Englishहिन्दी മലയാളം தமிழ் తెలుగు

ಪ್ರಪಂಚದ 10 ಶ್ರೀಮಂತ ದೇಶಗಳ ಸಾಲಿನಲ್ಲಿ ಭಾರತ

Written By: Siddu
Subscribe to GoodReturns Kannada

ವಿಶ್ವದ 10 ಮುಂಚೂಣಿ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದ್ದು, ಇದು ಭಾರತೀಯರಾದ ನಮಗೆಲ್ಲರಿಗೂ ಹೆಮ್ಮೆ ತರುವಂತ ಸಂಗತಿ.

ವ್ಯಕ್ತಿಗಳ ಸಂಪತ್ತಿನ ಆಧಾರದಲ್ಲಿ ಜಗತ್ತಿನ 10 ಸಿರಿವಂತ ದೇಶಗಳನ್ನು ಪಟ್ಟಿ ಮಾಡಲಾಗಿತ್ತು. ಅಮೆರಿಕ ಮೊದಲ ಸ್ಥಾನದಲ್ಲಿ ಮತ್ತು ಭಾರತ 7ನೇ ಸ್ಥಾನದಲ್ಲಿದೆ ಎಂದು ನ್ಯೂ ವಲ್ಡ್ ವೆಲ್ತ್ ವರದಿಯಲ್ಲಿ ತಿಳಿಸಿದೆ.

ವ್ಯಕ್ತಿಗಳು ಹೊಂದಿರುವ ಆಸ್ತಿ, ನಗದು, ಷೇರು, ಉದ್ದಿಮೆ ವಹಿವಾಟು ಒಳಗೊಂಡ ನಿವ್ವಳ ಸ್ವತ್ತು ಆಧರಿಸಿ ಸಂಪತ್ತು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಈ ಸಂಪತ್ತಿನ ಲೆಕ್ಕದಲ್ಲಿ ಸರ್ಕಾರದ ನಿಧಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. 

ಯುರೋಪಿನ ದೇಶಗಳು ಜಗತ್ತಿನ ಸಿರಿವಂತ ದೇಶಗಳ ಪಟ್ಟಿಯಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ.

ಇಲ್ಲಿ ಜಗತ್ತಿನ ಹತ್ತು ದೇಶಗಳ ಮಾಹಿತಿ ಹಾಗೂ ಅವುಗಳ ಸಂಪತ್ತು ಇತ್ಯಾದಿ ಪ್ರಮುಖ ಆಂಶಗಳನ್ನು ವಿವರಿಸಲಾಗಿದೆ.

ಅಮೆರಿಕ

ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೆರಿಕ ವಿಶ್ವದ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನದಲ್ಲಿ ನಿಂತಿದೆ.
ಅಮೆರಿಕಾದ ಒಟ್ಟು ಸಂಪತ್ತು ರೂ. 3276 ಲಕ್ಷ ಕೋಟಿ ಆಗಿದೆ. ಇಲ್ಲಿ ಜಗತ್ತಿನ ಹೆಚ್ಚು ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ ಗಳು, ಇ-ಕಾಮರ್ಸ್ ಕಂಪನಿಗಳು ಮತ್ತು ಉದ್ಯಮಿಗಳು ಇದ್ದಾರೆ. ಐಟಿ, ಬಿಟಿ ಮತ್ತು ಕೈಗಾರಿಕೊದ್ಯಮ ಕ್ಷೇತ್ರದಲ್ಲಿ ಪಾರುಪತ್ಯ ಹೊಂದಿದೆ.

ಚೀನಾ

ಚೀನಾ ವಿಶ್ವದ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಜತೆಗೆ ಏಷಿಯಾದ ಮೊದಲ ಶ್ರೀಮಂತ ದೇಶ ಎಂಬ ಖ್ಯಾತಿ ಗಳಿಸಿದೆ.
ನವೋದ್ಯಮಗಳ ಸಾಲಿನಲ್ಲಿ ಚೀನಾ ಮುಂಚೂಣಿಯಲ್ಲಿ ನಿಲ್ಲುವ ದೇಶವಾಗಿದೆ. ಚೀನಾ ದೇಶ ಒಟ್ಟು ರೂ. 1165 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ. ಚೀನಾದಲ್ಲಿ ಅನೇಕ ಪ್ರಸಿದ್ದ ಇ-ಕಾಮರ್ಸ್ ಮತ್ತು ಕೈಗಾರಿಕೊದ್ಯಮಗಳಿದ್ದು, ಸಂಪತ್ತಿನಲ್ಲಿ ಎರಡನೇ ಸ್ಥಾನದಲ್ಲಿ ನಿಂತಿದೆ. ಇದು ತುಂಬಾ ವೇಗವಾಗಿ ಬೆಳೆಯುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ.

ಜಪಾನ್

ಇದು ಏಷಿಯಾದ ಎರಡನೇ ದೇಶವಾಗಿದ್ದು, ಜಗತ್ತಿನ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಜಪಾನ್ ತಂತ್ರಜ್ಞಾನ ಮತ್ತು ಉದ್ದಿಮೆ ವಹಿವಾಟಿನ ಪ್ರಮುಖ ದೇಶವಾಗಿದೆ. ಇದು ಒಟ್ಟು ರೂ. 1011 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

ಇಂಗ್ಲೆಂಡ್

ಇಂಗ್ಲೆಂಡ್ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ ಗಳನ್ನು ಆರಂಭಿಸುವ ವಿಷಯದಲ್ಲಿ ಅಮೆರಿಕಾ ನಂತರದಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ತಂತ್ರಜ್ಞಾನ ಮತ್ತು ಕೈಗಾರಿಕೊದ್ಯಮ ವಹಿವಾಟಿನ ಜೋರಾಗಿದ್ದು, ಇದರ ಒಟ್ಟು ಸಂಪತ್ತು ರೂ. 616 ಲಕ್ಷಕೋಟಿ ಆಗಿದೆ.

ಜರ್ಮನಿ

ಜರ್ಮನಿ ಪಶ್ಚಿಮ ಯುರೋಪಿಯನ್ ದೇಶ. ಇದು ಜಗತ್ತಿನ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ. ಜರ್ಮನಿಯ ಒಟ್ಟು ಸಂಪತ್ತು ರೂ. 609 ಲಕ್ಷಕೋಟಿ ಆಗಿದೆ.

ಪ್ರಾನ್ಸ್

ಪ್ರಾನ್ಸ್ ಕೂಡ ಪಶ್ಚಿಮ ಯುರೋಪಿಯನ್ ದೇಶ. ಇದು ವಿಶ್ವದಲ್ಲಿನ ಪ್ರಸಿದ್ದ ಪ್ರವಾಸೋದ್ಯಮ ದೇಶವಾಗಿದೆ.
ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಇದು ರೂ. 442 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

ಭಾರತ

ಅತಿ ದೊಡ್ಡ ಜನಸಂಖ್ಯೆಯಿಂದಾಗಿ ಭಾರತವು ಜಗತ್ತಿನ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಭಾರತ ಜಗತ್ತಿನಲ್ಲಿ ತಂತ್ರಜ್ಞಾನ ಆಧಾರಿತ, ತಂತ್ರಜ್ಞಾನ ರಹಿತ, ಸ್ಟಾರ್ಟ್ಅಪ್, ಇ-ಕಾಮರ್ಸ್ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುತ್ತಿದೆ. ಅಲ್ಲದೇ ತಂತ್ರಜ್ಞಾನ ಮತ್ತು ಉದ್ದಿಮೆ ವಹಿವಾಟಿನ ಪ್ರಮುಖ ದೇಶವಾಗಿದೆ.
ಭಾರತವು ಒಟ್ಟು ರೂ. 375 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ. ಭಾರತ ತುಂಬಾ ವೇಗವಾಗಿ ಬೆಳೆಯುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಕೆನಡಾ

ಕೆನಡಾ ಸಿರಿವಂತ ದೇಶಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇದರ ಒಟ್ಟು ಸಂಪತ್ತು ರೂ. 314 ಲಕ್ಷಕೋಟಿ

ಆಸ್ಟ್ರೇಲಿಯಾ

ಆಸ್ಟ್ರೇಲಿಯಾದಲ್ಲಿ ಕೇವಲ 2.20 ಕೋಟಿಯಷ್ಟು ಮಾತ್ರ ಜನಸಂಖ್ಯೆ ಇದ್ದರೂ 9ನೇ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ. ಭಾರತಕ್ಕೆ ಹೋಲಿಸಿದರೆ ಇದರ ಜನಸಂಖ್ಯೆ ತೀರಾ ಕಡಿಮೆ.
ಆಸ್ಟ್ರೇಲಿಯಾ ರೂ. 305 ಲಕ್ಷಕೋಟಿ ಸಂಪತ್ತು ಹೊಂದಿರುವ ದೇಶವಾಗಿದೆ.

ಇಟಲಿ

ಇಟಲಿ ಜಗತ್ತಿನ ಸಿರಿವಂತ ದೇಶಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ನಿಂತಿದೆ. ಇದು ರೂ. 294 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

English summary

India is now seventh wealthiest country in the world

India has made it way to the top 10 wealthiest countries in the world with a total individual wealth of $5,600 billion, while the United States topped the chart.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns