ರಿಸರ್ವ್ ಬ್ಯಾಂಕಿನ ಕೌಂಟರ್ ಗಳಲ್ಲಿ ನೋಟುಗಳ ವಿನಿಮಯಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.ಆರ್ಬಿಐ ಕೌಂಟರ್ ಗಳಲ್ಲಿ ಒಬ್ಬ ವ್ಯಕ್ತಿ ದಿನವೊಂದಕ್ಕೆ ರೂ. 2000 ವರೆಗೆ ನೋಟುಗಳನ್ನು ಬದಲಾವಣೆ ಮಾಡಬಹುದಾಗಿದೆ.
ಹಳೆ ರೂ. 500, 1000 ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡುವ ಪ್ರಕ್ರಿಯೆಯನ್ನು ಗುರುವಾರ ನವೆಂಬರ್ 24ರ ಮಧ್ಯರಾತ್ರಿಯಿಂದ ರದ್ದುಪಡಿಸಲಾಗಿದೆ. ಆದರೆ ರಿಸರ್ವ್ ಬ್ಯಾಂಕಿನ ಕೌಂಟರ್ ಗಳಲ್ಲಿ ನೋಟುಗಳ ವಿನಿಮಯಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ಆರ್ಬಿಐ ಕೌಂಟರ್ ಗಳಲ್ಲಿ ಒಬ್ಬ ವ್ಯಕ್ತಿ ದಿನವೊಂದಕ್ಕೆ ರೂ. 2000 ವರೆಗೆ ನೋಟುಗಳನ್ನು ಬದಲಾವಣೆ ಮಾಡಬಹುದಾಗಿದೆ.

ಜತೆಗೆ ನೋಟು ನಿಷೇಧದಿಂದಾಗಿ ಜನಸಾಮಾನ್ಯರಿಗೆ ಆಗಿರುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಹಳೆಯ ರೂ. 500 ಮುಖಬೆಲೆಯ ನೋಟುಗಳ ಬಳಕೆಯ ಕಾಲಾವಧಿಯನ್ನು ಡಿಸೆಂಬರ್ 15ರ ವರೆಗೆ ವಿಸ್ತರಿಸಿದ್ದು, ಅದಕ್ಕೆ ಕೆಲವು ಹೊಸ ಸೇವೆಗಳನ್ನೂ ಸೇರಿಸಿದೆ.
ಹಳೆ ರೂ. 500 ಬಳಕೆ ಎಲ್ಲೆಲ್ಲಿ?
ಮೆಡಿಕಲ್ ಶಾಪ್, ಸರ್ಕಾರಿ ಆಸ್ಪತ್ರೆ, ಎಲ್ಪಿಜಿ ಗ್ಯಾಸ್, ಮೆಟ್ರೋ ರೈಲ್ವೆ ಟಿಕೆಟ್, ಕೋರ್ಟು ಶುಲ್ಕ ಪಾವತಿ, ರಾಜ್ಯ ಸರ್ಕಾರದ ಮಳಿಗೆಗಳಿಂದ ಬೀಜ ಖರೀದಿ, ಕೇಂದ್ರ/ರಾಜ್ಯ ಸರ್ಕಾರದ ಹಾಲಿನ ಕೇಂದ್ರ, ರೈಲ್ವೇ ಟಿಕೆಟ್ ಬುಕ್ಕಿಂಗ್, ಶವಾಗಾರ ಶುಲ್ಕ ಸೇರಿದಂತೆ ಸರ್ಕಾರಿ ಸೇವೆಗಳಿಗೆ ಹಳೆ 500 ರೂಪಾಯಿ ನೋಟ್ ಚಲಾವಣೆಗೆ ಡಿಸೆಂಬರ್ 15ರವರೆಗೆ ಅವಕಾಶ ನೀಡುವ ಮೂಲಕ ಗ್ರಾಹಕರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.



Click it and Unblock the Notifications