ಎಟಿಎಂ ಹಣ ವಿತ್ ಡ್ರಾ ಮಿತಿ 10 ಸಾವಿರಕ್ಕೆ ಏರಿಕೆ

ಪ್ರತಿ ದಿನ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ರೂ. 4,500 ರಿಂದ ರೂ.10 ಸಾವಿರಕ್ಕೆ ಏರಿಕೆ ಮಾಡಿದೆ.

ಪ್ರತಿ ದಿನ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ರೂ. 4,500 ರಿಂದ ರೂ.10 ಸಾವಿರಕ್ಕೆ ಏರಿಕೆ ಮಾಡಿದೆ.

ಹಳೆ ರೂ. 500, 1000 ನೋಟ್ ನಿಷೇಧಿಸಿದ ನಂತರ ಎದುರಾಗಿದ್ದ ನಗದು ಬಿಕ್ಕಟ್ಟನ್ನು ಅವಲೋಕಿಸಿದ ಆರ್‌ಬಿಐ ಎಟಿಎಂಗಳ ಮೂಲಕ ಒಂದು ದಿನಕ್ಕೆ ಹಣ ತೆಗೆಯುವ ಮಿತಿಯನ್ನು ಏರಿಕೆ ಮಾಡಿದ್ದು, ಈ ಬಗ್ಗೆ ಆರ್‌ಬಿಐ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಒಂದು ವಾರದ ಮಿತಿ ಎಷ್ಟು?

ಒಂದು ವಾರದ ಮಿತಿ ಎಷ್ಟು?

ಗ್ರಾಹಕರು ಮಂಗಳವಾರದಿಂದಲೇ ಎಟಿಎಂನಿಂದ ರೂ.10 ಸಾವಿರ ಹಣ ತೆಗೆಯಬಹುದಾಗಿದೆ. ಒಂದು ವಾರದಲ್ಲಿ ಗ್ರಾಹಕರು ಖಾತೆಯಿಂದ ತೆಗೆಯಲು ನಿಗದಿ ಪಡಿಸಿರುವ ರೂ. 24 ಸಾವಿರದ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಚಾಲ್ತಿ ಖಾತೆ ಮಿತಿ?

ಚಾಲ್ತಿ ಖಾತೆ ಮಿತಿ?

ಎಟಿಎಂ ಕೇಂದ್ರಗಳಿಂದ ಹಣ ವಿತ್ ಡ್ರಾ ಮಿತಿ ಹೆಚ್ಚಳದ ಜತೆ ಚಾಲ್ತಿ ಖಾತೆ ಹೊಂದಿರುವ ಗ್ರಾಹಕರು ಒಂದು ವಾರಕ್ಕೆ ಪಡೆಯಬಹುದಾದ ನಗದು ಮಿತಿಯನ್ನು ರೂ. 50 ಸಾವಿರದಿಂದ ರೂ. 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ವಿತ್ ಡ್ರಾ ಮಿತಿ ಪರಿಷ್ಕರಣೆ

ವಿತ್ ಡ್ರಾ ಮಿತಿ ಪರಿಷ್ಕರಣೆ

ಆರ್‌ಬಿಐ ಎಟಿಎಂ ಹಾಗು ಚಾಲ್ತಿ ಖಾತೆಗಳಿಂದ ಹಣ ಪಡೆಯಲು ಹೇರಿದ್ದ ನಿರ್ಬಂಧಗಳನ್ನು ಪರಿಷ್ಕರಿಸಿದ್ದು, ತಕ್ಷಣದಿಂದ ಹೊಸ ವಿತ್ ಡ್ರಾ ಮಿತಿಗಳು ಜಾರಿಗೆ ಬರುವಂತೆ ಸೋಮವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ನಗದು ನಿವಾರಣೆಗೆ ಕ್ರಮ

ನಗದು ನಿವಾರಣೆಗೆ ಕ್ರಮ

* ಒಂದು ದಿನಕ್ಕೆ ಎಟಿಎಂನಿಂದ ರೂ. 4,500ರಿಂದ ರೂ.10,000ಕ್ಕೆ ಹಣ ಪಡೆಯುವ ಮಿತಿಯಲ್ಲಿ ಏರಿಕೆ
* ಒಂದು ವಾರದಲ್ಲಿ ಖಾತೆಯಿಂದ 24ಸಾವಿರ ಹಣ ವಿತ್ ಡ್ರಾ ಮಾಡಬಹುದು.
* ಚಾಲ್ತಿ ಖಾತೆಯಿಂದ ರೂ. 50 ಸಾವಿರದಿಂದ 1ಲಕ್ಷ ನಗದು ತೆಗೆಯಲು ಅವಕಾಶ

ನೋಟು ರದ್ದತಿ ನಂತರದ ಇತಿಮಿತಿ

ನೋಟು ರದ್ದತಿ ನಂತರದ ಇತಿಮಿತಿ

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‌ 8ರಂದು ಹಳೆ ರೂ. 500,1000 ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿದ ನಂತರ, ಆರ್‌ಬಿಐ ದಿನವೊಂದಕ್ಕೆ ಎಟಿಎಂನಿಂದ ಹಣ ವಿತ್ ಡ್ರಾ ಮಿತಿಯನ್ನು ರೂ. 2,500ಕ್ಕೆ ನಿಗದಿ ಪಡಿಸಿತ್ತು. ನೋಟು ರದ್ದತಿ ಪ್ರಕ್ರಿಯೆಯ ಐವತ್ತು ದಿನ ಪೂರ್ಣಗೊಂಡ ಬಳಿಕ ಜನವರಿ 1ರಂದು ಈ ಮಿತಿಯನ್ನು ಪರಿಷ್ಕರಿಸಿದ್ದ ರೂ. 4,500ಕ್ಕೆ ಏರಿಸಿತ್ತು. ಇದೀಗ ರೂ. 10 ಸಾವಿರಕ್ಕೆ ಏರಿಕೆ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+