ್ ಮಾ ಚೀನಾ ಉದ್ಯಮ ದಿಗ್ಗಜ ಮತ್ತು ಸಮಾಜಸೇವಕ. ಇವರು ಅಲಿಬಾಬಾ ಗ್ರೂಪ್ ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಇದು ಇಂಟರ್‌ನೆಟ್ ಕ್ಷೇತ್ರದ ಬೃಹತ್ ಕಂಪನಿಯಾಗಿದೆ.
ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದಿದ್ದಾರೆ. ಏಷ್ಯಾದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಇವರು USD 32.8 ಬಿಲಿಯನ್ ಆಸ್ತಿಯ ಒಡೆಯರಾಗಿದ್ದಾರೆ.
ಅಜೀಂ ಪ್ರೇಮ್ ಜಿ
ಅಜೀಂ ಪ್ರೇಮ್ ಜಿ ಭಾರತ ಮೂಲದ ಉದ್ಯಮಿ, ಸಮಾಜಸೇವಕ ಮತ್ತು ಹೂಡಿಕೆದಾರ. ಇವರು ವಿಪ್ರೊ ಸಂಸ್ಥೆಯ ಅಧ್ಯಕ್ಷರು.
ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ. ಇವರು USD ೧೬ ಬಿಲಿಯನ್ ಆಸ್ತಿಯ ಒಡೆಯರಾಗಿದ್ದಾರೆ.
ಶಿವ ನಾಡಾರ್
ಇವರು ಭಾರತದ ಉದ್ಯಮಿ ಮತ್ತು ಸಮಾಜಸೇವಕ. ಎಚ್ಸಿಎಲ್ ಕಂಪನಿ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಪೋರ್ಬ್ಸ್ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದು, ಇವರು USD 11.6 ಬಿಲಿಯನ್ ಆಸ್ತಿಯ ಒಡೆಯರಾಗಿದ್ದಾರೆ.
ಅಮೆರಿಕಾ ಮೇಲುಗೈ
ಪೋರ್ಬ್ಸ್ ಬಿಡುಗಡೆ ಮಾಡಿರುವ ೨೦೧೬ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಅರ್ಧದಷ್ಟು ಜನರು ಅಮೇರಿಕಾದವರೇ ಆಗಿದ್ದು, ಮೊದಲ 8 ಸ್ಥಾನಗಳನ್ನು ಪಡೆದಿದ್ದಾರೆ. ಅಮೇರಿಕಾದವರು 50 ಉದ್ಯಮಿಗಳು ಮತ್ತು ಚೀನಾದವರು 9 ಉದ್ಯಮಿಗಳಿದ್ದಾರೆ.
ಮಹಿಳಾ ಉದ್ಯಮಿಗಳು
ಕೇವಲ ಐದು ಮಹಿಳಾ ಉದ್ಯಮಿಗಳು ಮಾತ್ರ ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಫಲರಾಗಿದ್ದಾರೆ.
ಮೆಗ್ ವ್ಹಿಟ್ಮ್ಯಾನ್, ಝೌ ಕ್ವಾನ್ಪೈ, ಡೆನಿಸ್ ಕೋಟ್ಸ್, ಲ್ಯಾಮ್ ವಾಯ್ ಯಿಂಗ್ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications