ದೀಪಾವಳಿ ಹಬ್ಬದ ಕೊಡುಗೆಯಾಗಿ ರೈಲ್ವೆ ಪ್ರಯಾಣಿಕರು ಕೇವಲ ಒಂದು ಪೈಸೆಯಲ್ಲಿ 'ಪ್ರಯಾಣ ವಿಮೆ ಯೋಜನೆ'ಯನ್ನು ಇಂದಿನಿಂದ ಪಡೆಯಹುದಾಗಿದೆ.
ಅಕ್ಟೋಬರ್ 7ರಿಂದ 92 ಪೈಸೆ ವಿಮಾ ಯೋಜನೆ ಬದಲಿಗೆ ರೈಲ್ವೆ ಪ್ರಯಾಣಿಕರು ಕೇವಲ ಒಂದು ಪೈಸೆ ಟೋಕನ್ ಬೆಲೆಯಲ್ಲಿ ಐಚ್ಛಿಕ ಪ್ರಯಾಣ ವಿಮೆ ಯೋಜನೆ ಸೌಲಭ್ಯ ಲಭ್ಯವಿದೆ. ರೈಲ್ವೆ ಬಜೆಟ್ ವಿಲೀನಕ್ಕೆ ಕೇಂದ್ರ ಅಸ್ತು, ಇನ್ಮುಂದೆ ಇಲ್ಲ ಪ್ರತ್ಯೇಕ ಬಜೆಟ್!
1. 92 ಪೈಸೆಯಿಂದ 1 ಪೈಸೆ
ಸೆಪ್ಟಂಬರ್ 1ರಂದು ಬಿಡುಗಡೆಗೊಳಿಸಿದ ಯೋಜನೆಯನ್ನು ಅತಿ ಹೆಚ್ಚಿನ ಸಂಖ್ಯೆಯ ರೈಲು ಪ್ರಯಾಣಿಕರು ಆಯ್ಕೆ ಮಾಡುತ್ತಿದ್ದು, ಆಗ ಇದ್ದ 92 ಪೈಸೆ ಪ್ರೀಮಿಯಂ ಮೊತ್ತವನ್ನು ಒಂದು ಪೈಸೆಗೆ ಇಳಿಸಲಾಗಿದೆ ಎಂದು ಐಆರ್ಸಿಟಿಸಿ(IRCTC) ತಿಳಿಸಿದೆ.
2. ಅಕ್ಟೋಬರ್ 31ರವರೆಗೆ ಅನ್ವಯ
ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್(IRCTC) ಈ ಯೋಜನೆ ಅಡಿಯಲ್ಲಿ ಅಕ್ಟೋಬರ್ 31, 2016ರವರೆಗೆ ಕಾಯ್ದಿರಿಸುವ ಎಲ್ಲ ಟಿಕೆಟ್ ಗಳ ಮೇಲೆ ಕಡಿಮೆಗೊಳಿಸಿದ ಪ್ರೀಮಿಯಂ ಮೊತ್ತ ಅನ್ವಯವಾಗುತ್ತದೆ.
3. ಹೆಚ್ಚೆಚ್ಚು ಪ್ರಯಾಣಿಕರಿಗೆ ಯೋಜನೆ ಲಾಭ
ತಕ್ಷಣದಿಂದಲೇ ಕಡಿಮೆ ಬೆಲೆಯ ಐಚ್ಛಿಕ ಪ್ರಯಾಣ ವಿಮೆ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ನಿರ್ಧರಿಸಿದ್ದೇವೆ. ಇದು ವಿಶೇಷ ಪ್ರಚಾರದ ಅಳತೆಯಾಗಿದ್ದು, ಹೆಚ್ಚೆಚ್ಚು ರೈಲು ಪ್ರಯಾಣಿಕರಿಗೆ ಈ ಯೋಜನೆ ಸಿಗುವಂತಾಗಬೇಕು ಎಂದು IRCTC ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ.ಕೆ ಮನೋಚ ಹೇಳಿದರು.
5. ಯೋಜನೆ ಲಾಭ
ಈ ಯೋಜನೆಯನ್ನು 2016-17ರ ರೈಲ್ವೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದ್ದು, IRCTC ಪೋರ್ಟಲ್ ಮೂಲಕ ಟಿಕೆಟ್ ಬುಕಿಂಗ್ ಮಾಡಿದವರಿಗೆ ರೂ. 10 ಲಕ್ಷದವರೆಗೆ ವಿಮೆ ರಕ್ಷಣೆ ಪಡೆಯಲು ಅವಕಾಶವಿರುತ್ತದೆ.
- ಮರಣ ಹೊಂದಿದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ಆತನ ಕುಟುಂಬದವರಿಗೆ ಹತ್ತು ಲಕ್ಷದವರೆಗೆ ಪರಿಹಾರ ಧನ ದೊರೆಯುತ್ತದೆ.
- ಭಾಗಶಹ ಶಾಶ್ವತ ಅಂಗವೈಕಲ್ಯ ಸಂಭವಿಸಿದಲ್ಲಿ ರೂ. 7.5 ಲಕ್ಷದವರೆಗೆ ಪರಿಹಾರ ಧನ ದೊರೆಯುತ್ತದೆ.
- ಆಸ್ಪತ್ರೆ ವೆಚ್ಚಗಳಿಗಾಗಿ ರೂ. 2ಲಕ್ಷ ನೀಡಲಾಗುತ್ತದೆ.
- ಸಾವು ಅಥವಾ ಗಾಯ, ಅಹಿತಕರ ಘಟನೆ, ಉಗ್ರ ದಾಳಿ, ಡಕಾಯಿತಿ, ಗಲಭೆ, ಅಗ್ನಿಸ್ಪರ್ಶದಂತಹ ಘಟನೆಗಳನ್ನು ಸಂಭವಿಸಿದಲ್ಲಿ ರೂ. 10,000 ಪರಿಹಾರಾರ್ಥವಾಗಿ ನೀಡಲಾಗುತ್ತದೆ.
4. 1 ಕೋಟಿ ಜನರಿಂದ ಯೋಜನೆ ಆಯ್ಕೆ
ಇಲ್ಲಿಯವರೆಗೆ 1,20,87,625 ರೈಲು ಪ್ರಯಾಣಿಕರು ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವರ್ಷದ ಸೆಪ್ಟಂಬರ್ 1ರಂದು ಪರಿಚಯಿಸಲ್ಪಟ್ಟ ಈ ಯೋಜನೆಯನ್ನು ಸೆಪ್ಟಂಬರ್ 29ರವರೆಗೆ ಒಂದು ಕೋಟಿ ಪ್ರಯಾಣಿಕರು ಆಯ್ದುಕೊಂಡಿದ್ದಾರೆ. ಈ ಯೋಜನೆ ಪ್ರಯಾಣಿಕರ ಸ್ನೇಹಿಯಾದ್ದರಿಂದ ಜನರು ಆಯ್ಕೆ ಮಾಡುತ್ತಿದ್ದು, ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ ಎಂದು ಎ.ಕೆ ಮನೋಚ ಹೇಳಿದರು.
6. ಸೌಲಭ್ಯ ಯಾರಿಗೆ ದೊರೆಯುತ್ತದೆ?
- ಇ-ಟಿಕೆಟ್ ಬುಕ್ ಮಾಡುವವರಿಗೆ ಈ ಸೌಲಭ್ಯ ಲಭ್ಯವಿರುತ್ತದೆ.
- ಈ ಯೋಜನೆ ಎಲ್ಲಾ ವರ್ಗ(Class)ಗಳ ಮೇಲೂ ಸಮಾನವಾಗಿದ್ದು, ಇ-ಟಿಕೆಟ್ ಬುಕಿಂಗ್ ಮಾಡುವವರಿಗೆ ಈ ಸೌಲಭ್ಯ ಲಭ್ಯ
- ಪ್ರಯಾಣಿಕರು ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಟಿಕೆಟ್ ದರದಲ್ಲಿಯೇ ಈ ಮೊತ್ತವನ್ನು ಸೇರಿಸಲಾಗುತ್ತದೆ. ಟಿಕೆಟ್ ಬುಕಿಂಗ್ ಮತ್ತು ಪ್ರೀಮಿಯಂ ಪಾವತಿಯ ನಂತರ ನಾಮನಿರ್ದೇಶನಗೊಂಡ ವಿವರದ ಸಂದೇಶ ಬರುತ್ತದೆ.


Click it and Unblock the Notifications