ರೂ. 20, 50 ಮುಖಬೆಲೆಯ ಹೊಸ ನೋಟು ಬಿಡುಗಡೆ: ಆರ್‌ಬಿಐ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಶೀಘ್ರದಲ್ಲಿಯೇ ರೂ. 20 ಮತ್ತು 50 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆಗೊಳಿಸಲಿದ್ದು, 500, 1000 ನೋಟುಗಳ ರದ್ದತಿ ನಂತರ ಎದುರಾಗಿರುವ ನಗದು ಸಮಸ್ಯೆ ನಿವಾರಣೆಗೆ ಮುಂದಾಗಿದೆ ಎಂದು ಭಾನುವಾರ ಹೇಳಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಶೀಘ್ರದಲ್ಲಿಯೇ ರೂ. 20 ಮತ್ತು 50 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆಗೊಳಿಸಲಿದ್ದು, 500, 1000 ನೋಟುಗಳ ರದ್ದತಿ ನಂತರ ಎದುರಾಗಿರುವ ನಗದು ಸಮಸ್ಯೆ ನಿವಾರಣೆಗೆ ಮುಂದಾಗಿದೆ ಎಂದು ಭಾನುವಾರ ಹೇಳಿದೆ.

ಈಗಾಗಲೇ ಇರುವಂತಹ ಹಳೆ ರೂ. 20, 50 ಮುಖಬೆಲೆಯ ನೋಟುಗಳು ಚಾಲನೆಯಲ್ಲಿ ಇರಲಿವೆ. ಅದರಲ್ಲಿ ಯಾವುದೇ ಬದಲಾವಣೆ ಅಥವಾ ತೊಂದರೆಗಳಿಲ್ಲ.

ರೂ. 20, 50 ಹೊಸ ನೋಟುಗಳನ್ನು ಆರ್ಬಿಐ ಮುದ್ರಿಸಲಿದ್ದು, ಇದರಲ್ಲಿ ಮಹಾತ್ಮ ಗಾಂಧಿ ಸೀರೀಸ್ 2005, ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿದ್ದು ಮುದ್ರಣ ಇಸವಿ 2016 ಎಂದಿರುತ್ತದೆ ಎಂದು ತಿಳಿಸಿದೆ. ಕೇಂದ್ರ ಸರ್ಕಾರ ಕಪ್ಪುಹಣ ತಡೆಯಲು ಹಳೆ ರೂ. 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದೆ. ಇದಕ್ಕೆ ಪೂರಕವಾಗಿಯೇ ಈಗ ರೂ. 20, 50 ಹೊಸ ಕರೆನ್ಸಿಗಳನ್ನು ಮುದ್ರಣ ಮಾಡಲಾಗುತ್ತಿದೆ.

ಹೊಸ ನೋಟುಗಳ ವಿನ್ಯಾಸ ಮತ್ತು ಭದ್ರತೆ ವೈಶಿಷ್ಟ್ಯಗಳು ಮಹಾತ್ಮ ಗಾಂಧಿ ಸರಣಿ-2005ರ ಹಳೆ ನೋಟುಗಳಂತೆ ಇರಲಿದೆ ಎಂದು ಆರ್ಬಿಐ ತಿಳಿಸಿದೆ.

ರೂ. 20, 50 ಮುಖಬೆಲೆಯ ಹೊಸ ನೋಟು ಬಿಡುಗಡೆ: ಆರ್‌ಬಿಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+