ದೂರಸಂಪರ್ಕ ಸೇವೆಗಳನ್ನು ಒದಗಿಸುವ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೋಡಾಫೋನ್ ಕಂಪನಿ 10GB ಡೇಟಾವನ್ನು ಮೂರು ತಿಂಗಳ ಅವಧಿಗೆ ಘೋಷಿಸಿದೆ.
4G ಹ್ಯಾಂಡ್ ಸೆಟ್ ಗಳನ್ನು ಹೊಂದಿರುವವರು 10GB ಡೇಟಾ ಸೇವೆಗಳನ್ನು 3 ತಿಂಗಳ ಅವಧಿವರೆಗೆ ಪಡೆಯಬಹುದು ಎಂದು ಕಂಪನಿ ಹೇಳಿದೆ. BSNL ಉಚಿತ ಕರೆ ಮತ್ತು ನೆಟ್ ಪ್ಯಾಕ್, ಜಿಯೊಗೆ ಸವಾಲು
1. ರಿಲಾಯನ್ಸ್ ಜಿಯೊ ಎಫೆಕ್ಟ್
ರಿಲಾಯನ್ಸ್ ಜಿಯೊ ಸುನಾಮಿಗೆ ಸಿಲುಕಿರುವ ಟೆಲಿಕಾಂ ಸಂಸ್ಥೆಗಳು ಅನೇಕ ಉಚಿತ ಆಫರ್ ಗಳನ್ನು ನೀಡಲು ಮುಂದಾಗುತ್ತಿವೆ. ಏರ್‌ಟೆಲ್, ಐಡಿಯಾ, ಬಿಎಸ್ಎನ್ಎಲ್ ಕಂಪನಿಗಳ ಸಾಲಿನಲ್ಲಿ ಈಗ ವೋಡಾಫೋನ್ ಸೇರಿದೆ.
2. 4G ಸ್ಮಾರ್ಟ್ ಫೋನ್
ಕಳೆದ 6 ತಿಂಗಳು ಯಾರು ವೋಡಾಫೋನ್ ನೆಟ್ವರ್ಕ್ ಬಳಸಿರುವುದಿಲ್ಲವೋ ಅದನ್ನು ಹೊಸ 4G ಸ್ಮಾರ್ಟ್ ಫೋನ್ ಎಂದು ವೋಡಾಫೋನ್ ವ್ಯಾಖ್ಯಾನಿಸಿದೆ.
3. 1GB ಬೆಲೆಗೆ 10GB
4G ಹ್ಯಾಂಡ್ ಸೆಟ್ ಸಂಪರ್ಕದೊಂದಿಗೆ 1GB ಡೇಟಾ ವೆಚ್ಚದಲ್ಲಿ 10GB ಡೇಟಾವನ್ನು ಪಡೆಯಬಹುದು. ಅಂದರೆ 1GB ಡೇಟಾವನ್ನು ಖರೀದಿಸಿದರೆ 9GB ಡೇಟಾ ಉಚಿತವಾಗಿ ಪಡೆಯಬಹುದಾಗಿದೆ. ಈ 10GB ಡೇಟಾ ಮೂರು ತಿಂಗಳವರೆಗೆ ಆನಂದಿಸಬಹುದು.
4. ಡಿಸೆಂಬರ್ 31 ರವರೆಗೆ ಆಫರ್
ವೋಡಾಫೋನಿನ 3G ಮತ್ತು 4G ಸೇವೆಗಳು ಲಭ್ಯವಿರುವ ವಲಯಗಳಲ್ಲಿ ಈ ಆಫರ್ ಪಡೆಯಬಹುದು. ಪ್ರಿಪೇಡ್ ಮತ್ತು ಪೋಸ್ಟ್ ಪೇಡ್ ಗ್ರಾಹಕರು ಈ ಸೌಲಭ್ಯವನ್ನು ಡೆಸೆಂಬರ್ 31ರವರೆಗೆ ಪಡೆಯಬಹುದಾಗಿದೆ.
5. ಲಭ್ಯ ವಲಯಗಳು
ದೆಹಲಿ, ಮುಂಬೈ, ಕೊಲ್ಕತ್ತಾ ವಲಯಗಳಲ್ಲಿ ವೋಡಾಫೋನ್ ಚಂದಾದಾರರು 1gb ಡೇಟಾ ರೀಚಾರ್ಜ್ ಮಾಡಿದರೆ ೯ಜಿಬಿ ಹೆಚ್ಚುವರಿ ಡೇಟಾವನ್ನು ಪಡೆಯಲಿದ್ದಾರೆ. ಇದು 4g ನೆಟ್ವರ್ಕ್ ಗೆ ಮಾತ್ರ ಸೀಮಿತವಾಗಿದೆ.
6. 3G ಡೇಟಾ
ಉತ್ತರ ಪ್ರದೇಶ (ಪಶ್ಚಿಮ, ಉತ್ತರ ಪ್ರದೇಶ (ಪೂರ್ವ, ಹರಿಯಾಣ, ಕರ್ನಾಟಕ, ಗುಜರಾತ್,ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಅಸ್ಸಾಂ, ಈಶಾನ್ಯ ರಾಜ್ಯಗಳಲ್ಲಿ ವೊಡಾಫೋನ್ ಚಂದಾದಾರರು ಹೆಚ್ಚುವರಿ 9GB ಡೇಟಾ ಸೌಲಭ್ಯವನ್ನು 12am ನಿಂದ 6am ಅವಧಿವರೆಗೆ 3G ಡೇಟಾವನ್ನು ಪಡೆಯಬಹುದಾಗಿದೆ.
7. ವೋಡಾಫೋನ್ ಸೂಚನೆ
1GB ಡೇಟಾ ಪ್ಯಾಕ್(ರೂ.250 ಮತ್ತು ಅದಕ್ಕಿಂತಲೂ ಹೆಚ್ಚು) ಕನಿಷ್ಟ 28 ದಿನಗಳಿಗೆ ರೀಚಾರ್ಜ್ ಮಾಡುವವರಿಗೆ 1+9GB ಡೇಟಾ ಆಫರ್ ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಮಲ್ಟಿಪಲ್ ಆಫರ್ ಗಳನ್ನು ಸಂಯೋಜಿಸಲು ಸಾಧ್ಯವಿಲ್ಲ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications