ಚಿನ್ನಾಭರಣಗಳು ಖರೀದಿಸುವಾಗ ಯಾವ ಕಂಪನಿಯ ಅಥವಾ ಯಾವ ಬ್ರಾಂಡ್ ನ ಚಿನ್ನ ಖರೀದಿಸಬೇಕು? ಯಾವುದು ವಿಶ್ವಾಸಾರ್ಹ? ಉತ್ತಮ ಗುಣಮಟ್ಟ ಹೊಂದಿರುವ ಬ್ರಾಂಡ್ ಯಾವುದು? ಇತ್ಯಾದಿ ಪ್ರಶ್ನೆಗಳು ಕಾಡಬಹುದು.
ಬಂಗಾರವೆಂದರೆ ಭಾರತೀಯರಿಗೆ ಅಚ್ಚು-ಮೆಚ್ಚು ಹಾಗೂ ಎಲ್ಲಿಲ್ಲದ ವ್ಯಾಮೋಹ. ಚಿನ್ನಾಭರಣಗಳ ಬೆಲೆ ಎಷ್ಟೇ ಏರಿಕೆ ಕಂಡರೂ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಹೆಚ್ಚೆಚ್ಚು ಚಿನ್ನಾಭರಣಗಳನ್ನು ಖರೀದಿಸುವುದು ಹಾಗೂ ಧರಿಸುವುದು ಕೆಲವರಿಗೆ ಹೆಮ್ಮೆ ಹಾಗೂ ಪ್ರತಿಷ್ಠೆಯ ವಿಷಯ. ಹಬ್ಬ ಮತ್ತು ಮದುವೆ ಸೀಸನ್ ಗಳಲ್ಲಿ ಆಭರಣ ಮಳಿಗೆಗಳು ಗ್ರಾಕರಿಂದ ತುಂಬಿ ತುಳುಕುತ್ತಿರುತ್ತವೆ. ಬ್ಯಾಂಕುಗಳಲ್ಲಿ ಚಿನ್ನ ಉಳಿತಾಯ ಖಾತೆ ತೆರೆಯುವುದು ಹೇಗೆ?
ಚಿನ್ನಾಭರಣಗಳು ಖರೀದಿಸುವಾಗ ಯಾವ ಕಂಪನಿಯ ಅಥವಾ ಯಾವ ಬ್ರ್ಯಾಂಡ್ ನ ಚಿನ್ನ ಖರೀದಿಸಬೇಕು? ಯಾವುದು ವಿಶ್ವಾಸಾರ್ಹ? ಉತ್ತಮ ಗುಣಮಟ್ಟ ಹೊಂದಿರುವ ಬ್ರ್ಯಾಂಡ್ ಯಾವುದು? ಇತ್ಯಾದಿ ಪ್ರಶ್ನೆಗಳು ಕಾಡಬಹುದು.
2016-17ರಲ್ಲಿ ಭಾರತದಲ್ಲಿರುವ ಟಾಪ್ 10 ಆಭರಣ ಬ್ರ್ಯಾಂಡ್ ಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಇರುತ್ತದೆ. ಅದರ ಮಾಹಿತಿ ಇಲ್ಲಿದೆ ನೋಡಿ...
1. Tanishq
ಭಾರತದಲ್ಲಿನ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ತಾನಿಷ್ಕ್. 1994ರಲ್ಲಿ ಟಾಟಾ ಗ್ರೂಪ್ ತಾನಿಷ್ಕ್ ಸಂಸ್ಥೆಯನ್ನು ಪ್ರಾರಂಭಿಸಿತು. ದೇಶದಾದ್ಯಂತ ಚಿನ್ನ ಮತ್ತು ವಜ್ರ ಆಭರಣಗಳನ್ನು ತುಂಬಾ ವಿಶ್ವಾಸಾರ್ಹವಾಗಿ ಪೂರೈಸುತ್ತಿದೆ. ತಮಿಳುನಾಡಿನಲ್ಲಿ ಪ್ಯಾಕ್ಟರಿ ಇದ್ದು, ದೇಶದಾದ್ಯಂತ 150ಕ್ಕೂ ಹೆಚ್ಚಿನ ಮಳಿಗೆಗಳನ್ನು ಹೊಂದಿದೆ. ಚಿನ್ನ ಮತ್ತು ವಜ್ರ ಆಭರಣಗಳು ISO 9001:2008 ಪ್ರಮಾಣಿಕೃತಗೊಂಡಿವೆ.
Website: www.tanishq.co.in
2. P C Jeweller
ದೆಹಲಿಯಲ್ಲಿ 2005ರಲ್ಲಿ ಪಿ ಸಿ ಜಿವೆಲ್ಲರ್ ತನ್ನ ಪಯಣವನ್ನು ಆರಂಭಿಸಿತು. ಇತ್ತಿಚಿನ ಆಕರ್ಷಕ ವಿನ್ಯಾಸಗಳೊಂದಿಗೆ ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ ಕೈಗೆಟಕುವ ಚಿನ್ನಾಭರಣಗಳನ್ನು ಒದಗಿಸುತ್ತಿದೆ. ದೇಶದ ಪ್ರಸಿದ್ದ ಬ್ರ್ಯಾಂಡ್ ಗಳಲ್ಲಿ ಒಂದಾಗಿದ್ದು, ಇದು 17ಕ್ಕಿಂತ ಹೆಚ್ಚಿನ ರಾಜ್ಯಗಳ 47 ನಗರಗಳಲ್ಲಿ 56 ಶೋರೂಂಗಳನ್ನು ಹೊಂದಿದೆ.
Portal : wearyourshine.com
Website: http://www.pcjeweller.com/
3. Bhima Jewellers
1925ರಲ್ಲಿ ಪ್ರಾರಂಭವಾದ ಭೀಮ ಜಿವೆಲ್ಲರ್ಸ್ ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್. ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ 30ಕ್ಕಿಂತ ಹೆಚ್ಚಿನ ಮಳಿಗೆಗಳನ್ನು ಹೊಂದಿದೆ.
ಇದು ದುಬೈ ಮತ್ತು ಶಾರ್ಜಾದಲ್ಲೂ ಶೋರೂಂ ಹೊಂದಿದೆ. ಚಿನ್ನ, ವಜ್ರ, ಪ್ಲಾಟಿನಂ, ಸಿಲ್ವರ್ ಮತ್ತು ಜೆಮ್ ಸ್ಟೋನ್ಸ್ ಆಭರಣಗಳ ಸೇವೆ ಒದಗಿಸುತ್ತದೆ.
Website: http://bhimajewellers.com/
4. P C Chandra
ಪಿ ಸಿ ಚಂದ್ರ ಸಂಸ್ಥೆ ಚಿನ್ನಾಭರಣಗಳ ಮಾರುಕಟ್ಟೆಯಲ್ಲಿ ಭರ್ತಿ 75 ವರ್ಷಗಳ ಅನುಭವ ಹೊಂದಿದ್ದು, ಭಾರತದಲ್ಲಿನ ಹೆಸರಾಂತ ಬ್ರ್ಯಾಂಡ್. ದೇಶದಾದ್ಯಂತ 30ಕ್ಕಿಂತ ಹೆಚ್ಚಿನ ಮಳಿಗೆಗಳನ್ನು ಹೊಂದಿದೆ. ಮದುವೆ ಆಭರಣ ಸಂಗ್ರಹ ಮತ್ತು ಜ್ಯೋತಿಷ್ಯ ಜೆಮ್ ಸ್ಟೋನ್ಸ್ ಗಳಿಗೆ ಇವರು ಪ್ರಸಿದ್ದಿ ಪಡೆದಿದ್ದಾರೆ.
Website: http://www.pcchandraindia.com/
5. Malabar
ಮಲಬಾರ್ ಗೋಲ್ಡ್ ದೇಶದ ಯಶಸ್ವಿ ಬ್ರ್ಯಾಂಡ್ ಆಗಿದ್ದು, ವಾರ್ಷಿಕ ರೂ. 12,000 ಕೋಟಿ ವಹಿವಾಟನ್ನು ಹೊಂದಿದೆ. 1993ರಲ್ಲಿ ಕ್ಯಾಲಿಕಟ್ ನಲ್ಲಿ ಪ್ರಾರಂಭವಾದ ಮಲಬಾರ್ 100% BIS ಹಾಲ್ ಮಾರ್ಕ್ ನೊಂದಿಗೆ ಚಿನ್ನಾಭರಣ ಖರೀದಿದಾರರಲ್ಲಿ ವಿಶ್ವಾಸ ಮೂಡಿಸಿದೆ.
ಭಾರತದಲ್ಲಿ 52 ಮಳಿಗೆ ಮತ್ತು ವಿದೇಶದಲ್ಲಿ 30 ಮಳಿಗೆಗಳನ್ನು ಹೊಂದಿದೆ.
Website: www.malabargoldanddiamonds.com
6. TBZ
TBZ ಸಂಸ್ಥೆಯನ್ನು 1864ರಲ್ಲಿ ಮುಂಬೈನಲ್ಲಿ ಪ್ರಾರಂಭಿಸಲಾಯಿತು. ದೇಶದ ಪ್ರಮುಖ ಚಿನ್ನಾಭರಣ ತಯಾರಕ ಆಗಿದ್ದು, ವಾರ್ಷಿಕ ರೂ. 1385 ಕೋಟಿ ವಹಿವಾಟು ಹೊಂದಿದೆ. ದೇಶದಾದ್ಯಂತ 23ಕ್ಕಿಂತಲೂ ಹೆಚ್ಚಿನ ಮಳಿಗೆಗಳನ್ನು ಹೊಂದಿದ್ದು, ಇದು ಅತೀ ಪ್ರಾಚೀನ ಚಿನ್ನಾಭರಣ ಕಂಪನಿ.
Website: www.tbztheoriginal.com
7. Kalyan Jewellers
ಕಲ್ಯಾಣ ಜುವೆಲ್ಲರ್ 1993ರಲ್ಲಿ ಪಯಣವನ್ನು ಆರಂಭಿಸಿತು. ಕೇವಲ ಶೇ. 100 ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳ ಮಾರಾಟದಿಂದ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಿದೆ. "My Kalyan Mini Stores" ಎಂಬ ಮಿನಿ ಸ್ಟೋರ್ ಗಳನ್ನು ತೆರೆದಿದೆ. ದೇಶದ ಹತ್ತು ರಾಜ್ಯಗಳಲ್ಲಿ ಮಳಿಗೆಗಳನ್ನು ಹೊಂದಿದ್ದು, ಕುವೈತ್ ನಲ್ಲಿ 1, ಯುಎಇ ನಲ್ಲಿ 3 ಮಳಿಗೆ ಹೊಂದಿದೆ.
Website: http://kalyanjewellers.net/
8. Josco Jewellers
ಕೇರಳ ಮೂಲದ ಜೋಸ್ಕೊ ಜುವೆಲ್ಲರ್ಸ್ ಚಿನ್ನ, ಬೆಳ್ಳಿ, ಡೈಮಂಡ್ ಮತ್ತು ಪ್ಲಾಟಿನಂ ಜಿವೆಲ್ಲರಿ ಶ್ರೇಷ್ಠತೆಗೆ ಹೆಸರುವಾಸಿಯಾಗಿದೆ. ಇದರ ಎಲ್ಲ ಉತ್ಪನ್ನಗಳು BIS hallmark ಹೊಂದಿವೆ. ಉತ್ತಮ ವಿನ್ಯಾಸ ಮತ್ತು ಶ್ರೇಷ್ಠ ಗುಣಮಟ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಲವು ಪ್ರಶಸ್ತಿಗಳನ್ನು ಪಡೆದಿದೆ. ದಕ್ಷಿಣ ಭಾರತದಲ್ಲಿ ಪ್ರಬಲ ಅಸ್ತಿತ್ವ ಹೊಂದಿದ್ದು, ದಕ್ಷಿಣ ಭಾರತದಲ್ಲಿ 18 ಮಳಿಗೆಗಳನ್ನು ಹೊಂದಿದೆ.
Website: http://www.joscogroup.com/
9. Diya Diamond Jewelry
ದಿಯಾ ಡೈಮಂಡ್ ಜುವೆಲ್ಲರಿ ಗೀತಾಂಜಲಿ ಜೆಮ್ಸ್ ಲಿಮಿಟೆಡ್ ನ ಬ್ರ್ಯಾಂಡ್ ಆಗಿದೆ. ಇದು ತನ್ನ ವಿಶೇಷ ವಿನ್ಯಾಸದೊಂದಿಗೆ ಹೊಸ ಟ್ರೆಂಡ್ ಹುಟ್ಟುಹಾಕುವ ಕಂಪನಿ. ವಿಭಿನ್ನ ವಿನ್ಯಾಸದ ಉಂಗುರ, ಕಿವಿಯೊಲೆ, ಕಡಗ, ಬಳೆಗಳು ಆಕರ್ಷಕವಾಗಿರುತ್ತವೆ.
10. Parineeta Diamond Jewelry
ಪರಿಣಿತ ಡೈಮಂಡ್ ಜುವೆಲ್ಲರಿ ಭಾರತದ ಪ್ರಸಿದ್ದ ಬ್ರ್ಯಾಂಡ್ ಗಳಲ್ಲಿ ಒಂದು. ಮದುವೆ ಸಮಾರಂಭಗಳು ಬಂದಾಗ ಪ್ರತಿ ಭಾರತೀಯ ವಧು ಬಯಸುವ ಅಗತ್ಯವಾದ ಚಿನ್ನಾಶಭರಣಗಳು ಇಲ್ಲಿ ಲಭ್ಯ.
ವಜ್ರ ಆಭರಣಗಳು ತುಂಬಾ ಸುಂದರವಾಗಿ ಮತ್ತು ಸಾಂಪ್ರದಾಯಿಕವಾಗಿ ಇರುತ್ತವೆ. ಇದು BIS ಹಾಲ್ ಮಾರ್ಕ್ ಹೊಂದಿದ್ದು, ವಧುವರರ ನೆಚ್ಚಿನ ಬ್ರ್ಯಾಂಡ್ ಎಂದೇ ಪ್ರಸಿದ್ದಿ ಪಡೆದಿದೆ.


Click it and Unblock the Notifications