92 ವರ್ಷಗಳ ಚರಿತ್ರೆ ಹೊಂದಿರುವ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಅಂತ್ಯ ಹಾಡಲಾಗಿದ್ದು, 2016-17ನೇ ಸಾಲಿನಿಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಆಗುವುದಿಲ್ಲ.
92 ವರ್ಷಗಳ ಚರಿತ್ರೆ ಹೊಂದಿರುವ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಅಂತ್ಯ ಹಾಡಲಾಗಿದ್ದು, 2016-17ನೇ ಸಾಲಿನಿಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಆಗುವುದಿಲ್ಲ. ಮುಂದಿನ ಹಣಕಾಸು ಬಜೆಟ್ ನಲ್ಲಿ ರೈಲ್ವೆ ಬಜೆಟ್ ವಿಲೀನಗೊಳಿಸುವುದಕ್ಕೆ ಬುಧವಾರ ನಡೆದ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
1. ಬಜೆಟ್ ಮಂಡನೆ ಅವಧಿ
ವಿಲೀನದ ಜತೆಗೆ ರೈಲ್ವೆ ಬಜೆಟ್ ಮಂಡನೆ ಅವಧಿಯಲ್ಲೂ ಬದಲಾವಣೆಗಳಾಗಲಿವೆ. ವಾಡಿಕೆಯಂತೆ ಸಾಮಾನ್ಯವಾಗಿ ಬಜೆಟ್ ನ್ನು ಫೆಬ್ರುವರಿ ಅಂತ್ಯದಲ್ಲಿ ಮಂಡಿಸಲಾಗುತ್ತದೆ. ಹೀಗಾಗಿ ಫೆಬ್ರುವರಿ ಬದಲಾಗಿ ಜನೆವರಿ ತಿಂಗಳಲ್ಲಿ ಬಜೆಟ್ ಮಂಡಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ತಾತ್ವಿಕವಾದ ಒಪ್ಪಿಗೆ ನೀಡಲಾಗಿದೆ.
2. 'ವೆಚ್ಚ ಮತ್ತು ವರಮಾನ' ಬಜೆಟ್
2017-18ರ ಬಜೆಟ್ ನಲ್ಲಿ ಯೋಜನೆ ಮತ್ತು ಯೋಜನೆತರ ವೆಚ್ಚಗಳ ನುಡುವಿನ ವರ್ಗಿಕರಣ ಮಾಡುವ ಬದಲು 'ವೆಚ್ಚ ಮತ್ತು ವರಮಾನ' ಎಂದು ವಿಭಜನೆ ಮಾಡಲು ತಿರ್ಮಾನಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು.
3.ಬಜೆಟ್ ಮಂಡನೆ ಚರಿತ್ರೆ
ರೈಲ್ವೆಗೆ ಪ್ರತ್ಯೇಕ ಬಜೆಟ್ ಮಂಡಿಸುವ ಪದ್ದತಿಯನ್ನು ಬ್ರಿಟಿಷರು ಜಾರಿಗೆ ತಂದಿದ್ದರು. ಬಜೆಟ್ ಮಂಡನೆ ಸಂಪ್ರದಾಯ 1924ರಿಂದ ಬ್ರಿಟಿಷರ ಕಾಲದಿಂದಲೇ ಚಾಲ್ತಿಯಲ್ಲಿದೆ.
4. ಸಮ್ಮಿಶ್ರ ಸರ್ಕಾರಗಳ ಪ್ರತಿಷ್ಠೆ ತಂತ್ರ
ಬ್ರಿಟಿಷರ ಕಾಲದಿಂದಲೂ(1924) ಚಾಲ್ತಿಯಲ್ಲಿದ್ದ ರೈಲ್ವೆ ಬಜೆಟ್ ಮಂಡನೆಯನ್ನು ಸಾಮಾನ್ಯ ಬಜೆಟ್ ಜತೆ ವಿಲೀನಗೊಳಿಸಲು 1996ರ ನಂತರ ಕೈಗೊಂಡ ಮಹತ್ವದ ನಿರ್ಧಾರದ ಪರಿಣಾಮ ಎನ್ನಲಾಗುತ್ತಿದೆ. ಸಮ್ಮಿಶ್ರ ಸರ್ಕಾರಗಳ ಕಾಲದಲ್ಲಿ ರಾಜಕೀಯ ಮುಖಂಡರು ತಮ್ಮ ಪ್ರತಿಷ್ಠೆ ಹೆಚ್ಚಿಸಲು ರೈಲ್ವೆ ಇಲಾಖೆ ಸಾಧನವಾಗತೊಡಗಿತು. ಇನ್ಮುಂದೆ ಇದಕ್ಕೆಲ್ಲಾ ಕಡಿವಾಣ ಬೀಳುವ ಸಾಧ್ಯತೆ ಇದೆ.
5. ಸ್ವಾಯತ್ತತೆಗೆ ಧಕ್ಕೆ ಇಲ್ಲ
ಕೇಂದ್ರದ ಈ ನಿರ್ಧಾರ ಹೊಸ ಬದಲಾವಣೆಗಳಿಗೆ, ವೇಗದ ಕ್ರಾಂತಿಕಾರಿಗೆ ನಾಂದಿ ಹಾಡಲಿದೆ. ದೇಶದ ಆರ್ಥಿಕ ಪ್ರಗತಿಗೆ ವರವಾಗಲಿದೆ. ಜತೆಗೆ ರೈಲ್ವೆ ಇಲಾಖೆಯ ಕಾರ್ಯನಿರ್ವಹಣೆಯ ಸ್ವಾಯತತ್ತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
6. ಜಿಡಿಪಿ ಮುಂಗಡ ಅಂದಾಜು
ಸಾಮಾನ್ಯವಾಗಿ ಹೊಸ ರೈಲ್ವೆ ಬಜೆಟ್ ಮಂಡನೆ ತಯಾರಿ ಅಕ್ಟೋಬರ್ ವೇಳೆಗೆ ಪ್ರಾರಂಭವಾಗಲಿದ್ದು, ಜಿಡಿಪಿ ಮುಂಗಡ ಅಂದಾಜನ್ನು ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ಜನೆವರಿ ೭ಕ್ಕೆ ಮೊದಲೇ ಸಿದ್ದಪಡಿಸಲಿದೆ. ಮುಂಗಡ ಅಂದಾಜಿನ ವೇಳೆಯಲ್ಲಿ ಲಭ್ಯವಿರುವ ಅಂಕಿ-ಅಂಶಗಳನ್ನು ಬಜೆಟ್ ತಯಾರಿಸುವ ಸಂದರ್ಭದಲ್ಲಿ ಬಳಸಲಾಗುವುದು ಎಂದು ತಿಳಿಸಲಾಗಿದೆ.
7. ಅಂಕಿ-ಅಂಶಗಳ ನೋಟ
* 7ನೇ ವೇತನ ಆಯೋಗದ ಅನುಷ್ಠಾನದಿಂದ 40,000 ಕೋಟಿ ಹೆಚ್ಚುವರಿ ಹೊರೆ ಆಗಲಿದೆ.
* ಪ್ರಯಾಣಿಕರ ಸೇವೆಗೆ ಸಬ್ಸಿಡಿ ರೂ. 33,000 ಕೋಟಿ ವೆಚ್ಚ ಮೊತ್ತ
* ಅಪೂರ್ಣವಾಗಿರುವ ಮತ್ತು ನಡೆಯುತ್ತಿರುವ ಯೋಜನೆಗಳ ಮೊತ್ತ ರೂ. 4.83 ಲಕ್ಷ ಕೋಟಿ
* ವಿಲೀನ ಪ್ರಕ್ರಿಯೆಯಿಂದ ರೂ. 10,000 ಕೋಟಿ ಡಿವಿಡೆಂಟ್ ಪಾವತಿ ರದ್ದತಿ ರೂಪದಲ್ಲಿ ಉಳಿಯುವ ಮೊತ್ತ
8. ಜನಸಾಮಾನ್ಯರಿಗೆ ಲಾಭ ಏನು?
ಸಾಮಾನ್ಯ ಬಜೆಟ್ ಮಂಡನೆಯನ್ನು ವಿಲೀನಗೊಳಿಸಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಸಿಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆದಿದೆ. ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿದೆ. ರೈಲ್ವೆ ಟಿಕೇಟ್ ದರಗಳು ಹೆಚ್ಚಳವಾಗುತ್ತಿರುವುದಕ್ಕೆ ಕಾರಣಗಳೇನು? ಈಗ ವಿಲೀನದ ನಂತರ ಆಗಬಹುದಾದ ಲಾಭಗಳಾದರೂ ಏನೆಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
9. ಜಿಎಸ್ಟಿ ಹಿನ್ನೆಲೆ
ಹೊಸ ಪ್ರಸ್ತಾವನೆಯ ಪ್ರಕಾರ ಸಮಗ್ರ ಬಜೆಟ್ ಅನ್ನು ಫೆಬ್ರುವರಿ ಅಂತ್ಯಕ್ಕೆ ಬದಲಾಗಿ ೩೧, ಜನೆವರಿಯಲ್ಲಿ ಎರಡು ಸಂಸತ್ತುಗಳಲ್ಲಿ ಮಂಡಿಸಲಾಗುವುದು.
ಸಾಮಾನ್ಯ ಬಜೆಟ್ ಮಂಡನೆಯೊಂದಿಗೆ ರೈಲ್ವೆ ಬಜೆಟ್ ಮಂಡನೆಯನ್ನು ವಿಲೀನಗೊಳಿಸುವುದರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ವ್ಯವಸ್ಥೆಯನ್ನು ಏಪ್ರಿಲ್ ೧, ೨೦೧೭ರಲ್ಲಿ ಜಾರಿಗೆ ತರುವ ಗುರಿ ತಲುಪಲು ಸಾಧ್ಯವಾಗಲಿದೆ ಎನ್ನಲಾಗಿದೆ.
10. ಐತಿಹಾಸಿಕ ನಡೆ
ದೇಶದಲ್ಲಿ ಸಂಪರ್ಕ ಸಾಧಿಸಲು, ರೈಲ್ವೆಯ ಬಂಡವಾಳ ವೆಚ್ಚ ಹೆಚ್ಚಿಸಲು ಹಾಗೂ ಆರ್ಥಿಕ ಬಲವರ್ಧನೆ ಹೆಚ್ಚಿಸುವಲ್ಲಿ ಇದು ಐತಿಹಾಸಿಕ ನಡೆ ಆಗಲಿದೆ. ಇಲಾಖೆಯ ಕ್ರಿಯಾತ್ಮಕ ಸ್ವಾಯತತ್ತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದರು.


Click it and Unblock the Notifications