ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕು ನಿರೀಕ್ಷೆಯಂತೆ 25 ಬೆಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಿದ್ದು, ಶೇ. 6.25 ಕ್ಕೆ ದರ ಇಳಿಸಲಾಗಿದೆ.
ಆರ್ಬಿಐ ರೆಪೊದರ ಕಡಿತ ಮಾಡಿದ ನಂತರ ಕೆಲ ಬ್ಯಾಂಕುಗಳು ಸಹ ಬಡ್ಡಿದರವನ್ನು ಕಡಿತಗೊಳಿಸಿವೆ.

ಇಲ್ಲಿ ಕೆಲ ಬ್ಯಾಂಕುಗಳು ಕಡಿಮೆಗೊಳಿಸಿರುವ ಬೆಸ್ ದರವನ್ನು ನೀಡಲಾಗಿದೆ.
1. ಐಸಿಐಸಿಐ
ಐಸಿಐಸಿಐ ಬ್ಯಾಂಕು ಹಣ ಆಧಾರಿತ ಸಾಲ ಪ್ರಮಾಣ ಕನಿಷ್ಟ ವೆಚ್ಚವನ್ನು(MCLR) 5 ಬೆಸಿಸ್ ಪಾಯಿಂಟ್ ಗಳಷ್ಟು ಕಡಿಮೆಗೊಳಿಸಿದೆ. ಇದು ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ.
2. ಕೊಟಕ್ ಮಹೀಂದ್ರಾ ಬ್ಯಾಂಕು
ಆರ್ಬಿಐ 0.25% ರೆಪೊ ದರ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕು ತನ್ನ ಸಾಲದ ದರವನ್ನು ಶೇ. 0.1 ರವರೆಗೆ ಕಡಿತಗೊಳಿಸಿದೆ.
ಈಗ ಬೆಸ್ ಪಾಯಿಂಟ್ ಶೇ.9.50 ರಿಂದ ಶೇ. 9.40ಕ್ಕೆ ಅನ್ವಯವಾಗುತ್ತದೆ.
3. ಕೆನರಾ ಬ್ಯಾಂಕು
ಕೆನಾರಾ ಬ್ಯಾಂಕಿನ ಪರಿಷ್ಕೃತ ಮೂಲ ದರ ಶೇ. 0.05 ಆಗಿದ್ದು, ಶೇ. 9.65 ರಿಂದ 9.60ಕ್ಕೆ ಇಳಿಸಲಾಗಿದೆ. ಅಕ್ಟೋಬರ್ 11ರಿಂದ ಈ ದರ ಜಾರಿಯಾಗಲಿದೆ.
4. ಇಂಡಿಯನ್ ಬ್ಯಾಂಕು
ಆರ್ಬಿಐ ರೆಪೊ ದರ ಕಡಿತ ನಂತರ ಇಂಡಿಯನ್ ಬ್ಯಾಂಕು ಶೇ. 0.01ರಷ್ಟು ಹಣ ಆಧಾರಿತ ಸಾಲ ಪ್ರಮಾಣ ಕನಿಷ್ಟ ವೆಚ್ಚವನ್ನು(MCLR) ಕಡಿತಗೊಳಿಸಿದೆ. ಅಂದರೆ ಶೇ. 9.45 ರಿಂದ 9.35ಕ್ಕೆ ಇಳಿಸಲಾಗಿದೆ. ಅಕ್ಟೋಬರ್ 7ರಿದ ಈ ದರ ಜಾರಿ ಬರಲಿದೆ.
5. ಕರೂರ್ ವೈಶ್ಯ ಬ್ಯಾಂಕು
ಕರೂರ್ ವೈಶ್ಯ ಬ್ಯಾಂಕು MCLR ದರವನ್ನು ಶೇ. 0.35ರಷ್ಟು ಇಳಿಸಿದೆ.
6. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಶೇ. 0.15ರವರೆಗೆ ಸಾಲದ ದರವನ್ನು ಕಡಿತಗೊಳಿಸಿದೆ.
7. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯ
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯ ಶೇ. 0.05ರಷ್ಟು ಎಲ್ಲಾ ವ್ಯವಹಾರಗಳ ಸಾಲದ ದರವನ್ನು ಕಡಿತಗೊಳಿಸಿದೆ. ಅಕ್ಟೋಬರ್ 17ರಿಂದ ಪರಿಣಾಮಕಾರಿಯಾಗಿ ಜಾರಿಯಾಗಲಿದೆ.


Click it and Unblock the Notifications