For Quick Alerts
ALLOW NOTIFICATIONS  
For Daily Alerts

ರೈತರು ವಾರಕ್ಕೆ ರೂ. 25,000 ವಿತ್ ಡ್ರಾ ಮಾಡಬಹುದು: ಕೇಂದ್ರ ವಿತ್ತ ಇಲಾಖೆ

ರೈತರು ಒಂದು ವಾರದಲ್ಲಿ ರೂ. 25,000 ನಗದನ್ನು ವಿತ್ ಡ್ರಾ ಮಾಡಬಹುದು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದರು.

By Siddu
|

ಪ್ರಸ್ತುತ ಬೆಳವಣಿಗೆಯಲ್ಲಿ ಹಳೆ ನೋಟುಗಳ ನಿಷೇಧದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಹತೋಟಿಗೆ ತರಲು ಕೇಂದ್ರ ವಿತ್ತ ಇಲಾಖೆ ಹಣ ವಿನಿಮಯ ನೀತಿ ಬದಲಾವಣೆಗೆ ಮುಂದಾಗಿದೆ.

ರೈತರಿಗೆ ಮತ್ತು ಮದುವೆ ಸಮಾರಂಭಗಳಿಗೆ ಅಡ್ಡಿಯಾಗದಿರಲಿ ಎಂದು ಸರ್ಕಾರ ಹಲವು ಪರಿಹಾರ ಮಾರ್ಗಗಳನ್ನು ಅನುಸರಿಸುತ್ತಿದ್ದು, ರೈತರು ಒಂದು ವಾರದಲ್ಲಿ ರೂ. 25,000 ನಗದನ್ನು ವಿತ್ ಡ್ರಾ ಮಾಡಬಹುದು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದರು.

ಕೆಲ ಪ್ರಮುಖ ಅಂಶಗಳು:
- ಮದುವೆ ಸಮಾರಂಭಗಳಿಗಾಗಿ ಬ್ಯಾಂಕ್ ಖಾತೆಯಿಂದ ರೂ. 2.5 ಲಕ್ಷದವರೆಗೆ ನಗದು ಪಡೆಯಬಹುದು.
- ಹಿಂಗಾರು ಋತುವಿನ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆ ಆಗದಿರಲಿ ಎಂಬ ಕಾರಣಕ್ಕಾಗಿ ಒಂದು ವಾರಕ್ಕೆ ಬೆಳೆ ಸಾಲವನ್ನು ರೂ. ರೂ. 25,000 ರವರೆಗೆ ಪಡೆಯಬಹುದಾಗಿದೆ.
- ಬೆಳೆ ಸಾಲ ವಿಮೆ ಪಾವತಿಗೆ ಸಮಯ ಮಿತಿಯನ್ನು 15 ದಿನಗಳವರೆಗೆ ಹೆಚ್ಚಿಸಲಾಗಿದೆ.
- ಕೃಷಿ ವ್ಯಾಪಾರಿಗಳು ಹಲವು ಬಗೆಯ ವೆಚ್ಚಗಳನ್ನು ಭರಿಸಲು ವಾರಕ್ಕೆ ರೂ. 50,000 ಸಾವಿರ ನಗದನ್ನು ಪಡೆಯಲು ಅವಕಾಶ ನೀಡಲಾಗಿದೆ.
- ಪ್ರಸ್ತುತ ಇದ್ದ ರೂ. 4,500 ಹಣ ಬದಲಾವಣೆ ಮಿತಿಯನ್ನು ನಾಳೆಯಿಂದ(18-11-2007) ರೂ. 2000ಕ್ಕೆ ಕಡಿತಗೊಳಿಸಲಾಗಿದೆ.

ರೈತರು ವಾರಕ್ಕೆ ರೂ. 25,000 ವಿತ್ ಡ್ರಾ ಮಾಡಬಹುದು

English summary

Farmers can withdraw Rs. 25,000 in a Week

Economic Affairs Secretary Shaktikanta Das today said to ensure sowing in rabi season, the government has allowed farmers to withdraw Rs. 25,000 a week against crop loan/kissan credit card.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X