ಜನಧನ ಖಾತೆಗೆ 21 ಸಾವಿರ ಕೋಟಿ ಜಮಾ, 2ನೇ ಸ್ಥಾನದಲ್ಲಿ ಕರ್ನಾಟಕ!

ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರ ಪ್ರಕಟಿಸಿದ ನಂತರ ದೇಶದಾದ್ಯಂತ ಜನಧನ ಖಾತೆಗಳಲ್ಲಿ ಬರೋಬ್ಬರಿ ರೂ. 21 ಸಾವಿರ ಕೋಟಿ ಹರಿದು ಬಂದಿದೆ.

ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರ ಪ್ರಕಟಿಸಿದ ನಂತರ ದೇಶದಾದ್ಯಂತ ಜನಧನ ಖಾತೆಗಳಲ್ಲಿ ಬರೋಬ್ಬರಿ ರೂ. 21 ಸಾವಿರ ಕೋಟಿ ಹರಿದು ಬಂದಿದೆ. ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?

ಪ್ರಧಾನಿ ಮೋದಿ ರೂ. 500, 1000 ಮುಖಬೆಲೆಯ ನೋಟುಗಳಿಗೆ ನಿಷೇಧ ಮಾಡಿದ ನಂತರ ಜನಧನ ಖಾತೆಗಳನ್ನು ಕಾಳಧನಿಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಕೇಳಿ ಬಂದಿದ್ದವು.

1. 2ನೇ ಸ್ಥಾನದಲ್ಲಿ ಕರ್ನಾಟಕ

1. 2ನೇ ಸ್ಥಾನದಲ್ಲಿ ಕರ್ನಾಟಕ

ದೇಶದಲ್ಲಿಯೇ ಜನಧನ ಖಾತೆಗೆ ಅತಿ ಹೆಚ್ಚು ಹಣ ಜಮಾ ಆದ ರಾಜ್ಯಗಳ ಯಾದಿಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಜನಧನ ಖಾತೆಗಳ ದುರ್ಬಳಕೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆಯೇ ಎಂಬ ಸಂಶಯ ಜನರಲ್ಲಿ ಆಗತೊಡಗಿದೆ.

2. ಕೇಂದ್ರದ ಶಂಕೆ

2. ಕೇಂದ್ರದ ಶಂಕೆ

ಜನಧನ ಖಾತೆಗಳಲ್ಲಿ ಜಮಾ ಆಗಿರುವುದೆಲ್ಲವೂ ಕಪ್ಪುಹಣ ಅಲ್ಲದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಕಾಳಧನಿಕರು ಜನಧನ ಖಾತೆಗಳನ್ನು ದುರುಪಯೋಗ ಮಾಡಿಕೊಂಡಿರುವ ಶಂಕೆ ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ. ಹೀಗಾಗಿ ಜನಧನ ಖಾತೆಗಳನ್ನು ಪರಿಶೀಲಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿದೆ.

3. ಜನಧನ ಖಾತೆ ಠೇವಣಿ ಮಿತಿ

3. ಜನಧನ ಖಾತೆ ಠೇವಣಿ ಮಿತಿ

ಜನಧನ ಖಾತೆಯ ಠೇವಣಿ ಮಿತಿ 50,000 ಮಾತ್ರ ಆಗಿದೆ. ಆದರೆ ಕೆವಾಯ್ಸಿ(KYC) ಹೊಂದಿರುವ ಖಾತೆದಾರರು ರೂ. 1 ಲಕ್ಷ ಖಾತೆಯಲ್ಲಿ ಹೊಂದಬಹುದಾಗಿದೆ. ಆದರೆ ಕೇಂದ್ರ ಸರ್ಕಾರ ರೂ. 2.50 ಲಕ್ಷ ವರೆಗಿನ ಠೇವಣಿ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ ಎಂದು ಹೇಳಿತ್ತು. ಇದನ್ನು ಖಾತೆದಾರರು ಬೇರೆ ರೀತಿ ಗ್ರಹಿಸಿರುವ ಸಾಧ್ಯತೆ ಇದ್ದು, ಹೆಚ್ಚೆಚ್ಚು ಮೊತ್ತವನ್ನು ಜನಧನ ಖಾತೆಗಳಲ್ಲಿ ಜಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.

4. ಆರ್ಬಿಐ ಕಾನೂನು ಕ್ರಮ

4. ಆರ್ಬಿಐ ಕಾನೂನು ಕ್ರಮ

ಕಪ್ಪು ಹಣ ಹೊಂದಿರುವವರು ಜನಧನ ಖಾತೆದಾರರನ್ನು ಸಂಪರ್ಕಿಸಿ, ಆಮಿಷ ಒಡ್ಡಿ ಹಣ ಇಡುವಂತೆ ಪ್ರೋತ್ಸಾಹಿಸುವ ಸಾಧ್ಯತೆ ಇದೆ. ಒಂದು ವೇಳೆ ಜನಧನ ಖಾತೆದಾರರು ಕಾಳಧನಿಕರಿಗೆ ಅವಕಾಶ ನೀಡಿದರೆ ತೆರಿಗೆ ಕಾಯಿದೆ ಅಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈಗಾಗಲೇ ಆರ್ಬಿಐ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+