ನೋಟು ರದ್ದತಿ ನಂತರ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಲ ಮರುಪಾವತಿ ಮಾಡಲು ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.
ನೋಟು ರದ್ದತಿ ನಂತರ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಲ ಮರುಪಾವತಿ ಮಾಡಲು ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.
ರೂ. 500, 1000 ನೋಟುಗಳ ನಿಷೇಧದ ಪರಿಣಾಮ ನವೆಂಬರ್ 1ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಸಾಲ ಪಾವತಿ ಮಾಡಬೇಕಾಗಿರುವವರಿಗೆ ಮಾತ್ರ 90 ದಿನಗಳ ಹೆಚ್ಚುವರಿ ಕಾಲಾವಕಾಶ ಅನ್ವಯವಾಗಲಿದೆ ಎಂದು ಆರ್ಬಿಐ ಆದೇಶ ಹೊರಡಿಸಿದೆ.

ನವೆಂಬರ್ 1 ರಿಂದ ಡಿಸೆಂಬರ್ 31ರ ಕಾಲಾವಧಿಯೊಳಗೆ ಪಾವತಿಸಬೇಕಾಗಿದ್ದ 1 ಕೋಟಿ ರೂ. ಅಥವಾ ಅದಕ್ಕಿಂತ ಕಡಿಮೆ ಸಾಲಗಳಿಗೆ ಈ ಕಾಲಾವಧಿ ಅನ್ವಯವಾಗಲಿದೆ. ಒಂದು ಕೋಟಿ ರೂ ಗಿಂತ ಕಡಿಮೆ ಇರುವ ವ್ಯಾಪಾರ ಅಥವಾ ವೈಯಕ್ತಿಕ ವಿಭಾಗದ ದೀರ್ಘಾವಧಿಯ ಸಾಲ, ಬ್ಯಾಂಕೇತರ ಹಣಕಾಸು ಕಂಪನಿ (ಮೈಕ್ರೋ ಫೈನಾನ್ಸ್ ಸಂಸ್ಥೆ)ಗಳ ಸಾಲದ ಕಂತುಗಳಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
ಪ್ರಸ್ತುತ ಎಟಿಎಂಗಳಲ್ಲಿ ದಿನವೊಂದಕ್ಕೆ ಗರಿಷ್ಠ ರೂ. 2,500 ಮತ್ತು ಒಂದು ವಾರಕ್ಕೆ ರೂ. 24,000 ವಿತ್ ಡ್ರಾ ಮಾಡಿಕೊಳ್ಳುವ ಅವಕಾಶವಿದೆ. ಚೆಕ್, ಡಿಡಿ, ಮೊಬೈಲ್, ಇ-ವಾಲೆಟ್, ಇಂಟರ್ನೆಟ್ ಮೂಲಕ ನಡೆಸುವ ನಗದು ರಹಿತ ಬ್ಯಾಂಕಿಂಗ್ ಮೇಲೆ ಯಾವುದೇ ನಿರ್ಬಂಧಗಳಿಲ್ಲ.



Click it and Unblock the Notifications