ಇನ್ಫೋಸಿಸ್ ಷೇರು ಇಳಿಕೆ: RBS ಕಾಂಟ್ರ್ಯಾಕ್ಟ್ ರದ್ದು ಪರಿಣಾಮ
News
oi-Siddu
By Siddu
ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್(RBS) ತನ್ನ ಕಾಂಟ್ರ್ಯಾಕ್ಟ್ ರದ್ದು ಮಾಡಿದ ಪರಿಣಾಮದಿಂದಾಗಿ ಇನ್ಫೊಸಿಸ್ ಷೇರಿನಲ್ಲಿ ಶೇ. 2ರಷ್ಟು ಇಳಿಕೆ ಆಗಿದೆ.
ಯುಕೆ ಸ್ಟಾಂಡ್ಅಲೋನ್ ಬ್ಯಾಂಕು, ವಿಲಿಯಮ್ಸ್ ಮತ್ತು ಗ್ಲೇನ್ ನೊಂದಿಗಿನ ತನ್ನ ಯೋಜನೆಗಳನ್ನು ಹೆಚ್ಚು ದಿನ ಮುಂದುವರೆಸುವುದಿಲ್ಲ ಎಂದು ಕಳೆದ ವಾರ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಘೊಷಿಸಿತ್ತು. ಆದರೆ ಅವು ತನ್ನ ನಿರ್ಧಾರವನ್ನು ಬದಲಾಯಿಸಿ ಮತ್ತೆ ಒಂದಾಗಿ ಮುಂದುವರೆಯುವುದಾಗಿ ಹೇಳಿವೆ. ಜತೆಗೆ ತಮ್ಮ ಷೇರು ವ್ಯವಹಾರ ಹಾಗೂ ಕಾಂಟ್ರ್ಯಾಕ್ಟ್ ಗಳನ್ನು ಮುಂದುವರೆಸಲಿವೆ, ಹೀಗಾಗಿ ಇನ್ಫೊಸಿಸ್ ಗೆ ನೀಡಿದ್ದ ಕಾಂಟ್ರ್ಯಾಕ್ಟ್ ನ್ನು ರದ್ದು ಮಾಡಿವೆ.
ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಇನ್ಫೊಸಿಸ್ ನ ಒಂದು ಪ್ರಮುಖ ಸಂಬಂಧನಾತ್ಮಕ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಆಯಕಟ್ಟಿನ ಪಾಲುದಾರಿಕೆ ಮತ್ತಷ್ಟು ಬಲಪಡಿಸುವ ಹಾಗೂ ಇನ್ನಿತರ ಎಲ್ಲಾ ಪರಿವರ್ತನೆಯ ಯೋಜನೆಗಳನ್ನು ಆಯೋಜಿಸುವ ಹಿನ್ನೆಲೆಯಲ್ಲಿ ಜತೆಯಾಗಿ ಕೆಲಸ ಮಾಡಲಿವೆ ಎಂದು ಇನ್ಫೊಸಿಸ್ ತಿಳಿಸಿದೆ.
ಇನ್ಫೊಸಿಸ್ ನ ಷೇರುಗಳು ರೂ. 1045ಕ್ಕೆ ಮಾರಾಟವಾಗಿದ್ದವು. ಈಗ ಅವು ಶೇ. 2ರಷ್ಟು ಡ್ರಾಪ್ ಆಗಿವೆ.