ಹೊಸ ವರ್ಷದ ಪ್ರಾರಂಭದಲ್ಲಿ ದೇಶದ ಹಲವು ಬ್ಯಾಂಕುಗಳು ಬಡ್ಡಿದರವನ್ನು ಕಡಿತಗೊಳಿಸಿದ್ದು, ಆರ್ಥಿಕ ಉತ್ತೇಜನಕ್ಕೆ ವೇಗ ಸಿಕ್ಕಿದಂತಾಗಿದೆ.
ಹೊಸ ವರ್ಷದ ಪ್ರಾರಂಭದಲ್ಲಿ ದೇಶದ ಹಲವು ಬ್ಯಾಂಕುಗಳು ಬಡ್ಡಿದರವನ್ನು ಕಡಿತಗೊಳಿಸಿದ್ದು, ಆರ್ಥಿಕ ಉತ್ತೇಜನಕ್ಕೆ ವೇಗ ಸಿಕ್ಕಿದಂತಾಗಿದೆ.
ನೋಟು ರದ್ದತಿ ನಂತರ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಪ್ರಧಾನಿ ಮೋದಿ ಹಲವು ಸುಧಾರಣಾ ಕ್ರಮಗಳನ್ನು ಘೋಷಿಸಿದ್ದ ಬೆನ್ನಲ್ಲೇ ಬ್ಯಾಂಕುಗಳು ಬಡ್ಡಿದರ ಕಡಿತಗೊಳಿಸಿರುವುದು ಆರ್ಥಿಕತೆಗೆ ಶಕ್ತಿ ನೀಡಿದೆ.
ಎಸ್ ಬಿಐ ತನ್ನ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ.0.90ರಷ್ಟು ಕಡಿತಗೊಳಿಸಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಕ್ರಮವಾಗಿ ಶೇ. 0.70 ಮತ್ತು ಶೇ. 0.90ರಷ್ಟು ಬಡ್ಡಿ ದರ ಕಡಿತಗೊಳಿಸಿವೆ. ಪ್ರಮುಖವಾಗಿ ಐಸಿಐಸಿಐ, ಓರಿಯಂಟಲ್, ಆಂಧ್ರ ಬ್ಯಾಂಕ್ ಗಳು ಬಡ್ಡಿದರವನ್ನು ಕಡಿತಗೊಳಿಸಿವೆ.
ಪ್ರಮುಖ ಬ್ಯಾಂಕುಗಳ ಬಡ್ಡಿದರ ಇಳಿಕೆಯಿಂದಾಗಿ ಬಡವರಿಗೆ, ಕೆಳ ಮತ್ತು ಮಧ್ಯಮವರ್ಗದವರಿಗೆ ತುಂಬಾ ಸಹಾಯವಾಗಲಿದ್ದು, ಸಾಲ ಪಡೆಯುವಿಕೆ ಪ್ರಕ್ರಿಯೆ ಕೂಡ ಸರಳವಾಗಲಿದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕುಗಳ ಬಡ್ಡಿದರ ಇಳಿಕೆಯಿಂದಾಗಿ ಗೃಹಸಾಲ, ವಾಣಿಜ್ಯ, ವಾಹನ ಕಾರ್ಪೋರೇಟ್ ಸಾಲಗಳು ಮತ್ತಷ್ಟು ಅಗ್ಗವಾಗಲಿವೆ.
ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರ ಕಡಿತಗೊಳಿಸಿರುವುದರಿಂದ ಆರ್ಥಿಕತೆಗೆ ವೇಗ ಮತ್ತು ಉತ್ತೇಜನ ಸಿಗಲಿದೆ ಎಂದು ಇಂಡಿಯ ಇಂಕ್ ವರದಿ ಮಾಡಿದೆ.



Click it and Unblock the Notifications