ಸಗಟು ವಹಿವಾಟು ವಲಯದ ದಿಗ್ಗಜ ಮೆಟ್ರೊ ಕ್ಯಾಶ್ ಆಂಡ್ ಕ್ಯಾರಿ, ಬೆಂಗಳೂರಿನಲ್ಲಿ ತನ್ನ ಆರನೇ ಮಾರಾಟ ಮಳಿಗೆಯ ಘಟಕವನ್ನು ತೆರಿದಿದೆ.
ಇದರೊಂದಿಗೆ ದೇಶದಲ್ಲಿ 22ನೇ ಮತ್ತು ನಗರದಲ್ಲಿ 6ನೇ ಸಗಟು ಮಳಿಗೆಯಾಗಿದೆ.
ಈ ಸಗಟು ಮಳಿಗೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇದೆ. ನಗರದ ಪೂರ್ವ ಭಾಗಗಳಲ್ಲಿನ ವ್ಯಾಪಾರ ಗ್ರಾಹಕರ ಅಗತ್ಯಗಳನ್ನು ಈ ಮಳಿಗೆ ಪೂರೈಸಲಿದೆ. ಮೈಸೂರು ರಸ್ತೆಯಲ್ಲಿರುವ ಈ ಮಳಿಗೆ 55,000 ಚದರ ಅಡಿ ಜಾಗದಲ್ಲಿ ಹರಡಿಕೊಂಡಿದೆ.

ಯಶವಂತಪುರ, ಕನಕಪುರ ರಸ್ತೆ, ಹೊಸೂರು ರಸ್ತೆ, ಬಿನ್ನಿಪೆಟ್ , ವೈಟ್ಫೀಲ್ಡ್ ಮತ್ತು ಈಗ ಮೈಸೂರು ರಸ್ತೆ ಹೀಗೆ ನಗರದ ಆರು ಕಡೆಗಳಲ್ಲಿ ಮೆಟ್ರೊ ಸಗಟು ಮಳಿಗೆಗಳಿದ್ದು, ಸ್ಥಳೀಯ ವ್ಯವಹಾರಗಳು ಮತ್ತು ವೃತ್ತಿಪರರಿಗೆ ಅಗತ್ಯಗಳನ್ನು ಪೂರೈಸಲಿದೆ ಎಂದು ಮೆಟ್ರೊ ಕ್ಯಾಶ್ ಆಂಡ್ ಕ್ಯಾರಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಎಂ. ಹೇಳಿದ್ದಾರೆ.
ಕಳೆದ 13 ವರ್ಷಗಳಿಂದ ಮೆಟ್ರೊ ಕಡಿಮೆ ಸಗಟು ಬೆಲೆ, ಉತ್ತಮ ಗುಣಮಟ್ಟದ ಉತ್ಪನ್ನ ಮತ್ತು ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ನೀಡುತ್ತಾ ಬಂದಿದೆ. ಜತೆಗೆ ಕಾಕಾಲಕ್ಕೆ ಉತ್ತಮ ಸೇವೆಗಳನ್ನು ಒದಗಿಸುತ್ತ ಮೆಟ್ರೊ ಘಟಕಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ ಎಂದು ಹೇಳಿದರು.


Click it and Unblock the Notifications