ಹಳೆ ನೋಟುಗಳ ಬಳಕೆ ಇಂದು ಕೊನೆ ದಿನ

ರೂ. 500, 1000 ಮುಖಬೆಲೆಯ ಹಳೆ ನೋಟುಗಳನ್ನು ಉಪಯೋಗಿಸಲು ನವೆಂಬರ್ 24 ಕೊನೆ ದಿನವಾಗಿದ್ದು, ನಾಳೆಯಿಂದ ಸರ್ಕಾರಿ ಕಚೇರಿಗಳಲ್ಲಿ ಹಳೆ ನೋಟುಗಳನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ.

ರೂ. 500, 1000 ಮುಖಬೆಲೆಯ ಹಳೆ ನೋಟುಗಳನ್ನು ಉಪಯೋಗಿಸಲು ನವೆಂಬರ್ 24 ಕೊನೆ ದಿನವಾಗಿದ್ದು, ನಾಳೆಯಿಂದ ಸರ್ಕಾರಿ ಕಚೇರಿಗಳಲ್ಲಿ ಹಳೆ ನೋಟುಗಳನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ.

ಸಾರ್ವಜನಿಕ ಆಸ್ಪತ್ರೆ, ಪೆಟ್ರೋಲ್‌ ಬಂಕ್, ರೈಲ್ವೆ ಟಿಕೆಟ್ ಬುಕಿಂಗ್, ಹಾಲಿನ ಕೇಂದ್ರ, ಟೊಲ್ ಗೇಟ್ ಸೇರಿದಂತೆ ಇತರೆ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಳೆ ನೋಟುಗಳನ್ನು ಪಾವತಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತು.

ಸರಕಾರದ ಆದೇಶ ಪ್ರಕಾರ ನೀರಿನ ಬಿಲ್, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಸಾರ್ವಜನಿಕ ಸೇವೆಗಳ ಬಿಲ್ ಗಳನ್ನು ಕಟ್ಟಲು ಸರ್ಕಾರಿ ಕಚೇರಿಗಳಲ್ಲಿ ಹಳೆ ನೋಟುಗಳನ್ನು ನೀಡಲು ಅವಕಾಶ ನೀಡಲಾಗಿತ್ತು. ಆದರೆ ಜನಸಾಮಾನ್ಯರ ಬೇಡಿಕೆಗಳನ್ನು ಆಧರಿಸಿ ಈ ನಿಯಮ ವಿಸ್ತರಿಸುವ ನಿರೀಕ್ಷೆ ಇದೆ.

ಬ್ಯಾಂಕುಗಳಲ್ಲಿ ಅವಕಾಶ:
ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಹಳೆ ನೋಟುಗಳ ಚಲಾವಣೆ ಕೊನೆಯಾಗಿರುವುದರಿಂದ ಜನಸಾಮಾನ್ಯರು ಕಂಗಾಲಾಗುವುದು ಸಹಜ. ಆದರೆ ಬ್ಯಾಂಕು/ಅಂಚೆ ಕಚೇರಿಗಳಲ್ಲಿ ಹಳೆಯ ನೋಟುಗಳನ್ನು ತಮ್ಮ ಖಾತೆಗಳಲ್ಲಿ ಠೇವಣಿ ಮಾಡಬಹುದಾಗಿದೆ. ಈಗಾಗಲೇ ಈ ಅವಧಿಯನ್ನು ಡಿಸೆಂಬರ್ 30 ರವರೆಗೆ ಸರ್ಕಾರ ವಿಸ್ತರಿಸಿದೆ.

ಹಳೆ ನೋಟುಗಳ ಬಳಕೆ ಇಂದು ಕೊನೆ ದಿನ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+