2030ರಲ್ಲಿ ಜಗತ್ತನ್ನು ಆಳುವ ದೇಶಗಳ್ಯಾವವು? ನಿಮಗಿದು ಗೊತ್ತೆ...

ಜಾಗತಿಕವಾಗಿ ಹಲವು ಕ್ಷೇತ್ರಗಳ ಬಗ್ಗೆ ಅನೇಕ ವಿಧದ ಲೆಕ್ಕಾಚಾರಗಳು, ಸಂಶೋಧನೆಗಳು, ವರದಿಗಳು ಬರುತ್ತಲೇ ಇರುತ್ತವೆ. ಸೂಜಿಗ ಎನಿಸುವ ಮಾಹಿತಿಯನ್ನು ನೀಡುತ್ತಲೇ ಇರುತ್ತವೆ.

ಜಗತ್ತಿನ ಯಾವ ದೇಶ ಯಾವುದರಲ್ಲಿ ಮುಂದಿದೆ, ಯಾವುದರಲ್ಲಿ ಹಿಂದಿದೆ, ವಿಶೇಷ ಸಾಧನೆ, ಹಿರಿಮೆ-ಗರಿಮೆಗಳೇನು? ಹೀಗೆ ಅನೇಕ ಲೆಕ್ಕಾಚಾರಗಳು ನಮ್ಮೊಂದಿಗೆ ಗಿರಕಿ ಹೊಡೆಯುತ್ತಲೇ ಇರುತ್ತವೆ. ಇಂತಹ ಸಂಗತಿಗಳು ಎಲ್ಲರ ಕುತೂಹಲಕ್ಕೂ ಕಾರಣವಾಗಿರುತ್ತವೆ. ಪ್ರಪಂಚದ 10 ಶ್ರೀಮಂತ ದೇಶಗಳ ಸಾಲಿನಲ್ಲಿ ಭಾರತ

ಅಂದ ಹಾಗೆ 2030ರ ವೇಳೆಗೆ ಜಗತ್ತನ್ನು ಆಳಬಲ್ಲ ದೇಶಗಳ ಬಗ್ಗೆ ಕೂಡ ಲೆಕ್ಕಾಚಾರ ನಡೆದಿದೆ. ಅನೇಕ ಮಾನದಂಡಗಳ ಆಧಾರದ ಮೇಲೆ ಈ ಕುತೂಹಲಕಾರಿ ಸಂಗತಿಯನ್ನು ನಿರ್ಧರಿಸಲಾಗಿದೆ. ಅದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಹಾಗಿದ್ದರೆ 2030ರಲ್ಲಿ ಜಗತ್ತನ್ನು ಆಳಬಲ್ಲ ಆ ದೇಶಗಳು ಯಾವವು? ಅಂತಹ ಟಾಪ್ 10 ದೇಶಗಳ ಕುತೂಹಲಕರ ಮಾಹಿತಿ ಇಲ್ಲಿದೆ.

ಅಮೆರಿಕ

ಅಮೆರಿಕ

ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೆರಿಕ 2030ರ ವೇಳೆಗೆ ಜಗತ್ತನ್ನು ಆಳಬಲ್ಲದು ಎಂಬುದು ಸಾಮಾನ್ಯವಾಗಿ ಎಲ್ಲರ ಊಹೆ ಆಗಿರುತ್ತದೆ. 2030ರ ವೇಳೆಗೆ ಅಮೆರಿಕಾದ ಜಿಡಿಪಿ 23,857 ಬಿಲಿಯನ್ ಡಾಲರ್ ಆಗಲಿದೆ. 2016ರಲ್ಲಿ 17,149 ಬಿಲಿಯನ್ ಡಾಲರ್ ಇದ್ದು, 2016 ರಿಂದ 2030ರಲ್ಲಿ ಶೇ. 2.3ರಷ್ಟು ಹೆಚ್ಚಳವಾಗುತ್ತದೆ. ಅಮೆರಿಕ ವಿಶ್ವದ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನದಲ್ಲಿ ನಿಂತಿದೆ. ಪ್ರಸ್ತುತ ಅಮೆರಿಕಾದ ಒಟ್ಟು ಸಂಪತ್ತು ರೂ. 3276 ಲಕ್ಷ ಕೋಟಿ ಆಗಿದೆ.
ಹೀಗಾಗಿ ಜಗತ್ತನ್ನು ಆಳುವ ಮೊದಲ ದೇಶವಾಗಿ ಅಮೆರಿಕ ಮುಂಚೂಣಿಯಲ್ಲಿ ನಿಲ್ಲುವುದರಲ್ಲಿ ಯಾವುದೇ ಸಂಶಯಗಳಿಲ್ಲ ಎಂಬುದು ಪಂಡಿತರ ಲೆಕ್ಕಾಚಾರ.

ಚೀನಾ

ಚೀನಾ

2030ರಲ್ಲಿ ಜಗತ್ತನ್ನು ಆಳುವ ದೇಶಗಳ ಸಾಲಿನಲ್ಲಿ ಏಷಿಯಾದ ಮೊದಲ ದೇಶ ಎಂಬ ಹೆಗ್ಗಳಿಕೆ. ಜತೆಗೆ ಚೀನಾ ಏಷಿಯಾದ ಮೊದಲ ಹಾಗೂ ವಿಶ್ವದ ಎರಡನೇ ಶ್ರೀಮಂತ ದೇಶ.
2016ರಲ್ಲಿ ಜಿಡಿಪಿ 9307 ಬಿಲಿಯನ್ ಡಾಲರ್ ಇದ್ದು, 2030ರ ವೇಳೆಗೆ ಶೇ. 4ರಷ್ಟು ಹೆಚ್ಚಳವಾಗಲಿದೆ. ಹಾಗೂ 2030ರಲ್ಲಿ ಆರ್ಥಿಕ ಮೌಲ್ಯದ ಪ್ರಮಾಣ 18829 ಬಿಲಿಯನ್ ಡಾಲರ್ ಇರಲಿದೆ. ಪ್ರಸ್ತುತ ಚೀನಾ ದೇಶ ಒಟ್ಟು ರೂ. 1165 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

ಭಾರತ

ಭಾರತ

ಬಾರತ ಜಗತ್ತನ್ನು ಆಳಬಲ್ಲ ವಿಶ್ವದ ಮೂರನೇ ದೇಶ ಹಾಗೂ ಏಷಿಯಾದ 2ನೇ ದೇಶ. ಮುಂದಿನ ದಶಕದಲ್ಲಿ ಭಾರತದ ಆರ್ಥಿಕತೆ ಬೃಹತ್ ಪ್ರಮಾಣದಲ್ಲಿ ಹಾಗೂ ಶರವೇಗದಲ್ಲಿ ಬೆಳವಣಿಗೆಯಾಗಲಿದ್ದು, ಶೇ. 6.9ರಷ್ಟು ಹೆಚ್ಚಳವಾಗಲಿದೆ. ಅಮೆರಿಕಾ ಮತ್ತು ಚೀನಾಕ್ಕೆ ಹೋಲಿಸಿದರೆ ಹೆಚ್ಚಳದ ಪ್ರಮಾಣ ಹೆಚ್ಚು. 2016ರಲ್ಲಿ ಇರುವ 2557 ಬಿಲಿಯನ್ ಡಾಲರ್ ಜಿಡಿಪಿಯಿಂದ 2030ರ ವೇಳೆಗೆ 7287 ಬಿಲಿಯನ್ ಡಾಲರ್ ಜಿಡಿಪಿ ಏರಲಿದೆ. ಅಂದರೆ ಅರ್ಧದಷ್ಟು ಹೆಚ್ಚಳ ಸಾಧಿಸಲಿದೆ.
ಅತಿ ದೊಡ್ಡ ಜನಸಂಖ್ಯೆಯಿಂದಾಗಿ ಭಾರತವು ಜಗತ್ತಿನ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಈಗ ಭಾರತವು ಒಟ್ಟು ರೂ. 375 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

ಜಪಾನ್

ಜಪಾನ್

ಜಗತ್ತನ್ನು ಆಳಬಲ್ಲ ಏಷಿಯಾದ ಮೂರನೇ ದೇಶ ಜಪಾನ್. 2016ರಲ್ಲಿ ಜಪಾನಿನ ಜಿಡಿಪಿ ಪ್ರಮಾಣ 5792 ಬಿಲಿಯನ್ ಡಾಲರ್ ಇದ್ದು, 2030ರಲ್ಲಿ 6535 ಬಿಲಿಯನ್ ಡಾಲರ್ ಆಗಲಿದೆ. ಶೇ. 0.7ರಷ್ಟು ಆರ್ಥಿಕ ಮೌಲ್ಯ ಹೆಚ್ಚಲಿದೆ.
ಜಪಾನ್ ಏಷಿಯಾದ ಎರಡನೇ ಶ್ರೀಮಂತ ದೇಶವಾಗಿದ್ದು, ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ ಒಟ್ಟು ರೂ. 1011 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

ಜರ್ಮನಿ

ಜರ್ಮನಿ

ಜರ್ಮನಿ ಜಗತ್ತನ್ನು ಆಳುವ ದೇಶಗಳ ಸಾಲಿನಲ್ಲಿ ಐದನೇ ಹಾಗೂ ಜಗತ್ತಿನ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಶೇ. 0.9ರಷ್ಟು ಆರ್ಥಿಕ ಮೌಲ್ಯದ ಹೆಚ್ಚಳದೊಂದಿಗೆ 2030ರಲ್ಲಿ 4308 ಬಿಲಿಯನ್ ಡಾಲರ್ ಜಿಡಿಪಿ ತಲುಪಲಿದೆ. ಪ್ರಸ್ತುತ ಜರ್ಮನಿಯ ಜಿಡಿಪಿ ಮೌಲ್ಯ 3747 ಬಿಲಿಯನ್ ಡಾಲರ್ ಇದೆ. ಒಟ್ಟು ಸಂಪತ್ತು ರೂ. 609 ಲಕ್ಷಕೋಟಿ ಆಗಿದೆ.

ಯುಕೆ

ಯುಕೆ

ಯುನೈಟೆಡ್ ಕಿಂಗ್ಡಮ್ ಶೇ. 2.5ರಷ್ಟು ಆರ್ಥಿಕ ಕ್ರಾಂತಿಯೊಂದಿಗೆ 2030ರಲ್ಲಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊಮ್ಮಲಿದೆ.
ಅಂದರೆ 2030ರ ವೇಳೆಗೆ ಈಗಿನ 2710 ಬಿಲಿಯನ್ ಡಾಲರ್ ಜಿಡಿಪಿಯಿಂದ 3815 ಬಿಲಿಯನ ಡಾಲರ್ ಜಿಡಿಪಿ ತಲುಪಲಿದೆ. ಒಟ್ಟು ಸಂಪತ್ತು ರೂ. 616 ಲಕ್ಷಕೋಟಿ ಆಗಿದೆ.

ಪ್ರಾನ್ಸ್

ಪ್ರಾನ್ಸ್

ಪ್ರಾನ್ಸ್ ಪಶ್ಚಿಮ ಯುರೋಪಿಯನ್ ಪ್ರಸಿದ್ದ ದೇಶವಾಗಿದ್ದು, ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಈಗಿರುವ 2809 ಬಿಲಿಯನ್ ಡಾಲರ್ ಜಿಡಿಪಿಯಿಂದ 2030ರಲ್ಲಿ ಆರ್ಥಿಕ ಮೌಲ್ಯ 3476 ಬಿಲಿಯನ್ ಡಾಲರ್ ಜಿಡಿಪಿ ಆಗಲಿದೆ. ಶೇ. 1.5ರಷ್ಟು ಹೆಚ್ಚಳ ಸಾಧಿಸಲಿದೆ. ಇದು ರೂ. 442 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

ಬ್ರೆಜಿಲ್

ಬ್ರೆಜಿಲ್

ಬ್ರೆಜಿಲ್ ದಕ್ಷಿಣ ಅಮೆರಿಕಾದ ದೇಶ. ಇದು ಶೆ. 2.5ರಷ್ಟು ಬೆಳವಣಿಗೆಯೊಂದಿಗೆ 2030ರಲ್ಲಿ ದೇಶದ ಆರ್ಥಿಕ ಮೌಲ್ಯ 3161 ಬಿಲಿಯನ್ ಡಾಲರ್ ಜಿಡಿಪಿ ಆಗಲಿದೆ. ಪ್ರಸ್ತುತ 2315 ಬಿಲಿಯನ್ ಡಾಲರ್ ಜಿಡಿಪಿ ಇದೆ.

ಕೆನಡಾ

ಕೆನಡಾ

ಶೇ. 2.1ರ ಜಿಡಿಪಿ ಬೆಳವಣಿಗೆಯಂತೆ 2030ರಲ್ಲಿ ಕೆನಡಾ ಜಗತ್ತಿನ 9ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.
ಈಗಿರುವ 1829 ಬಿಲಿಯನ್ ಡಾಲರ್ ಆರ್ಥಿಕ ಮೌಲ್ಯ 2030ರಲ್ಲಿ 2486 ಬಿಲಿಯನ್ ಡಾಲರ್ ಆಗಲಿದೆ. ಈಗ ಒಟ್ಟು ಸಂಪತ್ತು ರೂ. 314 ಲಕ್ಷಕೋಟಿ ಇದೆ.

ಇಟಲಿ

ಇಟಲಿ

ಇಟಲಿ ಜಗತ್ತಿನ 10ನೇ ಸಿರಿವಂತ ಹಾಗೂ 2030ರ ಹತ್ತನೇ ಅತಿದೊಡ್ಡ ಆರ್ಥಿಕ ದೇಶಗಳ ಸಾಲಿನಲ್ಲಿ ನಿಂತಿದೆ.
2016ರಲ್ಲಿ 2071 ಬಿಲಿಯನ್ ಡಾಲರ್ ಇರುವ ಆರ್ಥಿಕ ಮೌಲ್ಯ 2030ರ ವೇಳೆಗೆ 2350 ಬಿಲಿಯನ್ ಡಾಲರ್ ಆಗಲಿದೆ. ಶೇ. 0.8ರಂತೆ ಜಿಡಿಪಿ ಏರಿಕೆ ಕಾಣಲಿದೆ. ಪ್ರಸ್ತುತ ರೂ. 294 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+