ಜನಧನ ಖಾತೆದಾರರಿಗೆ ಆರ್‌ಬಿಐನಿಂದ ಮೂಗುದಾಣ

ಕಾಳಧನಿಕರು ಜನಧನ ಖಾತೆಗಳನ್ನು ದುರುಪಯೋಗ ಪಡಿಸುತ್ತಿರುವುದನ್ನು ಖಾತರಿ ಪಡಿಸುವ ಸಲುವಾಗಿ ಜನಧನ ಖಾತೆದಾರರು ತಿಂಗಳಿಗೆ ಕೇವಲ ರೂ. 10,000 ಮಾತ್ರ ವಿತ್ ಡ್ರಾ ಮಾಡಬೇಕು ಎಂದು ಆರ್ಬಿಐ ನಿರ್ಬಂಧ ಹೇರಿದೆ.

ನೋಟು ರದ್ದತಿಯಿಂದಾಗಿ ಅರ್ಥವ್ಯವಸ್ಥೆ ಮೇಲೆ ಹಲವಾರು ಪರಿಣಾಮಗಳು ಉಂಟಾಗುತಿದ್ದು, ಕೇಂದ್ರ ಸರ್ಕಾರ, ಆರ್ಬಿಐ, ತೆರಿಗೆ ಇಲಾಖೆ ಕೆಲ ರಿಯಾಯಿತಿಗಳ ಜತೆ ಜತೆಗೆ ಶಾಕ್ ಗಳನ್ನು ಸಹ ನೀಡುತ್ತಾ ಬಂದಿದೆ.

ಕಾಳಧನಿಕರು ಜನಧನ ಖಾತೆಗಳನ್ನು ದುರುಪಯೋಗ ಪಡಿಸುತ್ತಿರುವುದನ್ನು ಖಾತರಿ ಪಡಿಸುವ ಸಲುವಾಗಿ ಜನಧನ ಖಾತೆದಾರರು ತಿಂಗಳಿಗೆ ಕೇವಲ ರೂ. 10,000 ಮಾತ್ರ ವಿತ್ ಡ್ರಾ ಮಾಡಬೇಕು ಎಂದು ಆರ್ಬಿಐ ನಿರ್ಬಂಧ ಹೇರಿದೆ.

ಜನಧನ ಖಾತೆದಾರರಿಗೆ ಆರ್‌ಬಿಐನಿಂದ ಮೂಗುದಾಣ

ಕೆವಾಯ್ಸಿ(KYC) ಹೊಂದಿರುವ ಗ್ರಾಹಕರು ಜನಧನ ಖಾತೆಯಿಂದ ತಿಂಗಳಿಗೆ ರೂ. 10,000 ಹಾಗೂ ಕೆವಾಯ್ಸಿ(KYC) ಇಲ್ಲದಿರುವವರು ತಿಂಗಳಿಗೆ ರೂ. 5,000 ಮೊತ್ತ ತೆಗೆಯಬಹುದು.

ಅಲ್ಲದೆ ಜನ್ ಧನ್ ಖಾತೆಯಲ್ಲಿ ರೂ. 50 ಸಾವಿರಕ್ಕಿಂತ ಹೆಚ್ಚು ಹಣ ಇದ್ದರೆ ಅವರ ಖಾತೆಯಲ್ಲಿರುವ ನಗದಿನ ಪೂರ್ಣ ಮಾಹಿತಿ ನೀಡಬೇಕು. ಇಲ್ಲದಿದ್ದರೆ ತನಿಖೆ ಮಾಡಲಾಗುವುದು ಎಂದು ಆರ್ಬಿಐ ತಿಳಿಸಿದೆ.

ಒಟ್ಟು 25.68 ಕೋಟಿ ಜನಧನ ಖಾತಾ ಠೇವಣಿಗಳಿದ್ದು, ನವೆಂಬರ್ 23ರ ವರೆಗೆ ರೂ. 72,834.72 ಕೋಟಿ ಮೊತ್ತ ಮೀರಿದೆ. ನವೆಂಬರ್ 9ರ ಅಂಕಿಅಂಶದ ಪ್ರಕಾರ ಜನಧನ ಖಾತೆಗಳಲ್ಲಿ ಒಟ್ಟು ರೂ. 45,636.61 ಕೋಟಿ ಇತ್ತು. ಆದರೆ ಹಳೆ ನೋಟುಗಳ ನಿಷೇಧದ ನಂತರ ಒಟ್ಟು ರೂ. 27,198 ಕೋಟಿ ಮೊತ್ತ ಹೆಚ್ಚಳವಾಗಿದೆ.

ಜನಧನ ಖಾತೆದಾರರಿಗೆ ಆರ್‌ಬಿಐನಿಂದ ಮೂಗುದಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+