For Quick Alerts
ALLOW NOTIFICATIONS  
For Daily Alerts

ಅತಿಹೆಚ್ಚು ಬಂಗಾರ ಹೊಂದಿರುವ ಜಗತ್ತಿನ 10 ದೇಶಗಳು

ವರ್ಲ್ಡ್ ಗೋಲ್ಡ್ ಕೌನ್ಸಿಲ್(WGC) ಪ್ರಕಾರ 2015-16ನೇ ಸಾಲಿನಲ್ಲಿ ಅತಿಹೆಚ್ಚು ಚಿನ್ನ ಸಂಗ್ರಹ, ವಹಿವಾಟು, ಖರೀದಿ ಮಾಡಿದ ದೇಶಗಳ ಅಂಕಿ-ಅಂಶಗಳನ್ನು ದಾಖಲಿಸಿದೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದರೆ ಹತ್ತನೆ ಸ್ಥಾನದಲ್ಲಿ ಭಾರತ ಇದೆ.

By Siddu
|

ಬಂಗಾರ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಪ್ರತಿಯೊಬ್ಬರೂ ಇಷ್ಟಪಡುವ ವಸ್ತುಗಳಲ್ಲಿ ಚಿನ್ನ ಮೇಲ್ಪಂಕ್ತಿಯಲ್ಲಿ ನಿಲ್ಲುವುದರಲ್ಲಿ ಸಂಶಯವಿಲ್ಲ. ಹೆಚ್ಚಿನ ಜನರು ಚಿನ್ನಾಭರಣಗಳ ಬಗ್ಗೆ ಅತಿಹೆಚ್ಚು ವ್ಯಾಮೋಹ ಹೊಂದಿರುವುದನ್ನು ಕಾಣುತ್ತೇವೆ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ವರ್ಲ್ಡ್ ಗೋಲ್ಡ್ ಕೌನ್ಸಿಲ್(WGC) ಪ್ರಕಾರ 2015-16ನೇ ಸಾಲಿನಲ್ಲಿ ಅತಿಹೆಚ್ಚು ಚಿನ್ನ ಸಂಗ್ರಹ, ವಹಿವಾಟು, ಖರೀದಿ ಮಾಡಿದ ದೇಶಗಳ ಅಂಕಿ-ಅಂಶಗಳನ್ನು ದಾಖಲಿಸಿದೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದರೆ ಹತ್ತನೆ ಸ್ಥಾನದಲ್ಲಿ ಭಾರತ ಇದೆ.

ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಸಂಪತ್ತು ಹೊಂದಿರುವ ಟಾಪ್ 10 ದೇಶಗಳ ಕುತೂಹಲಕಾರಿ ವಿವರ ಇಲ್ಲಿದೆ ನೋಡಿ..

10. ಭಾರತ

10. ಭಾರತ

ಟನ್: 557.7
ಶೇ. ವಿದೇಶಿ ಮೀಸಲು: 6.3%
ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಹೊಂದಿರುವ ದೊಡ್ಡ ಮಳಿಗೆಗಳಲ್ಲಿ ಬ್ಯಾಂಕ್ ಆಫ್ ಇಂಡಿಯ ಕೂಡ ಒಂದು ಎನ್ನುವುದು ಅಚ್ಚರಿಯೇನಲ್ಲ. 125 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಚಿನ್ನದ ಬೇಡಿಕೆ ತುಂಬಾ ಇದೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಅಕ್ಟೋಬರ್ ಮತ್ತು ಡಿಸೆಂಬರ್ ಅವಧಿಯ ಹಬ್ಬ ಮತ್ತು ಮದುವೆ ಸಮಾರಂಭಗಳ ಸೀಸನ್ ನಲ್ಲಿ ಚಿನ್ನಾಭರಣಗಳಿಗೆ ಐತಿಹಾಸಿಕ ಬೇಡಿಕೆ ಇದ್ದು, ದೊಡ್ಡ ಮಟ್ಟದ ವ್ಯಾಪಾರ ನಡೆಯುತ್ತದೆ.
ಬಾರತ ಜಗತ್ತನ್ನು ಆಳಬಲ್ಲ ವಿಶ್ವದ ಮೂರನೇ ದೇಶ ಹಾಗೂ ಏಷಿಯಾದ 2ನೇ ದೇಶ ಹಾಗೂ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ.

9. ನೆದರ್ಲ್ಯಾಂಡ್ಸ್

9. ನೆದರ್ಲ್ಯಾಂಡ್ಸ್

ಟನ್: 612.5
ಶೇ. ವಿದೇಶಿ ಮೀಸಲು: 61.2%
ಪ್ರಸ್ತುತ ತನ್ನ ಚಿನ್ನವನ್ನು ಸಂಗ್ರಹಿಸಿಡಲು ಡಚ್ ಸೆಂಟ್ರಲ್ ಬ್ಯಾಂಕ್ ಸೂಕ್ತ ಸ್ಥಳವನ್ನು ಕೋರಿದೆ. ಅತಿಹೆಚ್ಚು ಚಿನ್ನ ಕೂಡಿಟ್ಟಿರುವ ದೇಶಗಳ ಪೈಕಿ ನೆದರ್ಲ್ಯಾಂಡ್ಸ್ ಜಾಗತಿಕವಾಗಿ 9ನೇ ಸ್ಥಾನದಲ್ಲಿದೆ.

8. ಜಪಾನ್
 

8. ಜಪಾನ್

ಟನ್: 765.2
ಶೇ. ವಿದೇಶಿ ಮೀಸಲು: 2.4%
ಜಪಾನ್ ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕತೆ ಹಾಗೂ ಹಳದಿ ಲೋಹ ಹೊಂದಿರುವ 8ನೇ ಅತಿದೊಡ್ಡ ದೇಶ. ಜಪಾನಿನ ಸೆಂಟ್ರಲ್ ಬ್ಯಾಂಕ್ ಚಿನ್ನದ ಮಳಿಗೆಯಾಗಿದ್ದು, ವಿಶ್ವದಾದ್ಯಂತ ಚಿನ್ನದ ಬೇಡಿಕೆಯನ್ನು ಹೊಂದಿದೆ.

7. ಸ್ವಿಟ್ಜರ್ಲ್ಯಾಂಡ್

7. ಸ್ವಿಟ್ಜರ್ಲ್ಯಾಂಡ್

ಟನ್: 1040
ಶೇ. ವಿದೇಶಿ ಮೀಸಲು: 6.7%
ಸ್ವಿಟ್ಜರ್ಲ್ಯಾಂಡ್ ತಲಾ ಚಿನ್ನದ ನಿಕ್ಷೇಪವನ್ನು ಹೊಂದಿರುವ ವಿಶ್ವದ ಏಳನೇ ದೇಶ. ಎರಡನೇ ವಿಶ್ವ ಯುದ್ದದ ಸಮಯದಲ್ಲಿ ಯೂರೋಪಿನಲ್ಲಿ ಚಿನ್ನದ ವ್ಯಾಪಾರ ವಹಿವಾಟು ಮಾಡುವ ದೇಶವಾಯಿತು. ಹಾಂಗ್ ಕಾಂಗ್ ಮತ್ತು ಚೀನಾ ದೇಶಗಳ ನಡುವೆ ಹೆಚ್ಚು ಚಿನ್ನದ ವ್ಯಾಪಾರ ಹೊಂದಿದೆ.

6. ರಷ್ಯಾ

6. ರಷ್ಯಾ

ಟನ್: 1460.4
ಶೇ. ವಿದೇಶಿ ಮೀಸಲು: 15%
ರಷ್ಯಾ ಕಳೆದ ಹಲವಾರು ವರ್ಷಗಳಿಂದ ಚಿನ್ನ ಸಂಪತ್ತು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. 2015ರಲ್ಲಿ ಇದು ಉನ್ನತ ಖರೀದಿದಾರ ದೇಶವಾಗಿದ್ದು, ಚಿನ್ನದ ವಹಿವಾಟಿನಲ್ಲಿ ತನ್ನದೇ ಛಾಪನ್ನು ಹೊಂದಿದೆ.

5. ಚೀನಾ

5. ಚೀನಾ

ಟನ್: 1797.5
ಶೇ. ವಿದೇಶಿ ಮೀಸಲು: 2.2%
2009ರಿಂದ ಮಾಸಿಕ ಬೇಸಿಸ್ ನಲ್ಲಿ ಚೀನಾ ಪೀಪಲ್ಸ್ ಬ್ಯಾಂಕ್ ಚಿನ್ನ ಖರೀದಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಶೇಕಡಾ ವಿದೇಶಿ ಮೀಸಲು ಕೇವಲ 2.2ರಷ್ಟಿದ್ದು, ಮುಂದಿನ ದಿನಗಳಲ್ಲಿ ಮೀಸಲು ಪ್ರಮಾಣ ಹೆಚ್ಚಿಸುವ ನಿರೀಕ್ಷೆ ಇದೆ.

4. ಫ್ರಾನ್ಸ್

4. ಫ್ರಾನ್ಸ್

ಟನ್: 2435.7
ಶೇ. ವಿದೇಶಿ ಮೀಸಲು: 62.9%
ಫ್ರಾನ್ಸಿನ ಸೆಂಟ್ರಲ್ ಬ್ಯಾಂಕ್ ಕಳೆದ ಹಲವು ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ತನ್ನ ಚಿನ್ನವನ್ನು ಮಾರಾಟ ಮಾಡಿದೆ. ಮುಂದಿನ ದಿನಗಳಲ್ಲಿ ಮಾರಾಟ ತಗ್ಗಿಸಿ ಮೀಸಲು ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ.

3. ಇಟಲಿ

3. ಇಟಲಿ

ಟನ್: 2451.8
ಶೇ. ವಿದೇಶಿ ಮೀಸಲು: 68%
ಇಟಲಿ ಕಳೆದ ಕೆಲ ವರ್ಷಗಳಿಂದ ತನ್ನ ಮೀಸಲು ಗಾತ್ರ ಕಾಪಾಡಿಕೊಂಡಿದೆ. ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಮಾರಿಯೋ ದ್ರಾಘಿ ಅವರಿಂದ ಬೆಂಬಲ ಹೊಂದಿದೆ.

2. ಜರ್ಮನಿ

2. ಜರ್ಮನಿ

ಟನ್: 3381
ಶೇ. ವಿದೇಶಿ ಮೀಸಲು: 68.9%
ಜರ್ಮನಿ ವಿದೇಶಿ ಸಂಗ್ರಹಣಾ ಕೇಂದ್ರಗಳಿಂದ ಹಾಗೂ ನ್ಯೂಯಾರ್ಕ್ ಮತ್ತು ಪ್ಯಾರಿಸ್ ಸೇರಿದಂತೆ ತನ್ನ ಬಂಗಾರವನ್ನು ಸ್ವದೇಶಕ್ಕೆ ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದೆ.

1. ಅಮೆರಿಕ

1. ಅಮೆರಿಕ

ಟನ್: 8133.5
ಶೇ. ವಿದೇಶಿ ಮೀಸಲು: 74.9%
ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೆರಿಕ ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯವಾಗಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಜಗತ್ತಿನ ಅತಿದೊಡ್ಡ ಆರ್ಥಿಕತೆ ಹಾಗೂ ಅತಿಹೆಚ್ಚು ಬಂಗಾರ ಸಂಗ್ರಾಹ ಹೊಂದಿರುವ ದೇಶ.
8133.5 ಟನ್ ನೊಂದಿಗೆ ಶೇಕಡಾ ವಿದೇಶಿ ಮೀಸಲು 74.9ರಷ್ಟು ಹೊಂದಿದೆ.

Read more about: gold india bank
English summary

Top 10 Countries with Largest Gold Reserves

Beginning in 2010, central banks around the world turned from being net sellers of gold to net buyers of gold. The second half of 2015 saw the most robust purchasing on record, according to the World Gold Council (WGC).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X