For Quick Alerts
ALLOW NOTIFICATIONS  
For Daily Alerts

ಭಾರತದ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆ

By Siddu
|

2015-16ನೇ ಸಾಲಿನಲ್ಲಿ ದೇಶದಲ್ಲಿಯ ನಿರುದ್ಯೋಗ ಪ್ರಮಾಣ ಶೇ. 5ರಷ್ಟು ಹೆಚ್ಚಿರುವ ಅಘಾತಕಾರಿ ವಿಷಯವನ್ನು ಕಾರ್ಮಿಕ ಮಂಡಳಿ ವರದಿ ಮಾಡಿದೆ. ಇದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಕಳೆದ ಐದು ವರ್ಷಗಳಲ್ಲಿನ ಗರಿಷ್ಠ ಮಟ್ಟ ಇದಾಗಿದೆ.

1. ಐದನೇ ವರದಿ

1. ಐದನೇ ವರದಿ

ಕಳೆದ ಐದು ವರ್ಷಗಳಿಂದ ಉದ್ಯೋಗ ಮತ್ತು ನಿರುದ್ಯೋಗ ಪ್ರಮಾಣ ಅಳೆಯುವ ವರದಿಯನ್ನು ತಯಾರಿಸಲಾಗುತ್ತಿದೆ. ಕಾರ್ಮಿಕ ಮಂಡಳಿ ರಾಷ್ಟ್ರ ಮಟ್ಟದಲ್ಲಿ ಪ್ರತಿವರ್ಷ ವರದಿ ಸಿದ್ದಪಡಿಸುತ್ತಿದ್ದು, ಇದು ಐದನೇ ವರದಿಯಾಗಿದೆ.

2. ಮೇಕ್ ಇನ್ ಇಂಡಿಯ

2. ಮೇಕ್ ಇನ್ ಇಂಡಿಯ

ದೇಶದ ಬೆಳವಣಿಗೆಯಲ್ಲಿ ಹಾಗೂ ಉದ್ಯೋಗ ಸೃಷ್ಟಿ ಮಾಡುವಲ್ಲಿ ಅಂತರ್ಗತ ಪಾತ್ರ ಪಾತ್ರವಹಿಸಿದ್ದ ಮೇಕ್ ಇನ್ ಇಂಡಿಯದಂತಹ ಯೋಜನೆಗಳ ನಡುವೆಯೂ ನಿರುದ್ಯೋಗದ ಪ್ರಮಾಣ ಹೆಚ್ಚಿರುವುದು ಆಶ್ಚರ್ಯಕರವಾಗಿದೆ.

ವರದಿಯಲ್ಲಿನ ಪ್ರಮುಖ ಅಂಶಗಳು

ವರದಿಯಲ್ಲಿನ ಪ್ರಮುಖ ಅಂಶಗಳು

- 2015-16ರಲ್ಲಿ ನಗರ ಪ್ರದೇಶದಲ್ಲಿ ಶೇ. 4.9ರಷ್ಟಿದ್ದು, ಗ್ರಾಮೀಣ ಭಾಗದ ನಿರುದ್ಯೋಗ ಪ್ರಮಾಣ ಶೇ. 5.1ರಷ್ಟಿದೆ.
- ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ ಶೇ. 9.7
- ಪುರುಷರಲ್ಲಿ ನಿರುದ್ಯೋಗ ಪ್ರಮಾಣ ಶೇ. 4.3
- ಶೇ. 77ರಷ್ಟು ಕುಟುಂಬಗಳಿಗೆ ನಿಶ್ಚಿತ ವೇತನ ಇಲ್ಲ
- ತ್ರಿಪುರಾ ರಾಜ್ಯ ಅತ್ಯಂತ ಹೆಚ್ಚು ನಿರುದ್ಯೋಗ ಪ್ರಮಾಣ ಶೇ. 19.7ರಷ್ಟು ಹೊಂದಿದೆ.

4. ನಿರುದ್ಯೋಗ ಪ್ರಮಾಣ

4. ನಿರುದ್ಯೋಗ ಪ್ರಮಾಣ

2010-11 - 9.3%
2011-12 - 3.8%
2012-13 - 4.7%
2013-14 - 4.9%
2014-15 - ವರದಿ ತಯಾರಿಸಿರುವುದಿಲ್ಲ
2015-16 - 5%

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶೇ. ಪ್ರಮಾಣ

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶೇ. ಪ್ರಮಾಣ

ತ್ರಿಪುರಾ - 19.7%
ಸಿಕ್ಕಿಂ - 18.1%
ಲಕ್ಷದ್ವೀಪ - 16.1%
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ - 12.7%
ಕೇರಳ - 12.5%
ಹಿಮಾಚಲ ಪ್ರದೇಶ - 10.6%

English summary

India’s Unemployment Rate Increased

Unemployment rate in India has shot up to a five-year high of 5 per cent in 2015-16, with the figure significantly higher at 8.7 per cent for women as compared to 4.3 per cent for men, says a report by Labour Bureau.
Story first published: Saturday, October 1, 2016, 15:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X